ಕೆಜಿಎಫ್​ ಬೆಡಗಿಗೆ ಶೀಘ್ರವೇ ಮದುವೆ; ಬಾಯ್​ಫ್ರೆಂಡ್​ ಜತೆ ಇಟಲಿಯಲ್ಲಿ ವಿವಾಹ?

ಮೌನಿ ರಾಯ್​ ಅವರು ದುಬೈ ಮೂಲದ ಉದ್ಯಮಿ ಸೂರಜ್​ ನಂಬಿಯಾರ್​ ಜತೆ ರಿಲೇಶನ್​ಶಿಪ್​ನಲ್ಲಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಾಗಲಿ ಅಥವಾ ಮಾಧ್ಯಮದ ಎದುರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹೇಳಿಕೊಂಡಿಲ್ಲ.

ಕೆಜಿಎಫ್​ ಬೆಡಗಿಗೆ ಶೀಘ್ರವೇ ಮದುವೆ; ಬಾಯ್​ಫ್ರೆಂಡ್​ ಜತೆ ಇಟಲಿಯಲ್ಲಿ ವಿವಾಹ?
ಯಶ್​ ಜತೆ ಮೌನಿ ರಾಯ್

‘ಕೆಜಿಎಫ್​ ಚಾಪ್ಟರ್​ 1’ ಹಿಂದಿ ವರ್ಷನ್​ನಲ್ಲಿ ‘ಗಲಿ ಗಲಿ..’ ಹಾಡಿಗೆ ಹೆಜ್ಜೆ ಹಾಕಿ ಎಲ್ಲರ ಗಮನ ಸೆಳೆದಿದ್ದರು ಮೌನಿ ರಾಯ್​. ಅವರು ಸಾಕಷ್ಟು ಬಾಲಿವುಡ್​ ಹಾಡುಗಳಿಗೆ ಹೆಜ್ಜೆ ಹಾಕಿದ್ದಾರೆ. ಅವರು ಸೊಂಟ ಬಳುಕಿಸುವ ಪರಿ ಎಲ್ಲರಿಗೂ ಇಷ್ಟವಾಗುತ್ತದೆ. ಅವರು ಕಾಣಿಸಿಕೊಂಡ ವಿಶೇಷ ಸಾಂಗ್​ ಹಿಟ್​ ಆಗೋಕೆ ಇದೂ ಕೂಡ ಒಂದು ಕಾರಣ. ಈಗ ಕೇಳಿ ಬರುತ್ತಿರುವ ಲೇಟೆಸ್ಟ್​ ಮಾಹಿತಿ ಎಂದರೆ ಮೌನಿ 2022ರ ಜನವರಿ ತಿಂಗಳಲ್ಲಿ ಬಾಯ್​ಫ್ರೆಂಡ್​ ಜತೆ ಮದುವೆ ಆಗಲಿದ್ದಾರಂತೆ. ಹೀಗೊಂದು ವಿಚಾರ ಬಾಲಿವುಡ್​ ಅಂಗಳದಲ್ಲಿ ಜೋರಾಗಿದೆ.

