ಟಿ20 ವಿಶ್ವಕಪ್​ಗೆ ಆಯ್ಕೆ.. ಐಪಿಎಲ್‌ನಲ್ಲಿ ಫ್ಲಾಫ್! ಟೀಂ ಇಂಡಿಯಾಗೆ ತಲೆನೋವಾದ ಮುಂಬೈ ಆಟಗಾರರು

T20 World Cup: ಮುಖ್ಯ ತಂಡದಲ್ಲಿ ಆಯ್ಕೆಯಾದ ಆಟಗಾರರು ಐಪಿಎಲ್ 2021 ರಲ್ಲಿ ವಿಫಲರಾಗುತ್ತಿದ್ದಾರೆ. ಈ ಕಾರಣದಿಂದಾಗಿ, ಟಿ 20 ವಿಶ್ವಕಪ್‌ನಲ್ಲಿ ಭಾರತದ ಪ್ರದರ್ಶನದ ಬಗ್ಗೆ ಆತಂಕ ಹೆಚ್ಚುತ್ತಿದೆ.

1/5
ಟಿ 20 ವಿಶ್ವಕಪ್‌ಗಾಗಿ ಭಾರತ ತನ್ನ ತಂಡವನ್ನು ಪ್ರಕಟಿಸಿದೆ. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ 15 ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಅಲ್ಲದೆ, ಮೂವರು ಆಟಗಾರರನ್ನು ಮೀಸಲು ಇಡಲಾಗಿದೆ. ಆದರೆ ಮುಖ್ಯ ತಂಡದಲ್ಲಿ ಆಯ್ಕೆಯಾದ ಆಟಗಾರರು ಐಪಿಎಲ್ 2021 ರಲ್ಲಿ ವಿಫಲರಾಗುತ್ತಿದ್ದಾರೆ. ಈ ಕಾರಣದಿಂದಾಗಿ, ಟಿ 20 ವಿಶ್ವಕಪ್‌ನಲ್ಲಿ ಭಾರತದ ಪ್ರದರ್ಶನದ ಬಗ್ಗೆ ಆತಂಕ ಹೆಚ್ಚುತ್ತಿದೆ. ಸಮಸ್ಯೆಯೆಂದರೆ ವಿಫಲಗೊಳ್ಳುತ್ತಿರುವ ಕ್ರಿಕೆಟಿಗರು ಕೇವಲ ಒಬ್ಬ ಅಥವಾ ಇಬ್ಬರಲ್ಲ ನಾಲ್ಕು ಆಟಗಾರರು. ಇಂತಹ ಪರಿಸ್ಥಿತಿಯಲ್ಲಿ, ತಂಡದಲ್ಲಿ ಬದಲಾವಣೆಗೆ ಬೇಡಿಕೆ ಇದೆ. ಜೊತೆಗೆ ಅವಸರದಲ್ಲಿ ತಂಡವನ್ನು ಆಯ್ಕೆ ಮಾಡಿದ ಆರೋಪಗಳಿವೆ. ಕುತೂಹಲಕಾರಿ ಸಂಗತಿಯೆಂದರೆ, ಈಗ ಉತ್ತಮ ಪ್ರದರ್ಶನ ನೀಡಲು ವಿಫಲರಾಗುತ್ತಿರುವ ಎಲ್ಲಾ ಆಟಗಾರರು, ತಂಡದ ಆಯ್ಕೆಗೂ ಮುಂಚೆ ಅವರೆಲ್ಲರೂ ಉತ್ತಮವಾಗಿ ಆಡುತ್ತಿದ್ದರು. ಇವರೆಲ್ಲರೂ ರೋಹಿತ್ ಶರ್ಮಾ ಅವರ ಸಹಚರರು ಅಂದರೆ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುತ್ತಾರೆ.

2/5
ಈ ಪಟ್ಟಿಯಲ್ಲಿ ಅತ್ಯಂತ ಆತಂಕಕಾರಿ ಹೆಸರು ಹಾರ್ದಿಕ್ ಪಾಂಡ್ಯ ಅವರದ್ದು. ಅವರು ಐಪಿಎಲ್ 2021 ರಲ್ಲಿ ಮುಂಬೈ ಇಂಡಿಯನ್ಸ್ ಪರ ಎಂಟು ಪಂದ್ಯಗಳನ್ನು ಆಡಿದ್ದಾರೆ ಮತ್ತು ಕೇವಲ 55 ರನ್ ಗಳಿಸಿದ್ದಾರೆ. ಅವರ ರನ್-ಸ್ಕೋರಿಂಗ್ ಸರಾಸರಿ 7.85 ಮತ್ತು ಸ್ಟ್ರೈಕ್ ರೇಟ್ 110. ಈ ಋತುವಿನಲ್ಲಿ ಅವರು ಕೇವಲ ಐದು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳನ್ನು ಹೊಡೆದಿದ್ದಾರೆ. ಆತ ಬೌಲಿಂಗ್ ಕೂಡ ಮಾಡಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಟಿ 20 ವಿಶ್ವಕಪ್ ಮೊದಲು ಇಂತಹ ಪ್ರದರ್ಶನವು ಭಾರತಕ್ಕೆ ಕೆಟ್ಟ ಸುದ್ದಿಯಾಗಿದೆ. ಇದರ ಹೊರತಾಗಿ ಇತ್ತೀಚೆಗೆ ಹಾರ್ದಿಕ್ ಕೂಡ ಗಾಯಗೊಂಡಿದ್ದರು.

