AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುವ ಸಂಭ್ರಮ: ಕಲಬುರಗಿ, ಬೆಳಗಾವಿ, ಹುಬ್ಬಳ್ಳಿಯಲ್ಲಿ ಪುನೀತ್ ರಾಜ್​ಕುಮಾರ್​​ಗೆ ಭರ್ಜರಿ ಸ್ವಾಗತ

ಯುವರತ್ನ ಚಿತ್ರತಂಡ ಎರಡನೆಯದಾಗಿ ಬೆಳಗಾವಿಗೆ ತೆರಳಿದೆ. ಈ ವೇಳೆ, ಡೊಳ್ಳು ಬಾರಿಸಿ, ಹೂಮಳೆ ಸುರಿಸಿ ಪುನೀತ್​​ಗೆ ಸ್ವಾಗತ ಕೋರಲಾಗಿದೆ.

ಯುವ ಸಂಭ್ರಮ: ಕಲಬುರಗಿ, ಬೆಳಗಾವಿ, ಹುಬ್ಬಳ್ಳಿಯಲ್ಲಿ ಪುನೀತ್ ರಾಜ್​ಕುಮಾರ್​​ಗೆ ಭರ್ಜರಿ ಸ್ವಾಗತ
ಕಲಬುರಗಿಯಲ್ಲಿ ಯುವರತ್ನ ತಂಡ
ರಾಜೇಶ್ ದುಗ್ಗುಮನೆ
| Edited By: |

Updated on:Mar 23, 2021 | 12:36 PM

Share

ನಿರ್ದೇಶಕ ಸಂತೋಷ್​ ಆನಂದ್​ ರಾಮ್​ ಮತ್ತು ನಟ ಪುನೀತ್​ ರಾಜ್​ಕುಮಾರ್​ ಕಾಂಬಿನೇಷನ್​ನ ಯುವರತ್ನ ಸಿನಿಮಾ ಏ.1ರಂದು ತೆರೆಕಾಣುತ್ತಿದೆ. ಅದಕ್ಕೂ ಮುನ್ನ ಯುವರತ್ನ ತಂಡ ‘ಯುವ ಸಂಭ್ರಮ’ ಹೆಸರಲ್ಲಿ ರಾಜ್ಯಾದ್ಯಂತ ಸಂಚಾರ ಮಾಡಿ ಪ್ರಚಾರ ಮಾಡುತ್ತಿದೆ. ಇಂದಿನಿಂದ ಚಿತ್ರತಂಡ ಪ್ರಚಾರ ಕಾರ್ಯದಲ್ಲಿ ತೊಡಗಿದೆ. ಇಂದು ಬೆಳಗ್ಗೆ ಯುವರತ್ನ ಚಿತ್ರತಂಡ ಮೊದಲಿಗೆ ಕಲಬುರಗಿಗೆ ಭೇಟಿ ನೀಡಿತು. ಈ ವೇಳೆ ಮಾತನಾಡಿದ ಪುನೀತ್​, ಲಾಕ್​ಡೌನ್ ತೆರವಾದ ನಂತರ ಮೊದಲ ಬಂದಿದ್ದು ಕಲಬುರಗಿಗೆ. ನಿಮ್ಮನ್ನ ನೋಡಬೇಕು ಎಂದೇ ನಾನು ಇಲ್ಲಿಗೆ ಬಂದಿದ್ದೇನೆ. ಇಲ್ಲಿಗೆ ಬಂದಿದ್ದು ತುಂಬಾ ಸಂತೋಷ ತಂದಿದೆ. ಮುಂದಿನ ದಿನದಲ್ಲಿ ಕಲಬುರಗಿ ಜಿಲ್ಲೆಯಲ್ಲಿ ನಮ್ಮ ಸಿನಿಮಾ ಶೂಟಿಂಗ್ ಮಾಡುತ್ತೇವೆ. ಯುವರತ್ನ ಚಿತ್ರ ನೋಡಿ ಬೆಂಬಲಿಸಿ ಎಂದು ಕೋರಿದರು.

ಬೆಳಗಾವಿಯಲ್ಲಿ ಡೊಳ್ಳು ಬಾರಿಸಿ ಸ್ವಾಗತ ಯುವರತ್ನ ಚಿತ್ರತಂಡ ಎರಡನೆಯದಾಗಿ ಬೆಳಗಾವಿಗೆ ತೆರಳಿದೆ. ಈ ವೇಳೆ, ಡೊಳ್ಳು ಬಾರಿಸಿ, ಹೂಮಳೆ ಸುರಿಸಿ ಪುನೀತ್​​ಗೆ ಸ್ವಾಗತ ಕೋರಲಾಗಿದೆ. ಪುನೀತ್​ ಆಗಮಿಸುವಾಗ ಕನ್ನಡದ ಬಾವುಟಗಳು ರಾರಾಜಿಸಿವೆ. ಈ ವೇಳೆ ಪುನೀತ್​ ‘ಯುವರತ್ನ’ ಚಿತ್ರದ ಡೈಲಾಗ್ ಹೊಡೆದು ಅಭಿಮಾನಿಗಳನ್ನು ರಂಜಿಸಿದ್ದಾರೆ……

ಹುಬ್ಬಳ್ಳಿಗೂ ಭೇಟಿ ಪುನೀತ್​ ರಾಜ್​ಕುಮಾರ್​ ಹುಬ್ಬಳ್ಳಿಗೂ ಭೇಟಿ ನೀಡುತ್ತಿದ್ದಾರೆ. ನಗರದ ಅರ್ಬನ್ ಓಯಸಿಸ್ ಮಾಲ್ ಎದುರು ಅಭಿಮಾನಿಗಳು ಸೇರಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಅಪ್ಪು ಅಭಿಮಾನಿಗಳು ಜಮಾಯಿಸಿದ್ದಾರೆ.

