ಮಿತಿ ಮೀರಿತಾ ಮಾದಕತೆ? ನಟಿ ನೋರಾ ಫತೇಹಿ ಡ್ರೆಸ್​ ನೋಡಿ ಕ್ಲಾಸ್​ ತೆಗೆದುಕೊಂಡ ನೆಟ್ಟಿಗರು

ಕೆಲವರಿಗೆ ನೋರಾ ಫತೇಹಿ ಅವರ ಈ ಅವತಾರ ಸಖತ್​ ಇಷ್ಟ ಆಗಿದೆ. ಅಂಥವರೆಲ್ಲ ಭಾರಿ ಮೆಚ್ಚುಗೆ ಸೂಚಿಸಿ ಕಮೆಂಟ್ ಮಾಡುತ್ತಿದ್ದಾರೆ. ಆದರೆ ಇನ್ನೊಂದು ವರ್ಗದ ನೆಟ್ಟಿಗರು ಹಿಗ್ಗಾಮುಗ್ಗ ಕ್ಲಾಸ್​ ತೆಗೆದುಕೊಳ್ಳುತ್ತಿದ್ದಾರೆ.

ಮಿತಿ ಮೀರಿತಾ ಮಾದಕತೆ? ನಟಿ ನೋರಾ ಫತೇಹಿ ಡ್ರೆಸ್​ ನೋಡಿ ಕ್ಲಾಸ್​ ತೆಗೆದುಕೊಂಡ ನೆಟ್ಟಿಗರು
ಮಿತಿ ಮೀರಿತಾ ಮಾದಕತೆ? ನಟಿ ನೋರಾ ಫತೇಹಿ ಡ್ರೆಸ್​ ನೋಡಿ ಕ್ಲಾಸ್​ ತೆಗೆದುಕೊಂಡ ನೆಟ್ಟಿಗರು
Follow us
TV9 Web
| Updated By: ಮದನ್​ ಕುಮಾರ್​

Updated on: Sep 28, 2021 | 3:26 PM

ನಟಿ ನೋರಾ ಫತೇಹಿ ಅವರಿಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಅವರ ಡ್ಯಾನ್ಸ್​ ನೋಡಿ ಮರುಳಾಗದವರೇ ಇಲ್ಲ. ಇನ್ನು, ಅವರ ಮೈಮಾಟ ಕಂಡು ಪಡ್ಡೆಗಳು ನಿದ್ದೆ ಕೆಡಿಸಿಕೊಂಡಿದ್ದಾರೆ. ಹಾಟ್​ ಅವತಾರದ ಕಾಸ್ಟ್ಯೂಮ್​ ಧರಿಸಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ನೋರಾ ಫತೇಹಿಗೆ ದೊಡ್ಡ ವಿಷಯವೇ ಅಲ್ಲ. ಆದರೆ ಈ ಬಾರಿ ಅವರು ಧರಿಸಿರುವ ಒಂದು ಡ್ರೆಸ್​ನಿಂದಾಗಿ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸುವಂತಾಗಿದೆ. ಕಮೆಂಟ್​ಗಳ ಮೂಲಕ ಜನರು ಕಟು ಟೀಕೆ ಮಾಡುತ್ತಿದ್ದಾರೆ. ಹಾಟ್​ ಬೆಡಗಿಯನ್ನು ಮನಬಂದಂತೆ ಟ್ರೋಲ್​ ಮಾಡಲಾಗುತ್ತಿದೆ.

ಇತ್ತೀಚೆಗೆ ನಡೆದ ಒಂದು ಫ್ಯಾಷನ್​ ಶೋನಲ್ಲಿ ನೋರಾ ಫತೇಹಿ ಭಾಗವಹಿಸಿದ್ದರು. ಅದಕ್ಕಾಗಿ ಅವರು ಆಯ್ಕೆ ಮಾಡಿಕೊಂಡಿದ್ದ ಬಟ್ಟೆ ತುಂಬ ಬೋಲ್ಡ್​​ ಆಗಿತ್ತು. ಎದೆ ಭಾಗ ಹೆಚ್ಚು ಕಾಣುವಂತಹ ಕಾಸ್ಟ್ಯೂಮ್​ ಧರಿಸಿ ಅವರು ಕ್ಯಾಟ್​ ವಾಕ್​ ಮಾಡಿದರು. ಅಲ್ಲದೇ ಆ ಫೋಟೋಗಳನ್ನು ತಮ್ಮ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡು ಸುಮ್ಮನಾದರು. ಆದರೆ ಅದನ್ನು ನೋಡಿದ ಅಭಿಮಾನಿಗಳು ಸುಮ್ಮನಾಗಿಲ್ಲ. ಕೆಲವರಿಗೆ ಈ ಅವತಾರ ಸಖತ್​ ಇಷ್ಟ ಆಗಿದೆ. ಭಾರಿ ಮೆಚ್ಚುಗೆ ಸೂಚಿಸಿ ಕಮೆಂಟ್ ಮಾಡುತ್ತಿದ್ದಾರೆ. ಆದರೆ ಇನ್ನೊಂದು ವರ್ಗದ ನೆಟ್ಟಿಗರು ಹಿಗ್ಗಾಮುಗ್ಗ ಕ್ಲಾಸ್​ ತೆಗೆದುಕೊಳ್ಳುತ್ತಿದ್ದಾರೆ.

‘ಟೇಲರ್​ಗೆ ನೋರಾ ಪೂರ್ತಿ ಬಟ್ಟೆ ಕೊಟ್ಟಿದ್ದರೆ ಅವನು ಸರಿಯಾಗಿ ಹೊಲಿದು ಕೊಡುತ್ತಿದ್ದ. ಈ ರೀತಿ ಖಾಲಿ ಬಿಡುತ್ತಿರಲಿಲ್ಲ’ ಎಂದು ನೆಟ್ಟಿಗರೊಬ್ಬರು ಕಾಲೆಳೆದಿದ್ದಾರೆ. ಇನ್ನೂ ಕೆಲವರಂತೂ ತುಂಬ ಖಾರವಾಗಿ ಕಮೆಂಟ್​ ಮಾಡಿದ್ದಾರೆ. ‘ಬಟ್ಟೆ ಹಾಕಿಕೊಳ್ಳದೇ ಬಂದಿದ್ದರೆ ನಿಮಗೆ ಹೆಚ್ಚು ಲೈಕ್ಸ್​ ಸಿಗುತ್ತಿತ್ತು’ ಎಂದು ವ್ಯಂಗ್ಯ ಮಾಡಲಾಗಿದೆ. ‘ಮರ್ಯಾದೆ ಎಂದರೆ ಏನೆಂದು ತಿಳಿದುಕೊಳ್ಳಿ’ ಎಂದು ಜನರು ಗರಂ ಆಗಿದ್ದಾರೆ. ಸದ್ಯಕ್ಕಂತೂ ಅವರು ಫೋಟೋಗಳು ಸಿಕ್ಕಾಪಟ್ಟೆ ವೈರಲ್​ ಆಗುತ್ತಿವೆ.

ಇದಕ್ಕೆಲ್ಲ ನೋರಾ ಫತೇಹಿ ತಲೆ ಕೆಡಿಸಿಕೊಂಡಿಲ್ಲ. ಅವರು ತಮ್ಮ ಕೆಲಸದ ಕಡೆಗೆ ಗಮನ ಹರಿಸಿದ್ದಾರೆ. ಬಾಲಿವುಡ್​ ಐಟಂ ಡ್ಯಾನ್ಸ್​ ಜಗತ್ತಿನಲ್ಲಿ ಅವರೀಗ ನಂಬರ್​ ಒನ್​ ಆಗಿ ಮಿಂಚುತ್ತಿದ್ದಾರೆ. ‘ಓ ಸಾಕಿ..’, ‘ದಿಲ್​ ಬರ್​ ದಿಲ್​ ಬರ್​..’, ‘ಹಾಯ್​ ಗರ್ಮಿ..’ ಮುಂತಾದ ಹಾಡುಗಳ ಯಶಸ್ಸಿನಿಂದಾಗಿ ಅವರು ಕೋಟ್ಯಂತರ ಅಭಿಮಾನಿಗಳು ಸಂಪಾದಿಸಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ ಅವರನ್ನು ಮೂರು ಕೋಟಿಗೂ ಅಧಿಕ ಜನರು ಫಾಲೋ ಮಾಡುತ್ತಿದ್ದಾರೆ.

ಇದನ್ನೂ ಓದಿ:

ನೋರಾ ಫತೇಹಿ ಡ್ರೆಸ್​ ನೋಡಿ ಅಚ್ಚರಿಗೊಂಡ ಫ್ಯಾನ್ಸ್​; ಇಲ್ಲಿವೆ ಫೋಟೋಗಳು

ಹಿಂದಿ ಭಾಷಿಕರಿಂದ ಅವಮಾನಕ್ಕೆ ಒಳಗಾಗಿ ಕಣ್ಣೀರು ಹಾಕಿದ್ದ ಈ ನಟಿ ಇಂದು ಬಾಲಿವುಡ್​ನ ಸ್ಟಾರ್​ ಕಲಾವಿದೆ!

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್