ಮೌನಿ ರಾಯ್​ ಅವರು ದುಬೈ ಮೂಲದ ಉದ್ಯಮಿ ಸೂರಜ್​ ನಂಬಿಯಾರ್​ ಜತೆ ರಿಲೇಶನ್​ಶಿಪ್​ನಲ್ಲಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಾಗಲಿ ಅಥವಾ ಮಾಧ್ಯಮದ ಎದುರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹೇಳಿಕೊಂಡಿಲ್ಲ. ಆದರೆ, ಅವರ ಪ್ರೇಮ​ ವಿಚಾರ ಸದಾ ಸುದ್ದಿಯಲ್ಲಿರುತ್ತದೆ. ಜನವರಿಯಲ್ಲಿ ಮೌನಿ ಅವರು ವಿವಾಹವಾಗಲಿದ್ದಾರೆ ಎನ್ನುವ ಸುದ್ದಿ ಜೋರಾಗಿದೆ. ಈ ಬಗ್ಗೆ ಮೌನಿ ರಾಯ್​ ಸೋದರ ಸಂಬಂಧಿ​ ವಿದ್ಯುತ್​ ರಾಯ್​ಸರ್ಕಾರ್​ ಸ್ಥಳೀಯ ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಅನೇಕ ಸೆಲೆಬ್ರಿಟಿಗಳು ತಮ್ಮ ಮದುವೆಯನ್ನು ವಿದೇಶಗಳಲ್ಲಿ ಮಾಡಿಕೊಂಡಿದ್ದಾರೆ. ಅನುಷ್ಕಾ ಶರ್ಮಾ-ವಿರಾಟ್​ ಕೊಹ್ಲಿ ಇದೇ ರೀತಿ ಮಾಡಿದ್ದರು. ಈಗ ಮೌನಿ ರಾಯ್​ ಕೂಡ ಇದೇ ಆಲೋಚನೆಯಲ್ಲಿದ್ದಾರೆ. ದುಬೈ ಅಥವಾ ಇಟಲಿಯಲ್ಲಿ ಮದುವೆ ಆಗುವ ಆಲೋಚನೆ ನಟಿಯದ್ದು. ನಂತರ ಮೌನಿ ರಾಯ್​ ಊರಾದ ಪಶ್ಚಿಮ ಬಂಗಾಳದ ಕೂಚ್​ ಬೆಹರ್​ನಲ್ಲಿ ವಿಶೇಷ ಕಾರ್ಯಕ್ರಮ ಆಯೋಜನೆ ಮಾಡಲು ಚಿಂತಿಸಲಾಗಿದೆ ಎನ್ನಲಾಗುತ್ತಿದೆ.

ಸೂರಜ್​ ಜತೆ ಮೌನಿ ಡೇಟಿಂಗ್​ ನಡೆಸೋಕೆ ಆರಂಭಿಸಿ ಎರಡು ವರ್ಷ ಕಳೆದಿದೆ. 2019ರಲ್ಲಿ ಮೌನಿ ಮತ್ತು ಸೂರಜ್​ ಮೊಟ್ಟ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡಿದ್ದರು. 2020ರಲ್ಲಿ ಮೌನಿ ದುಬೈಗೆ ತೆರಳಿದ್ದರು. ಈ ವೇಳೆ ಕೆಲ ಸಮಯ ಅಲ್ಲಿಯೇ ಉಳಿದುಕೊಂಡಿದ್ದರು.

‘ಬ್ರಹ್ಮಾಸ್ತ್ರ’ ಸೇರಿ ನಾಲ್ಕು ಸಿನಿಮಾ ಕೆಲಸಗಳಲ್ಲಿ ಮೌನಿ ಬ್ಯುಸಿ ಆಗಿದ್ದಾರೆ. ಈ ಪೈಕಿ ಒಂದು ಸಿನಿಮಾದಲ್ಲಿ ವಿಶೇಷ ಹಾಡಿಗೆ ಅವರು ಸೊಂಟ ಬಳುಕಿಸಲಿದ್ದಾರೆ. ಈ ಸಿನಿಮಾ ಕೆಲಸಗಳನ್ನು ಅವರು ಜನವರಿ ಒಳಗೆ ಪೂರ್ಣಗೊಳಿಸುವ ಆಲೋಚನೆಯಲ್ಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Yash: ಬಿಟೌನ್​ನಲ್ಲಿ ರಾಕಿಂಗ್ ಸ್ಟಾರ್ ಹವಾ; ಯಶ್ ಜೊತೆ ಸೆಲ್ಫಿಗಾಗಿ ಮುಗಿಬಿದ್ದ ಅಭಿಮಾನಿಗಳು

ಸಲ್ಮಾನ್ ಖಾನ್ ಜತೆ ನೃತ್ಯ ಮಾಡುತ್ತೀರಾ ಎಂದು ಕೇಳಿದ್ದಕ್ಕೆ ಇಲ್ಲವೆಂದ ನಟಿ ಮೌನಿ ರಾಯ್​; ವಿಡಿಯೋ ಭರ್ಜರಿ ವೈರಲ್​

Read Full Article

Click on your DTH Provider to Add TV9 Kannada