Updated on: Sep 28, 2021 | 12:04 PM
‘ಕ್ವೀನ್ ಆಫ್ ಮೆಲೋಡಿ’, ‘ನೈಟಿಂಗೇಲ್ ಆಫ್ ನಾರ್ಥ್ ಇಂಡಿಯಾ’ ಮೊದಲಾದ ಬಿರುದಗಳಿಂದ ಕರೆಯಲ್ಪಡುವ ಭಾರತದ ಹೆಮ್ಮೆಯ ಗಾಯಕಿ ಲತಾ ಮಂಗೇಶ್ಕರ್ ಜನ್ಮದಿನವಿಂದು.
1929ರ ಸೆಪ್ಟೆಂಬರ್ 28ರಂದು ಜನಿಸಿದ ಅವರು, ಇಂದು 92ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. (ಚಿತ್ರದಲ್ಲಿ ಖ್ಯಾತ ಗಾಯಕ ಸೋನು ನಿಗಮ್ ಜೊತೆಯಲ್ಲಿ ಲತಾ ಮಂಗೇಶ್ಕರ್)
ಲತಾ ಮಂಗೇಶ್ಕರ್ ಇದುವರೆಗೆ ಸುಮಾರು 1,000ಕ್ಕೂ ಹೆಚ್ಚು ಹಿಂದಿ ಚಿತ್ರಗಳಿಗೆ ಹಾಡಿದ್ದಾರೆ.
ಭಾರತ ಮತ್ತು ವಿದೇಶದ ಹಲವು ಭಾಷೆಗಳು ಸೇರಿ ಒಟ್ಟು 36 ಕ್ಕೂ ಅಧಿಕ ಭಾಷೆಗಳಲ್ಲಿ ಹಾಡಿದ ಕೀರ್ತಿ ಲತಾ ಮಂಗೇಶ್ಕರ್ ಅವರದ್ದು.
ಲತಾ ಮಂಗೇಶ್ಕರ್ ಮುಖ್ಯವಾಗಿ ಹಾಡಿರುವುದು ಹಿಂದಿ, ಉರ್ದು, ಬಂಗಾಳಿ ಹಾಗೂ ಮರಾಠಿ ಭಾಷೆಗಳಲ್ಲಿ.
ಲತಾ ಮಂಗೇಶ್ಕರ್ 2001ರಲ್ಲಿ ‘ಭಾರತ ರತ್ನ’ ಪ್ರಶಸ್ತಿಗೆ ಭಾಜನರಾದರು.
ಎಂ.ಎಸ್.ಸುಬ್ಬಲಕ್ಷ್ಮಿಯವರ ನಂತರ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಭಾರತ ರತ್ನ’ ಪಡೆದ ಹಾಡುಗಾರರೆಂದರೆ ಅದು ಲತಾ ಮಂಗೇಶ್ಕರ್.
ಲತಾ ಅವರಿಗೆ ಪದ್ಮ ಭೂಷಣ, ಪದ್ಮ ವಿಭೂಷಣ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗಳೂ ಸಂದಿವೆ.
ಅಮಿತಾಭ್ ಬಚ್ಚನ್ ಜೊತೆ ವೇದಿಕೆ ಹಂಚಿಕೊಂಡಿರುವ ಲತಾ ಮಂಗೇಶ್ಕರ್
1967ರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರದಲ್ಲಿ ಲತಾ ಅವರು ಹಾಡಿದ್ದರು.
ಸುನೀಲ್ ದತ್ ಅವರೊಂದಿಗೆ ಲತಾ ಮಂಗೇಶ್ಕರ್