‘ದುಡ್ಡಿನಿಂದ ಸೌಂದರ್ಯ ಪಡೆಯಬಹುದು’: ಮೌನಿ ರಾಯ್​ ಫೋಟೋ ತೋರಿಸಿ ಸಾಕ್ಷಿ ಸಮೇತ ವಿವರಿಸಿದ ಕಮಾಲ್ ಖಾನ್

ಮೌನಿ ರಾಯ್​ ಅವರಿಗೆ ಈಗ 36ರ ಪ್ರಾಯ. ಅವರು ಬಣ್ಣದ ಲೋಕಕ್ಕೆ ಕಾಲಿಟ್ಟು ಒಂದೂವರೆ ದಶಕ ಕಳೆದಿದೆ. ದಿನದಿಂದ ದಿನಕ್ಕೆ ಅವರ ಅಂದ ಹೆಚ್ಚುತ್ತಲೇ ಇದೆ.

‘ದುಡ್ಡಿನಿಂದ ಸೌಂದರ್ಯ ಪಡೆಯಬಹುದು’: ಮೌನಿ ರಾಯ್​ ಫೋಟೋ ತೋರಿಸಿ ಸಾಕ್ಷಿ ಸಮೇತ ವಿವರಿಸಿದ ಕಮಾಲ್ ಖಾನ್
ಮೌನಿ ರಾಯ್​
Follow us
TV9 Web
| Updated By: ಮದನ್​ ಕುಮಾರ್​

Updated on: Oct 01, 2021 | 4:32 PM

ಸಿನಿಮಾ ಮತ್ತು ಧಾರಾವಾಹಿಗಳ ಮೂಲಕ ನಟಿ ಮೌನಿ ರಾಯ್​ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ಸಿಕ್ಕಿದೆ. ‘ಕೆಜಿಎಫ್​: ಚಾಪ್ಟರ್​ 1’ ಸಿನಿಮಾದ ಹಿಂದಿ ವರ್ಷನ್​ನಲ್ಲಿ ಅವರು ‘ಗಲಿ ಗಲಿ ಮೇ..’ ಹಾಡಿಗೆ ಹೆಜ್ಜೆ ಹಾಕಿದ್ದರು. ಈಗ ಅವರ ಕೈಯಲ್ಲಿ ಹಲವು ಸಿನಿಮಾ ಆಫರ್​ಗಳಿವೆ. ಈ ನಡುವೆ ಅವರ ಸೌಂದರ್ಯದ ಬಗ್ಗೆ ಸ್ವಯಂ ಘೋಷಿತ ವಿಮರ್ಶಕ ಕಮಾಲ್​ ಆರ್​. ಖಾನ್​ ಕಮೆಂಟ್​ ಮಾಡಿದ್ದಾರೆ. ಹಣದಿಂದ ಮೌನಿ ರಾಯ್​ ಅವರು ತಮ್ಮ ಲುಕ್​ ಬದಲಿಸಿಕೊಂಡಿದ್ದಾರೆ ಎಂಬುದು ಕಮಾಲ್​ ಖಾನ್​ ವಾದ. ಅದಕ್ಕೆ ಅವರು ಸಾಕ್ಷಿಯನ್ನೂ ನೀಡಿದ್ದಾರೆ.

ಮೌನಿ ರಾಯ್​ ಅವರಿಗೆ ಈಗ 36ರ ಪ್ರಾಯ. ಅವರು ಬಣ್ಣದ ಲೋಕಕ್ಕೆ ಕಾಲಿಟ್ಟು ಒಂದೂವರೆ ದಶಕ ಕಳೆದಿದೆ. ದಿನದಿಂದ ದಿನಕ್ಕೆ ಅವರ ಅಂದ ಹೆಚ್ಚುತ್ತಲೇ ಇದೆ. ಅನೇಕ ಬಾರಿ ಅವರ ಬಾಡಿ ಟ್ರಾನ್ಸ್​ಫಾರ್ಮೇಷನ್​ ಆಗಿರುವುದು ಅಭಿಮಾನಿಗಳ ಗಮನಕ್ಕೆ ಬಂದಿದೆ. ಅಲ್ಲದೇ ಅವರ ಮುಖದಲ್ಲೂ ಅನೇಕ ಬದಲಾವಣೆ ಆಗಿದೆ. ಹಾಗಾಗಿ ಮೌನಿ ಆಗಾಗ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿರಬಹುದು ಎಂಬ ಅನುಮಾನ ಹಲವರಿಗೆ ಇದೆ.