3/5
ಹಾರ್ದಿಕ್ ಪಾಂಡ್ಯ ಹೊರತಾಗಿ, ಇಶಾನ್ ಕಿಶನ್ ಫಾರ್ಮ್ ಕೂಡ ಭಾರತದ ಕಾಳಜಿಯನ್ನು ಹೆಚ್ಚಿಸಲಿದೆ. ಅವರು ಐಪಿಎಲ್ 2021 ರಲ್ಲಿ ಎಂಟು ಪಂದ್ಯಗಳಲ್ಲಿ ಆಡಿದ್ದಾರೆ ಮತ್ತು ಕೇವಲ 107 ರನ್ ಗಳಿಸಿದ್ದಾರೆ. 28 ರನ್ ಅವರ ಅತ್ಯಧಿಕ ಸ್ಕೋರ್ ಆಗಿದೆ. ಅವರ ಸ್ಟ್ರೈಕ್ ರೇಟ್ 86.99, ಇದು ಟಿ 20 ಕ್ರಿಕೆಟ್ ವಿಷಯದಲ್ಲಿ ನಿರಾಶಾದಾಯಕವಾಗಿದೆ. ಕಳೆದ ಋತುವಿನಲ್ಲಿ, ಇಶಾನ್ ಕಿಶನ್ 500 ಕ್ಕೂ ಹೆಚ್ಚು ರನ್ ಮತ್ತು 30 ಸಿಕ್ಸರ್‌ಗಳನ್ನು ಬಾರಿಸಿದ್ದರು. ಅದೇ ಸಮಯದಲ್ಲಿ, ಈ ಋತುವಿನಲ್ಲಿ, ಅವರು ಕೇವಲ ಮೂರು ಸಿಕ್ಸರ್‌ಗಳನ್ನು ಹೊಡೆದಿದ್ದಾರೆ. ಕಿಶನ್ ರಿಸರ್ವ್ ಓಪನರ್ ಹಾಗೂ ಮಧ್ಯಮ ಕ್ರಮಾಂಕದ ಆಯ್ಕೆಯಾಗಿ ಇರಿಸಲಾಗಿದೆ. ಶಿಖರ್ ಧವನ್​ಗಿಂತ ಅವರಿಗೆ ಆದ್ಯತೆ ನೀಡಲಾಯಿತು. ಈಗ ಧವನ್ ಐಪಿಎಲ್ 2021 ರಲ್ಲಿ ಸುಮಾರು 400 ರನ್ ಗಳಿಸಿದ್ದಾರೆ.

4/5
ಮುಂಬೈ ಇಂಡಿಯನ್ಸ್​ನ ಇನ್ನೊಬ್ಬ ಆಟಗಾರ ಸೂರ್ಯಕುಮಾರ್ ಯಾದವ್ ಸ್ಥಿತಿ ಐಪಿಎಲ್ 2021 ರಲ್ಲೂ ಕೆಟ್ಟದಾಗಿದೆ. ಅವರು ಈ ಋತುವಿನಲ್ಲಿ 10 ಪಂದ್ಯಗಳನ್ನು ಆಡಿದ್ದಾರೆ ಮತ್ತು 189 ರನ್ ಗಳಿಸಿದ್ದಾರೆ. ಅವರು ಕೇವಲ ಒಂದು ಅರ್ಧಶತಕ ಮತ್ತು 56 ರನ್ ಗಳಿಸಿದ್ದು ಅವರ ಗರಿಷ್ಠ ಸ್ಕೋರ್. ಅವರ ಸ್ಟ್ರೈಕ್ ರೇಟ್ 129.45 ಆಗಿದ್ದು ಇದು ಅವರ ಆಟದ ಪ್ರಕಾರ ತೀರ ಕಡಿಮೆಯಾಗಿದೆ. ಈ ವರ್ಷ ಸೂರ್ಯ ತನ್ನ ಟಿ 20 ಹಾಗೂ ಏಕದಿನ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದರು.

5/5
ರಾಹುಲ್ ಚಹರ್ ಅವರ ಇತ್ತೀಚಿನ ಫಾರ್ಮ್ ಕೂಡ ಉತ್ತಮವಾಗಿಲ್ಲ. ಅವರು ಐಪಿಎಲ್ 2021 ರಲ್ಲಿ 10 ಪಂದ್ಯಗಳನ್ನು ಆಡಿದ್ದಾರೆ ಮತ್ತು 12 ವಿಕೆಟ್ ಪಡೆದಿದ್ದಾರೆ. ಆದರೆ ಐಪಿಎಲ್ 2021 ರ ದ್ವಿತೀಯಾರ್ಧದ ಮೂರು ಪಂದ್ಯಗಳಲ್ಲಿ ಅವರು ಕೇವಲ ಒಂದು ವಿಕೆಟ್ ಪಡೆಯಲು ಸಾಧ್ಯವಾಯಿತು. ಈ ಸಮಯದಲ್ಲಿ ಅವರ ಪ್ರದರ್ಶನ ಹೀಗಿತ್ತು- 0/22, 0/34 ಮತ್ತು 1/33. ಯುಜವೇಂದ್ರ ಚಾಹಲ್‌ಗಿಂತ ಚಹರ್‌ಗೆ ಆದ್ಯತೆ ನೀಡಲಾಯಿತು. ಈಗ ಚಹಲ್ ಅದ್ಭುತವಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಚಹರ್​ಗೆ ಆ ಪ್ರದರ್ಶನ ತೋರಿಸಲು ಸಾಧ್ಯವಾಗುತ್ತಿಲ್ಲ.

Click on your DTH Provider to Add TV9 Kannada