‘ನೆನಪಿರಲಿ’ ಪ್ರೇಮ್​ ಮುಂದಿನ ಚಿತ್ರಕ್ಕೆ 400 ಕೋಟಿ ರೂ. ಬಜೆಟ್​; ಹಾಲಿವುಡ್​ ಹಾದಿಯತ್ತ ‘ಲವ್ಲಿ ಸ್ಟಾರ್​’

‘ಪ್ರೇಮಂ ಪೂಜ್ಯಂ’ ಚಿತ್ರ ಮಾಡಿರುವ ತಂಡವೇ ಸೇರಿಕೊಂಡು ಮತ್ತೊಂದು ಸಿನಿಮಾ ಮಾಡಲಿದೆ. ಆ ಚಿತ್ರದಲ್ಲಿ ಪ್ರೇಮ್​ ಅವರು ವೀರ ಯೋಧನ ಪಾತ್ರ ಮಾಡಲಿದ್ದಾರೆ. ಆ ಚಿತ್ರ 400 ಕೋಟಿ ರೂ. ಬಜೆಟ್​ನಲ್ಲಿ ಮೂಡಿಬರಲಿದೆ.

‘ನೆನಪಿರಲಿ’ ಪ್ರೇಮ್​ ಮುಂದಿನ ಚಿತ್ರಕ್ಕೆ 400 ಕೋಟಿ ರೂ. ಬಜೆಟ್​; ಹಾಲಿವುಡ್​ ಹಾದಿಯತ್ತ ‘ಲವ್ಲಿ ಸ್ಟಾರ್​’
‘ನೆನಪಿರಲಿ’ ಪ್ರೇಮ್​
Follow us
TV9 Web
| Updated By: Digi Tech Desk

Updated on:Sep 23, 2021 | 12:17 PM

ನಟ ‘ನೆನಪಿರಲಿ’ ಪ್ರೇಮ್​ ಅವರು ಚಿತ್ರರಂಗಕ್ಕೆ ಕಾಲಿಟ್ಟು ಬಹಳ ವರ್ಷ ಕಳೆದಿದೆ. ಸಿನಿಮಾಗಳ ವಿಚಾರದಲ್ಲಿ ಅವರು ತುಂಬ ಚ್ಯೂಸಿ ಎಂದರೂ ತಪ್ಪಿಲ್ಲ. ಆ ಕಾರಣಕ್ಕಾಗಿ ಅವರ ಖಾತೆಯಲ್ಲಿನ ಚಿತ್ರಗಳ ಸಂಖ್ಯೆ ಈಗಿನ್ನೂ 25ರ ಗಡಿ ಮುಟ್ಟಿದೆ. ಅವರು ನಟಿಸುತ್ತಿರುವ 25ನೇ ಸಿನಿಮಾ ‘ಪ್ರೇಮಂ ಪೂಜ್ಯಂ’ ರಿಲೀಸ್​ಗೆ ಸಿದ್ಧವಾಗುತ್ತಿದೆ. ಈ ನಡುವೆ ಅವರ ಮುಂದಿನ ಸಿನಿಮಾ ಬಗ್ಗೆ ಭರ್ಜರಿ ಸುದ್ದಿ ಹೊರಬಿದ್ದಿದೆ. ಪ್ರೇಮ್​ ನಟಿಸಲಿರುವ ಹೊಸ ಚಿತ್ರ ಬರೋಬ್ಬರಿ 400 ಕೋಟಿ ರೂ. ಬಜೆಟ್​ನಲ್ಲಿ ಮೂಡಿಬರಲಿದೆ ಎಂಬುದು ಅಚ್ಚರಿಯ ವಿಚಾರ. ‘ಪ್ರೇಮಂ ಪೂಜ್ಯಂ’ ಚಿತ್ರ ಮಾಡಿರುವ ತಂಡವೇ ಸೇರಿಕೊಂಡು ಮತ್ತೊಂದು ಸಿನಿಮಾ ಮಾಡಲಿದೆ. ಆ ಚಿತ್ರದಲ್ಲಿ ಪ್ರೇಮ್​ ಅವರು ಯೋಧನ ಪಾತ್ರ ಮಾಡಲಿದ್ದಾರೆ. ಆ ಚಿತ್ರ 400 ಕೋಟಿ ರೂ. ಬಜೆಟ್​ನಲ್ಲಿ ಮೂಡಿಬರಲಿದೆ. ‘ಪ್ರೇಮಂ ಪೂಜ್ಯಂ’ ನಿರ್ದೇಶಕ ಡಾ. ರಾಘವೇಂದ್ರ ಅವರೇ ಪ್ರೇಮ್​ ಮುಂದಿನ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳಲಿದ್ದಾರೆ. ಅದಕ್ಕಾಗಿ ಈಗಾಗಲೇ ಸ್ಕ್ರಿಪ್ಟ್​ ಕೂಡ ಸಿದ್ಧವಾಗಿದೆ. ಅಂತಾರಾಷ್ಟ್ರೀಯ​ ಮಟ್ಟದಲ್ಲಿ ಈ ಚಿತ್ರ ಮೂಡಿಬರಲಿದ್ದು, ಹಾಲಿವುಡ್​ ಸ್ಟುಡಿಯೋಗಳ ಜೊತೆ ಚಿತ್ರತಂಡ ಕೈ ಜೋಡಿಸಲಿದೆ.