ಈ ಬಗ್ಗೆ ಮೌನಿ ಏನನ್ನೂ ಒಪ್ಪಿಕೊಂಡಿಲ್ಲ. ಅದೇ ವಿಚಾರ ಇಟ್ಟುಕೊಂಡು ಕಮಾಲ್ ಆರ್​. ಖಾನ್​ ಕಾಲೆಳೆದಿದ್ದಾರೆ. ಮೌನಿ ರಾಯ್​ ಅವರ ಹಲವು ಫೋಟೋಗಳನ್ನು ಒಟ್ಟಿಗೆ ಶೇರ್​ ಮಾಡಿಕೊಂಡಿರುವ ಅವರು ಆ ಫೋಟೋಗಳಲ್ಲಿನ ವ್ಯತ್ಯಾಸವನ್ನು ಗಮನಿಸುವಂತೆ ನೆಟ್ಟಿಗರಿಗೆ ಸೂಚಿಸಿದ್ದಾರೆ. ‘ಹಣದಿಂದ ಸೌಂದರ್ಯವನ್ನು ಬದಲಾಯಿಸಬಹುದು. ಮೌನಿ ರಾಯ್ ಆಗಾಗ ಬದಲಾಗುತ್ತಲೇ ಇದ್ದಾರೆ’ ಎಂದು ಆ ಫೋಟೋಗೆ ಕಮಾಲ್​ ಖಾನ್​ ಕ್ಯಾಪ್ಷನ್​ ನೀಡಿದ್ದಾರೆ. ಸದ್ಯ ಈ ಪೋಸ್ಟ್​ ವೈರಲ್​ ಆಗುತ್ತಿದೆ.

ಬಾಲಿವುಡ್​ನಲ್ಲಿ ಅನೇಕರನ್ನು ಕಮಾಲ್​ ಖಾನ್​ ಕೆಣಕುತ್ತಲೇ ಇರುತ್ತಾರೆ. ಆ ಮೂಲಕ ಸದಾ ಅವರು ವಿವಾದ ಮೈಮೇಲೆ ಎಳೆದುಕೊಳ್ಳುತ್ತಾರೆ. ಈ ಹಿಂದೆ ಸಲ್ಮಾನ್ ಖಾನ್​ ಮತ್ತು ಕಂಗನಾ ರಣಾವತ್​ ಬಗ್ಗೆಯೂ ಅವರು ಖಾರವಾಗಿ ಟ್ವೀಟ್ ಮಾಡಿದ್ದರು.

ಇದನ್ನೂ ಓದಿ:

ಸಲ್ಮಾನ್ ಖಾನ್ ಜತೆ ನೃತ್ಯ ಮಾಡುತ್ತೀರಾ ಎಂದು ಕೇಳಿದ್ದಕ್ಕೆ ಇಲ್ಲವೆಂದ ನಟಿ ಮೌನಿ ರಾಯ್​; ವಿಡಿಯೋ ಭರ್ಜರಿ ವೈರಲ್​

ಕೆಜಿಎಫ್​ ಬೆಡಗಿಗೆ ಶೀಘ್ರವೇ ಮದುವೆ; ಬಾಯ್​ಫ್ರೆಂಡ್​ ಜತೆ ಇಟಲಿಯಲ್ಲಿ ವಿವಾಹ?

ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ
ಈ ರಾಶಿಯವರಿಗೆ ಇಂದು ಹಣಕಾಸಿನ ವಿಷಯದಲ್ಲಿ ಒಳ್ಳೆಯದಾಗುತ್ತೆ
ಈ ರಾಶಿಯವರಿಗೆ ಇಂದು ಹಣಕಾಸಿನ ವಿಷಯದಲ್ಲಿ ಒಳ್ಳೆಯದಾಗುತ್ತೆ
ಚೈತ್ರಾ ಕುಂದಾಪುರ ವಿಚಾರದಲ್ಲಿ ಉಲ್ಟಾ ಹೊಡೆತ ರಜತ್; ಸುದೀಪ್​ಗೂ ಇದು ಶಾಕ್
ಚೈತ್ರಾ ಕುಂದಾಪುರ ವಿಚಾರದಲ್ಲಿ ಉಲ್ಟಾ ಹೊಡೆತ ರಜತ್; ಸುದೀಪ್​ಗೂ ಇದು ಶಾಕ್
ಮಾಜಿ ಲವರ್​ನಿಂದ ಯುವತಿಗೆ ಕಿರುಕುಳ: ಬೈಕ್ ಕದ್ದು, ಜಖಂಗೊಳಿಸಿದ ಯುವಕ
ಮಾಜಿ ಲವರ್​ನಿಂದ ಯುವತಿಗೆ ಕಿರುಕುಳ: ಬೈಕ್ ಕದ್ದು, ಜಖಂಗೊಳಿಸಿದ ಯುವಕ