ಸಲ್ಮಾನ್ ಖಾನ್ ಜತೆ ನೃತ್ಯ ಮಾಡುತ್ತೀರಾ ಎಂದು ಕೇಳಿದ್ದಕ್ಕೆ ಇಲ್ಲವೆಂದ ನಟಿ ಮೌನಿ ರಾಯ್​; ವಿಡಿಯೋ ಭರ್ಜರಿ ವೈರಲ್​

ಕೆಜಿಎಫ್ ಸಿನಿಮಾದ ಹಿಂದಿ ವರ್ಷನ್​ ನಲ್ಲಿ ಮೌನಿ ರಾಯ್​ ಯಶ್​ ಜತೆ ಹೆಜ್ಜೆ ಹಾಕಿದ್ದಾರೆ. ಇನ್ನು ನಾಗಿನ್ ಸೀರಿಯಲ್​ನಲ್ಲೂ ನಟಿಸಿ ಮನಗೆದ್ದಿದ್ದಾರೆ. ಸದ್ಯ ಬ್ರಹ್ಮಾಸ್ತ್ರ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದು, ಅದರಲ್ಲಿ ಅಲಿಯಾ ಭಟ್​, ರಣಬೀರ್​ ಕಪೂರ್​ ಮತ್ತು ಅಮಿತಾಭ್​ ಬಚ್ಚನ್​ ಜತೆ ಮುಖ್ಯವಾದ ಪಾತ್ರದಲ್ಲೇ ಕಾಣಿಸಿಕೊಳ್ಳಲಿದ್ದಾರೆ.

ಸಲ್ಮಾನ್ ಖಾನ್ ಜತೆ ನೃತ್ಯ ಮಾಡುತ್ತೀರಾ ಎಂದು ಕೇಳಿದ್ದಕ್ಕೆ ಇಲ್ಲವೆಂದ ನಟಿ ಮೌನಿ ರಾಯ್​; ವಿಡಿಯೋ ಭರ್ಜರಿ ವೈರಲ್​
ಸಲ್ಮಾನ್​ ಖಾನ್ ಮತ್ತು ಮೌನಿ ರಾಯ್​
Follow us
Lakshmi Hegde
|

Updated on:Mar 22, 2021 | 1:10 PM

ಬಾಲಿವುಡ್ ನಟಿ ಮೌನಿ ರಾಯ್​ ಸೋಷಿಯಲ್ ಮೀಡಿಯಾಗಳಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ತುಂಬ ಸ್ಟೈಲೀಶ್​ ನಟಿ ಎನಿಸಿಕೊಂಡಿರುವ ಇವರು, ತಮ್ಮ ಡ್ಯಾನ್ಸ್ ವಿಡಿಯೋಗಳು, ಫೋಟೋಗಳನ್ನು ಇನ್​ಸ್ಟಾಗ್ರಾಂನಲ್ಲಿ ಆಗಾಗ ಶೇರ್​ ಮಾಡಿಕೊಳ್ಳುತ್ತಿರುತ್ತಾರೆ. ಮೌನಿ ರಾಯ್​ ಮೂಲತಃ ಕಥಕ್​ ಡ್ಯಾನ್ಸರ್ ಎಂಬುದು ಗೊತ್ತೇ ಇದೆ. ತುಂಬ ಅದ್ಭುತವಾಗಿ ನೃತ್ಯ ಮಾಡುತ್ತಾರೆ. ಆದರೆ ಇವರು, ಬಾಲಿವುಡ್​​ನ ಖ್ಯಾತ ನಟ ಸಲ್ಮಾನ್​ ಖಾನ್​ ಜತೆ ಡ್ಯಾನ್ಸ್ ಮಾಡ್ತೀರಾ ಎಂದು ಕೇಳಿದ್ದಕ್ಕೆ ನೋ ಎಂದುಬಿಟ್ಟಿದ್ದಾರೆ.. !

ಸದ್ಯ ಮೌನಿ ರಾಯ್​ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಇದು 2017ರ ವಿಡಿಯೋ. ಆದರೆ ಈಗ ಮತ್ತೆ ಹರಿದಾಡುತ್ತಿದೆ. ​ಅದು ಟ್ಯೂಬ್​ಲೈಟ್ ಸಿನಿಮಾಕ್ಕೆ ಸಂಬಂಧಪಟ್ಟ ಒಂದು ಚಾಟ್ ಶೋ. ಅಲ್ಲಿ ಹಾಡು, ನೃತ್ಯ ಜೋರಾಗಿತ್ತು. ಈ ಕಾರ್ಯಕ್ರಮದಲ್ಲಿ ಮೌನಿ ರಾಯ್ ಕೂಡ ಪಾಲ್ಗೊಂಡಿದ್ದರು. ವೇದಿಕೆ ಮೇಲಿದ್ದ ಮೌನಿ ರಾಯ್​ ಬಳಿ, ಯಾರೋ ಒಬ್ಬರು.. ಸಲ್ಮಾನ್​ ಖಾನ್​ ಜತೆ ಡ್ಯಾನ್ಸ್​ ಮಾಡುತ್ತೀರಾ? ಎಂದು ಪ್ರಶ್ನಿಸಿದ್ದಾರೆ. ಅಂದರೆ ಈ ಸಮಾರಂಭದಲ್ಲಿ ನೀವು ಸಲ್ಮಾನ್​ ಖಾನ್​ ಜತೆಗೂ ನೃತ್ಯ ಮಾಡಲಿದ್ದೀರಾ ಎಂಬುದು ಪ್ರಶ್ನೆಯ ತಾತ್ಪರ್ಯ. ಆಗ ಮೌನಿ ರಾಯ್​ ನೋ (ಇಲ್ಲ) ಎನ್ನುತ್ತ ತಿರುಗುವಷ್ಟರಲ್ಲಿ ಅಲ್ಲೇ ಸಲ್ಮಾನ್ ಖಾನ್ ನಿಂತಿದ್ದರು. ಅವರಿಗೆ ಡಿಕ್ಕಿ ಹೊಡೆದ ಮೌನಿ, ನಾಚಿ ನೀರಾದರು. ಸಲ್ಮಾನ್​ ಖಾನ್ ಕೂಡ ನಗುತ್ತ ಅಲ್ಲಿಂದ ತೆರಳಿದರು. ಈ ವಿಡಿಯೋವನ್ನೀಗ ಮೌನಿ ರಾಯ್ ಫ್ಯಾನ್ಸ್ ಪೇಜ್​ನಲ್ಲಿ ಮತ್ತೊಮ್ಮೆ ಶೇರ್ ಮಾಡಿಕೊಳ್ಳಲಾಗಿದೆ. ಅದನ್ನು ನಂತರ ಅನೇಕರು ಪೋಸ್ಟ್ ಮಾಡಿಕೊಂಡಿದ್ದಾರೆ.

ಕೆಜಿಎಫ್ ಸಿನಿಮಾದ ಹಿಂದಿ ವರ್ಷನ್​ ನಲ್ಲಿ ಮೌನಿ ರಾಯ್​ ಯಶ್​ ಜತೆ ಹೆಜ್ಜೆ ಹಾಕಿದ್ದಾರೆ. ಇನ್ನು ನಾಗಿನ್ ಸೀರಿಯಲ್​ನಲ್ಲೂ ನಟಿಸಿ ಮನಗೆದ್ದಿದ್ದಾರೆ. ಸದ್ಯ ಬ್ರಹ್ಮಾಸ್ತ್ರ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದು, ಅದರಲ್ಲಿ ಅಲಿಯಾ ಭಟ್​, ರಣಬೀರ್​ ಕಪೂರ್​ ಮತ್ತು ಅಮಿತಾಭ್​ ಬಚ್ಚನ್​ ಜತೆ ಮುಖ್ಯವಾದ ಪಾತ್ರದಲ್ಲೇ ಕಾಣಿಸಿಕೊಳ್ಳಲಿದ್ದಾರೆ. ಕಿರುತೆರೆ ಲೋಕದಲ್ಲಿಯೇ ಇದ್ದ ಮೌನಿ ರಾಯ್ ಮೊದಲು ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟಿದ್ದು ಅಕ್ಷಯ್​ ಕುಮಾರ್ ಅವರ ಗೋಲ್ಡ್ ಸಿನಿಮಾ ಮೂಲಕ. ಇದು 2018ರಲ್ಲಿ ಬಿಡುಗಡೆಯಾಗಿತ್ತು.

View this post on Instagram

A post shared by @arniholic_143

ಇದನ್ನೂ ಓದಿ: ಕೊರೊನಾ ಎರಡನೇ ಅಲೆ: ಮಕ್ಕಳ ಬಗ್ಗೆ ಇರಲಿ ಎಚ್ಚರ, ಬೆಂಗಳೂರಿನಲ್ಲಿ ಕೊರೊನಾಗೆ ಚಿಕ್ಕ ಚಿಕ್ಕ ಮಕ್ಕಳು ಗುರಿ

‘ಡ್ಯಾನ್ಸ್ ಮಾಡುತ್ತ ನಿನ್ನ ಒಳ ಉಡುಪುಗಳನ್ನು ತೆಗೆದುಬಿಡು ಎಂದಿದ್ದ ಆ ಸಿನಿಮಾ ನಿರ್ಮಾಪಕ’- ಪ್ರಿಯಾಂಕಾ ಚೋಪ್ರಾ ಬಿಚ್ಚಿಟ್ಟ ಸ್ಫೋಟಕ ವಿಷಯ

Published On - 1:07 pm, Mon, 22 March 21

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್