ಸದ್ಯಕ್ಕೆ 400 ಕೋಟಿ ರೂ. ಬಜೆಟ್​ ಎಂದು ಅಂದಾಜಿಸಲಾಗಿದೆ. ಆದರೆ ಅದು 450 ಕೋಟಿ ರೂ. ದಾಟಿದರೂ ದಾಟಬಹುದು ಎಂದು ಚಿತ್ರತಂಡ ಹೇಳಿಕೊಂಡಿದೆ. ಕನ್ನಡ ಸಿನಿಮಾವನ್ನು ಜಾಗತಿಕ ಮಟ್ಟದಲ್ಲಿ ಮಿಂಚುವ ರೀತಿಯಲ್ಲಿ ಈ ಪ್ರಯತ್ನ ಮಾಡಲಾಗುವುದು. ಹಲವು ಭಾಷೆಗಳಿಗೆ ಡಬ್​ ಮಾಡಿ ಈ ಚಿತ್ರವನ್ನು ಬಿಡುಗಡೆ ಮಾಡಲು ತಂಡ ಪ್ಲ್ಯಾನ್​ ಮಾಡಿಕೊಂಡಿದೆ.

ಅಕ್ಟೋಬರ್​ ಕೊನೇ ವಾರದಲ್ಲಿ ಪ್ರೇಮಂ ಪೂಜ್ಯಂ ಸಿನಿಮಾ ಬಿಡುಗಡೆ ಆಗಲಿದೆ. ಈ ಚಿತ್ರದಲ್ಲಿ ಪ್ರೇಮ್​ ಜೊತೆ ಬೃಂದಾ ಆಚಾರ್ಯಾ, ಐಂದ್ರಿತಾ ರೇ ಮುಂತಾದವರು ನಟಿಸಿದ್ದಾರೆ. ಈ ಸಿನಿಮಾ ರಿಲೀಸ್​ ಆದ ಬಳಿಕ ಪ್ರೇಮ್ ಅವರು ವಿದೇಶಕ್ಕೆ ತೆರಳಿ ಹೊಸ ಚಿತ್ರಕ್ಕಾಗಿ ಒಂದಷ್ಟು ತರಬೇತಿ ಪಡೆದುಕೊಳ್ಳಲಿದ್ದಾರೆ. ನಿರ್ದೇಶಕ ಡಾ. ರಾಘವೇಂದ್ರ ಮತ್ತು ನಟ ಪ್ರೇಮ್​ ಜೊತೆ ಹಾಲಿವುಡ್​ನ ಅನೇಕ ತಂತ್ರಜ್ಞರು ಮತ್ತು ಕಲಾವಿದರು ಈ ಪ್ರಾಜೆಕ್ಟ್​ಗಾಗಿ ಕೆಲಸ ಮಾಡಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ‘ಪ್ರೇಮಂ ಪೂಜ್ಯಂ’ ತಂಡ ಈ ವಿಚಾರವನ್ನು ಹಂಚಿಕೊಂಡಿದೆ.

ಇದನ್ನೂ ಓದಿ:

ಹಾಲಿವುಡ್​ಗೆ ಹಾರಲಿದ್ದಾರೆ ಪ್ರಭಾಸ್​? ಹಾರರ್​ ಕಥೆಯಲ್ಲಿ ಸಲಾರ್​ ಹೀರೋ

ಬಾಲಿವುಡ್ ಅಥವಾ ಹಾಲಿವುಡ್- ನಿಮ್ಮ ಆಯ್ಕೆ ಯಾವುದು ಎಂಬ ಪ್ರಶ್ನೆಗೆ ಮುಖ ತಿರುಗಿಸಿಕೊಂಡು ನಡೆದ ಪ್ರಿಯಾಂಕ

Published On - 9:41 am, Thu, 23 September 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