‘ಡ್ಯಾನ್ಸ್ ಮಾಡುತ್ತ ನಿನ್ನ ಒಳ ಉಡುಪುಗಳನ್ನು ತೆಗೆದುಬಿಡು ಎಂದಿದ್ದ ಆ ಸಿನಿಮಾ ನಿರ್ಮಾಪಕ’- ಪ್ರಿಯಾಂಕಾ ಚೋಪ್ರಾ ಬಿಚ್ಚಿಟ್ಟ ಸ್ಫೋಟಕ ವಿಷಯ

ಮಿಸ್​ ಇಂಡಿಯಾ, ಮಿಸ್ ವರ್ಲ್ಡ್​ ಮುಡಿಗೇರಿಸಿಕೊಂಡಿರುವ ಪ್ರಿಯಾಂಕಾ ಚೋಪ್ರಾ ಬಾಲಿವುಡ್​ಗೆ ಕಾಲಿಟ್ಟಿದ್ದು 2004ರಲ್ಲಿ ದಿ ಹೀರೋ: ಲವ್​ ಸ್ಟೋರಿ ಆಫ್​ ಎ ಸ್ಪೈ ಎಂಬ ಸಿನಿಮಾದ ಮೂಲಕ. ಇದರಲ್ಲಿ ಸನ್ನಿ ಡಿಯೋಲ್ ಮತ್ತು ಪ್ರೀತಿ ಝಿಂಟಾರೊಂದಿಗೆ ನಟಿಸಿದ್ದರು.

‘ಡ್ಯಾನ್ಸ್ ಮಾಡುತ್ತ ನಿನ್ನ ಒಳ ಉಡುಪುಗಳನ್ನು ತೆಗೆದುಬಿಡು ಎಂದಿದ್ದ ಆ ಸಿನಿಮಾ ನಿರ್ಮಾಪಕ’- ಪ್ರಿಯಾಂಕಾ ಚೋಪ್ರಾ ಬಿಚ್ಚಿಟ್ಟ ಸ್ಫೋಟಕ ವಿಷಯ
ಪ್ರಿಯಾಂಕಾ ಚೋಪ್ರಾ
Follow us
Lakshmi Hegde
|

Updated on: Mar 21, 2021 | 4:37 PM

ಮೀ ಟೂ ಅಭಿಯಾನದಡಿ ಅದೆಷ್ಟೊ ಚಿತ್ರನಟಿಯರು ತಮ್ಮ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಬಗ್ಗೆ ಹೇಳಿಕೊಂಡಿದ್ದಾರೆ. ತನುಶ್ರೀ ದತ್ತಾ ಅವರಿಂದ ಪ್ರಾರಂಭವಾದ Me Too.. ಒಂದು ಚಳವಳಿ ರೂಪದಲ್ಲಿ ಸಾಗಿತ್ತು. ಅದೆಷ್ಟೋ ಸೆಲೆಬ್ರಿಟಿ ಮಹಿಳೆಯರು ತಾವು ಅನುಭವಿಸಿದ ಲೈಂಗಿಕ ಶೋಷಣೆಯನ್ನು ಬಹಿರಂಗಪಡಿಸಿದ್ದಾರೆ. ಈ ಮೀ ಟೂದಡಿ ಹಲವು ಪುರುಷರ ಮಾನಮರ್ಯಾದೆ ಬೀದಿಗೆ ಬಂದಿದ್ದು ಗೊತ್ತೇ ಇದೆ. ಇದೀಗ ಬಾಲಿವುಡ್​ ನಟಿ ಪ್ರಿಯಾಂಕಾ ಚೋಪ್ರಾ ಅವರೂ ಸಿನಿಮಾ ನಿರ್ಮಾಪಕರೊಬ್ಬರ ವಿರುದ್ಧ ಆರೋಪ ಮಾಡಿದ್ದಾರೆ. ಅಂದು ಆತನನ್ನು ನಾನು ವಿರೋಧಿಸಿಲ್ಲ.. ಭಯಪಟ್ಟು ಸುಮ್ಮನಾದೆ. ಈ ವಿಚಾರದಲ್ಲಿ ನನ್ನ ಬಗ್ಗೇ ನನಗೆ ಬೇಸರವಿದೆ ಎಂದೂ ಪಶ್ಚಾತ್ತಾಪ ಪಟ್ಟುಕೊಂಡಿದ್ದಾರೆ.

