ಮನೆಯ ಸಮೀಪ ಮರ ಗಿಡಗಳು ಇರುವಂತೆ ನೋಡಿಕೊಳ್ಳಬೇಕು. ಅಲ್ಲದೆ, ಮನೆಯ ವಿದ್ಯುತ್ ಉಪಕರಣಗಳ ಬಗ್ಗೆ ಗಮನ ಹರಿಸುವುದು ಕೂಡ ಉತ್ತಮ. ಉದಾಹರಣೆಗೆ, ಎಲೆಕ್ಟ್ರಿಕ್ ಬಲ್ಬ್ ಬದಲಾಗಿ, ಎಲ್ಇಡಿ ಅಳವಡಿಸುವುದು ಒಳ್ಳೆಯದು. ಅದು ಕಡಿಮೆ ವಿದ್ಯುತ್ ಬಳಸುತ್ತದೆ. ಇತ್ತೀಚೆಗೆ ಸೆನ್ಸಾರ್ ಲೈಟ್ಗಳು ಕೂಡ ಬಂದಿವೆ. ಅಂದರೆ, ನಿಗದಿತ ಪ್ರಮಾಣದ ಬೆಳಕು ಇದ್ದಾಗ ಅದು ತಾನಾಗಿಯೇ ಆಫ್ ಆಗುತ್ತದೆ.