ನಾಳೆಯ ವೇಳಾಪಟ್ಟಿ:

ಎರಡರನೇ ದಿನ (ಮಾ.22) ಬಳ್ಳಾರಿ, ಚಿತ್ರದುರ್ಗ ಹಾಗೂ ತುಮಕೂರಿಗೆ ಪುನೀತ್​ ಬರಲಿದ್ದಾರೆ. ಬೆಳಗ್ಗೆ 9 ಗಂಟೆಗೆ ಬಳ್ಳಾರಿಯ ದುರ್ಗಾಂಬ ದೇವಸ್ಥಾನ, ಮಧ್ಯಾಹ್ನ 1 ಗಂಟೆಗೆ ಚಿತ್ರದುರ್ಗದ ಹಳೇ ಮಾಧ್ಯಮಿಕ ಶಾಲಾ ಆವರಣ ಮತ್ತು ಸಂಜೆ 4.30ಕ್ಕೆ ತುಮಕೂರಿನ ಎಸ್​ಐಟಿ ಇಂಜಿನಿಯರಿಂಗ್​ ಕಾಲೇಜು ಮೈದಾನದಲ್ಲಿ ಅಭಿಮಾನಿಗಳನ್ನು ಪುನೀತ್​ ಭೇಟಿ ಆಗಲಿದ್ದಾರೆ.

ಮಾ.23ರಂದು ಮೈಸೂರು ಮತ್ತು ಮಂಡ್ಯದಲ್ಲಿ ಯುವರತ್ನ ಟೀಮ್​ ಹಾಜರಿ ಹಾಕಲಿದೆ. ಮೈಸೂರು ಮಾನಸ ಗಂಗೋತ್ರಿ ಕ್ಯಾಂಪಸ್​ನ ಓಪನ್​ ಏರ್​ ಥಿಯೇಟರ್​ನಲ್ಲಿ ಬೆಳಗ್ಗೆ 10 ಗಂಟೆಗೆ ಪುನೀತ್​ ಆಗಮಿಸಲಿದ್ದಾರೆ. ಮಂಡ್ಯದ ಸಿಲ್ವರ್​ ಬ್ಯುಬ್ಲಿ ಮೈದಾನದಲ್ಲಿ ಮಧ್ಯಾಹ್ನ 1.30ಕ್ಕೆ ‘ಪವರ್​ ಸ್ಟಾರ್​’ ತಮ್ಮ ಅಭಿಮಾನಿಗಳ ಜೊತೆ ಬೆರೆಯಲಿದ್ದಾರೆ ಎಂದು ಹೊಂಬಾಳೆ ಫಿಲ್ಮ್ಸ್​ ಮಾಹಿತಿ ನೀಡಿದೆ. ಇಷ್ಟೇ ಅಲ್ಲದೆ, ಇನ್ನಷ್ಟು ಜಿಲ್ಲೆಗಳಿಗೆ ಯುವರತ್ನ ತಂಡದ ಜೊತೆ ಪುನೀತ್​ ರಾಜ್​ಕುಮಾರ್ ಭೇಟಿ ನೀಡಲಿದ್ದಾರೆ. ಅವರ ವೇಳಾಪಟ್ಟಿಯನ್ನು ಚಿತ್ರತಂಡ ಶೀಘ್ರವೇ ಬಿಡುಗಡೆ ಮಾಡಲಿದೆ.

ಇದನ್ನೂ ಓದಿ: Puneeth Rajkumar: ಯುವರತ್ನ ಟೀಮ್​ ಜೊತೆ ಪುನೀತ್​ ನಿಮ್ಮೂರಿಗೆ ಬರೋದು ಯಾವತ್ತು? ಇಲ್ಲಿದೆ ಫುಲ್​ ವೇಳಾಪಟ್ಟಿ!

Published On - 5:41 pm, Sun, 21 March 21

ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ
ಕೆಪಿಸಿಸಿ ಕಚೇರಿಯಲ್ಲೇ ಮೊಳಗಿತು ‘ಮುಂದಿನ ಸಿಎಂ ಡಿಕೆ ಶಿವಕುಮಾರ್’ ಘೋಷಣೆ
ಕೆಪಿಸಿಸಿ ಕಚೇರಿಯಲ್ಲೇ ಮೊಳಗಿತು ‘ಮುಂದಿನ ಸಿಎಂ ಡಿಕೆ ಶಿವಕುಮಾರ್’ ಘೋಷಣೆ
ಹಳೆ ದ್ವೇಷಕ್ಕೆ ರೌಡಿಶೀಟರ್ ಅಪಹರಿಸಿ ಚಿತ್ರಹಿಂಸೆ: ಬೆರಳು ಕತ್ತರಿಸಿ ವಿಕೃತಿ
ಹಳೆ ದ್ವೇಷಕ್ಕೆ ರೌಡಿಶೀಟರ್ ಅಪಹರಿಸಿ ಚಿತ್ರಹಿಂಸೆ: ಬೆರಳು ಕತ್ತರಿಸಿ ವಿಕೃತಿ