ಇತ್ತೀಚೆಗೆ ಅಮೆರಿಕದ Oprah Winfrey ಅವರು ಏರ್ಪಡಿಸಿದ್ದ ಸಂದರ್ಶನದಲ್ಲಿ ಮಾತನಾಡಿದ ಪ್ರಿಯಾಂಕಾ ಚೋಪ್ರಾ, ಆ ಕೆಟ್ಟ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಆಗಷ್ಟೇ ನಾನು ಬಾಲಿವುಡ್​ಗೆ ಕಾಲಿಟ್ಟ ದಿನಗಳು. ನಾನೊಂದು ಸಿನಿಮಾಕ್ಕೆ ಒಪ್ಪಿಕೊಂಡಿದ್ದೆ. ಅದರಲ್ಲಿ ಸಾಲ್ಟ್ರಿ ಡ್ಯಾನ್ಸ್ ಮಾಡಬೇಕಿತ್ತು. ಆಗ ಸಿನಿಮಾ ನಿರ್ದೇಶಕ ನನ್ನ ಬಳಿ, ನೀವು ನೃತ್ಯ ಮಾಡುತ್ತ, ಮಾಡುತ್ತ ನಿಮ್ಮ ಉಳ ಉಡುಪಗಳನ್ನೆಲ್ಲ ಕಳಚಬೇಕು ಎಂದು ಹೇಳಿದ. ನನಗೆ ತುಂಬ ಕೋಪ ಬಂತು. ಏನು ಹೇಳಬೇಕು ಎಂದೂ ಗೊತ್ತಾಗಲಿಲ್ಲ. ಆದರೆ ಒಪ್ಪಲಿಲ್ಲ.. ಮರುದಿನವೇ ಆ ಪ್ರಾಜೆಕ್ಟ್​ನಿಂದ ನಾನು ಹೊರನಡೆದೆ. ನನಗೆ ಅದರಲ್ಲಿ ನಟಿಸಲು ಇಷ್ಟವಿಲ್ಲ ಎಂದುಬಿಟ್ಟೆ ಎಂದು ಪ್ರಿಯಾಂಕಾ ಚೋಪ್ರಾ ತಿಳಿಸಿದ್ದಾರೆ. ಇನ್ನು ಶೂಟಿಂಗ್​ ಸೆಟ್​ನಲ್ಲಿ ನನ್ನ ಒಳ ಉಡುಪು ಬಿಚ್ಚಲು ಹೇಳಿದ ನಿರ್ದೇಶಕನಿಗೆ ನಾನೇನೂ ಹೇಳಲಿಲ್ಲ. ಅವನ ವಿರುದ್ಧ ಮಾತನಾಡಲಿಲ್ಲ. ಆತನ ವಿರುದ್ಧ ಪ್ರತಿಭಟಿಸಲು ನನಗೆ ಭಯವಿತ್ತು ಎಂದು ಹೇಳಿಕೊಂಡಿದ್ದಾರೆ.

ನಾನು ಅಂದು ಸುಮ್ಮನೆ ಆ ಸಿನಿ ನಿರ್ಮಾಪಕನ ಕಚೇರಿಯಿಂದ ಹೊರಟೆ. ನಿಜಕ್ಕೂ ದಿಗ್ಭ್ರಮೆಯಾಗಿತ್ತು. ಆದರೆ ಈಗಲೂ ಅನ್ನಿಸುತ್ತದೆ. ನಾನು ಅಂದು ಗಟ್ಟಿಯಾಗಿ ಎದುರಿಸಬೇಕಿತ್ತು. ನೀನು ಹೇಳುತ್ತಿರುವುದು ತಪ್ಪು ಎಂದು ಆತನಿಗೆ ಕಠಿಣವಾಗಿ ಹೇಳಬೇಕಿತ್ತು. ಆ ಕ್ಷಣಕ್ಕೆ ಭಯಗೊಂಡು, ಮೌನವಾಗಿ ಇಲ್ಲಿಂದ ದೂರ ನಡೆಯುವುದೇ ಉತ್ತಮ ಎನ್ನಿಸಿಬಿಟ್ಟಿತು ಎಂದಿದ್ದಾರೆ.

ಮಿಸ್​ ಇಂಡಿಯಾ, ಮಿಸ್ ವರ್ಲ್ಡ್​ ಮುಡಿಗೇರಿಸಿಕೊಂಡಿರುವ ಪ್ರಿಯಾಂಕಾ ಚೋಪ್ರಾ ಬಾಲಿವುಡ್​ಗೆ ಕಾಲಿಟ್ಟಿದ್ದು 2004ರಲ್ಲಿ ದಿ ಹೀರೋ: ಲವ್​ ಸ್ಟೋರಿ ಆಫ್​ ಎ ಸ್ಪೈ ಎಂಬ ಸಿನಿಮಾದ ಮೂಲಕ. ಇದರಲ್ಲಿ ಸನ್ನಿ ಡಿಯೋಲ್ ಮತ್ತು ಪ್ರೀತಿ ಝಿಂಟಾರೊಂದಿಗೆ ನಟಿಸಿದ್ದರು. ಅದಾದ ನಂತರ ಯಶಸ್ವಿ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಸದ್ಯ ಪತಿಯೊಂದಿಗೆ ಅಮೆರಿಕದಲ್ಲಿ ನೆಲೆಸಿದ್ದಾರೆ. ಇತ್ತೀಚೆಗೆ ಆಗಾಗ ತಮ್ಮ ಉಡುಪುಗಳ ಮೂಲಕ ಟ್ರೋಲ್ ಆಗುತ್ತಿರುತ್ತಾರೆ.

ಇದನ್ನೂ ಓದಿ: ಬಾಲ್ಯದಲ್ಲಿ ಪ್ರಿಯಾಂಕಾ ಚೋಪ್ರಾ ಪಾಲಿಸುತ್ತಿದ್ದ ಧರ್ಮ ಯಾವುದು? ಸಂದರ್ಶನದಲ್ಲಿ ಸತ್ಯ ಬಾಯ್ಬಿಟ್ಟ ನಟಿ

Oscars 2021: ಪ್ರಿಯಾಂಕಾ ಚೋಪ್ರಾ ಮತ್ತು ನಿಕ್​ ಜೊನಾಸ್​ ಮಾಡಲಿದ್ದಾರೆ ಆಸ್ಕರ್​ ನಾಮನಿರ್ದೇಶನ ಪ್ರಕಟಣೆ

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್