AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Maidaan: ಅಜಯ್ ದೇವಗನ್ ನಟನೆಯ ಬಹುನಿರೀಕ್ಷಿತ ‘ಮೈದಾನ್’ ಚಿತ್ರದ ಬಿಡುಗಡೆಯ ದಿನಾಂಕ ಘೋಷಣೆ

Ajay Devgan: ಬಾಲಿವುಡ್​ನ ಖ್ಯಾತ ನಟ ಅಜಯ್ ದೇವಗನ್ ನಟನೆಯ ಬಹುನಿರೀಕ್ಷಿತ ‘ಮೈದಾನ್’ ಚಿತ್ರದ ಬಿಡುಗಡೆಯ ದಿನಾಂಕ ಘೋಷಣೆಯಾಗಿದೆ. ಇದರೊಂದಿಗೆ ಅಜಯ್ ನಿರ್ದೆಶಿಸುತ್ತಿರುವ, ಅಮಿತಾಭ್ ನಟನೆಯ ‘ಮೇ ಡೇ’ ಚಿತ್ರದ ಕುರಿತೂ ಅಪ್ಡೇಟ್ ನೀಡಿದ್ದಾರೆ.

Maidaan: ಅಜಯ್ ದೇವಗನ್ ನಟನೆಯ ಬಹುನಿರೀಕ್ಷಿತ ‘ಮೈದಾನ್’ ಚಿತ್ರದ ಬಿಡುಗಡೆಯ ದಿನಾಂಕ ಘೋಷಣೆ
‘ಮೈದಾನ್’ ಚಿತ್ರದಲ್ಲಿ ಅಜಯ್ ದೇವಗನ್
TV9 Web
| Updated By: shivaprasad.hs|

Updated on:Sep 30, 2021 | 3:17 PM

Share

ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ಚಿತ್ರಮಂದಿರಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಇದರ ನಂತರ, ಚಿತ್ರರಂಗದಲ್ಲಿ ಹೊಸ ಸಂಚಲನ ಮೂಡಿದ್ದು, ನಿರ್ಮಾಪಕರು ಈಗಾಗಲೇ ಕಾದು ಕುಳಿತಿರುವ ತಮ್ಮ ಚಿತ್ರಗಳ ಬಿಡುಗಡೆಯ ದಿನಾಂಕಗಳನ್ನು ಘೋಷಿಸುತ್ತಿದ್ದಾರೆ. ಇದರೊಂದಿಗೆ ಬಿಗ್ ಬಜೆಟ್ ಚಿತ್ರಗಳೂ ಕೂಡ ತಮ್ಮ ಚಿತ್ರಗಳ ಬಿಡುಗಡೆಯ ದಿನಾಂಕವನ್ನು ಘೋಷಿಸುತ್ತಿವೆ. ಪ್ರಸ್ತುತ ಖ್ಯಾತ ನಟ ಅಜಯ್ ದೇವಗನ್ ಅಭಿನಯದ ಬಹುನಿರೀಕ್ಷಿತ ‘ಮೈದಾನ್’ ಚಿತ್ರದ ಬಿಡುಗಡೆ ದಿನಾಂಕ ಘೋಷಿಸಲಾಗಿದೆ.

ಅಮಿತ್ ಶರ್ಮಾ ನಿರ್ದೇಶನದ ‘ಮೈದಾನ್’ ಚಿತ್ರವನ್ನು ಜೀ ಸ್ಟುಡಿಯೋಸ್, ಬೋನಿ ಕಪೂರ್, ಅರುಣವ್ ಜಾಯ್ ಸೇನ್​ಗುಪ್ತ ಮತ್ತು ಆಕಾಶ್ ಚಾವ್ಲಾ ನಿರ್ಮಿಸುತ್ತಿದ್ದಾರೆ. ಪ್ರಸ್ತುತ ಚಿತ್ರತಂಡವು ಬಿಡುಗಡೆಯ ದಿನಾಂಕವನ್ನು ಘೋಷಿಸಿದ್ದು, 2022ರ ಜೂನ್ 3ರಂದು ಬಿಡುಗಡೆಯಾಗಲಿದೆ.

ಚಿತ್ರದ ಪೋಸ್ಟರ್ ಅನ್ನು ಹಂಚಿಕೊಂಡ ಅಜಯ್, ‘ಮೈದಾನ್, ಪ್ರತಿಯೊಬ್ಬ ಭಾರತೀಯನಿಗೆ ಆಪ್ತವಾಗುವ ಕಥೆ. ಇದು ನನಗೆ ಬಹಳ ಮುಖ್ಯವಾದ ಚಿತ್ರ. ಎಂದು ಬರೆದುಕೊಂಡು ಅವರು ಟ್ವಿಟರ್​ನಲ್ಲಿ ಬಿಡುಗಡೆಯ ದಿನಾಂಕವನ್ನು ಟ್ವೀಟ್ ಮಾಡಿದ್ದಾರೆ. ಚಿತ್ರದಲ್ಲಿ ಅಜಯ್ ಸಯ್ಯದ್ ಅಬ್ದುಲ್ ರಹೀಮ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. 1950-1963ರ ಕಾಲಘಟ್ಟದಲ್ಲಿ ಭಾರತೀಯ ಫುಟ್ಬಾಲ್ ತಂಡದ ಕೋಚ್ ಆಗಿದ್ದ ಅವರು ಭಾರತದಲ್ಲಿ ಫುಟ್ಬಾಲ್ ಜನಪ್ರಿಯಗೊಳಿಸಿದ ವ್ಯಕ್ತಿಯಾಗಿದ್ದಾರೆ. ಚಿತ್ರದಲ್ಲಿ ಅಜಯ್ ದೇವಗನ್ ಜೊತೆಯಲ್ಲಿ, ಕೀರ್ತಿ ಸುರೇಶ್, ಪ್ರಿಯಾಮಣಿ ಮತ್ತು ಗಜರಾಜ್ ರಾವ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಅಜಯ್ ದೇವಗನ್ ನಿರ್ದೇಶನದ ‘ಮೇ ಡೇ’ ಬಿಡುಗಡೆಗೆ ದಿನಾಂಕ ನಿಗದಿ:

ಇತ್ತೀಚೆಗಷ್ಟೇ ಅಜಯ್ ದೇವಗನ್ ಮತ್ತೊಂದು ಮಹತ್ವದ ಘೋಷಣೆಯನ್ನು ಮಾಡಿದ್ದರು. ಅಜಯ್ ನಿರ್ದೇಶನ ