ರಣಬೀರ್ ಕಪೂರ್ ಹುಟ್ಟುಹಬ್ಬ: ಆಲಿಯಾ ಭಟ್ ಜೊತೆ ಮದುವೆಗೆ ಜೋರಾಗಿದೆ ತಯಾರಿ
ಶೀಘ್ರದಲ್ಲೇ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಹಸೆಮಣೆ ಏರಲಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಈ ಜೋಡಿ ಈಗ ತಮ್ಮ ಮದುವೆಗೆ ಸೂಕ್ತ ಆಗುವಂತಹ ಲೊಕೇಷನ್ಗಾಗಿ ಹುಡುಕಾಟ ನಡೆಸಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ಬಾಲಿವುಡ್ನ ಹ್ಯಾಂಡ್ಸಮ್ ನಟ ರಣಬೀರ್ ಕಪೂರ್ ಅವರು ಇಂದು (ಸೆ.28) ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. 39ನೇ ವಸಂತಕ್ಕೆ ಕಾಲಿಟ್ಟಿರುವ ಅವರಿಗೆ ಅಭಿಮಾನಿಗಳು, ಆಪ್ತರು, ಕುಟುಂಬದವರು ಮತ್ತು ಅನೇಕ ಸೆಲೆಬ್ರಿಟಿಗಳು ವಿಶ್ ಮಾಡುತ್ತಿದ್ದಾರೆ. ಸಿನಿಮಾ ವಿಚಾರದಲ್ಲಿ ಸಖತ್ ಚ್ಯೂಸಿ ಆಗಿರುವ ರಣಬೀರ್ ಅವರ ಮುಂದಿನ ಚಿತ್ರಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಈ ನಡುವೆ ಅವರ ಖಾಸಗಿ ಜೀವನದ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿದೆ. ನಟಿ ಆಲಿಯಾ ಭಟ್ ಜೊತೆ ರಣಬೀರ್ ಡೇಟಿಂಗ್ ಮಾಡುತ್ತಿರುವ ವಿಷಯ ಗುಟ್ಟಾಗಿ ಉಳಿದಿಲ್ಲ. ಈಗ ಅವರು ಮದುವೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ.
ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಕೈಯಲ್ಲಿ ಹಲವು ಸಿನಿಮಾಗಳಿವೆ. ಆ ಎಲ್ಲ ಚಿತ್ರದ ಕೆಲಸಗಳಿಗೆ ಬ್ರೇಕ್ ನೀಡಿರುವ ಈ ಜೋಡಿ ಜೋಧ್ಪುರದ ಕಡೆಗೆ ಪ್ರಯಾಣ ಬೆಳೆಸಿದೆ. ಪ್ರಿಯಕರನ ಜನ್ಮದಿನವನ್ನು ಆಪ್ತವಾಗಿ ಸೆಲೆಬ್ರೇಟ್ ಮಾಡಲು ಆಲಿಯಾ ಭಟ್ ಪ್ಲ್ಯಾನ್ ಮಾಡಿದ್ದಾರೆ. ಅದಕ್ಕಾಗಿ ಅವರು ಮುಂಬೈ ಬಿಟ್ಟು ಜೋಧ್ಪುರಕ್ಕೆ ಬಂದಿದ್ದಾರೆ. ಆದರೆ ಅದರ ಜೊತೆಗೆ ಇನ್ನೊಂದು ಗಾಸಿಪ್ ಕೂಡ ಕೇಳಿಬರುತ್ತಿದೆ. ಅವರು ಜೋಧ್ಪುರಕ್ಕೆ ಬಂದಿರುವುದರ ಹಿಂದೆ ಇನ್ನೊಂದು ಮುಖ್ಯ ಉದ್ದೇಶ ಇದೆ ಎನ್ನಲಾಗಿದೆ.
ಶೀಘ್ರದಲ್ಲೇ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಹಸೆಮಣೆ ಏರಲಿದ್ದಾರೆ. ಅದಕ್ಕಾಗಿ ಈಗಲೇ ತಯಾರಿ ನಡೆಯುತ್ತಿದೆ ಎಂಬ ಮಾತು ಕೇಳಿಬಂದಿದೆ. ಅದಕ್ಕೆ ಸಾಕ್ಷಿ ಎಂಬಂತೆ ಈ ಜೋಡಿ ಈಗ ತಮ್ಮ ಮದುವೆಗೆ ಸೂಕ್ತ ಆಗುವಂತಹ ಲೊಕೇಷನ್ಗಾಗಿ ಹುಡುಕಾಟ ನಡೆಸಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಮದುವೆಗಾಗಿ ಸೂಕ್ತ ಜಾಗವನ್ನು ಆಯ್ಕೆ ಮಾಡುವ ಸಲುವಾಗಿಯೇ ಅವರು ಈಗ ಜೋಧ್ಪುರದಲ್ಲಿ ವಾಸ್ತವ್ಯ ಹೂಡಿದ್ದಾರೆ ಎನ್ನುತ್ತಿವೆ ಮೂಲಗಳು.
ಚಾರ್ಟರ್ಡ್ ಫ್ಲೈಟ್ ಮೂಲಕ ಜೋಧ್ಪುರಕ್ಕೆ ಬಂದ ಈ ಜೋಡಿ ಏರ್ಪೋರ್ಟ್ನಲ್ಲಿ ಮಾಧ್ಯಮ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡಿದೆ. ಕ್ಯಾಶ್ಯುವಲ್ ಡ್ರೆಸ್ ಧರಿಸಿದ್ದ ಇಬ್ಬರೂ ಮದುವೆ ಲೊಕೇಷನ್ ನಿರ್ಧರಿಸಲು ಬಂದಿದ್ದಾರೆ ಎಂಬ ಗುಸುಗುಸು ಹಬ್ಬಿದೆ. ಆದರೆ ಈ ವಿಚಾರದ ಬಗ್ಗೆ ಅವರ ಕುಟುಂಬದವರು ಏನನ್ನೂ ಹೇಳಿಕೊಂಡಿಲ್ಲ. ಒಂದು ವೇಳೆ ಲಾಕ್ಡೌನ್ ಇಲ್ಲದೇ ಇದ್ದಿದ್ದರೆ ಇಷ್ಟು ಹೊತ್ತಿಗಾಗಲೇ ತಮ್ಮ ಮದುವೆ ಆಗಿರುತ್ತಿತ್ತು ಎಂದು ರಣಬೀರ್ ಕಪೂರ್ ಅವರು ಈ ಹಿಂದಿನ ಸಂದರ್ಶನವೊಂದರಲ್ಲಿ ಬಾಯಿಬಿಟ್ಟಿದ್ದರು. ಸದ್ಯ ಕೊರೊನಾ ಪ್ರಕರಣಗಳ ಸಂಖ್ಯೆ ತಗ್ಗಿರುವುದರಿಂದ ಈ ಸಮಯದಲ್ಲೇ ಮದುವೆಗೆ ತಯಾರಿ ನಡೆಸಲಾಗುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ಇದನ್ನೂ ಓದಿ:
ರಣವೀರ್ ಸಿಂಗ್-ಆಲಿಯಾ ಭಟ್ ಹೊಸ ಪ್ರೇಮ್ ಕಹಾನಿ; ಇದರ ಸೂತ್ರಧಾರ ಕರಣ್ ಜೋಹರ್
ಮತ್ತೆ ಮತ್ತೆ ಆಲಿಯಾ ಭಟ್ ಬೇಕು ಎಂದು ಬಯಸಿದ ರಾಮ್ ಚರಣ್; ಏನಿದು ವಿಷ್ಯ?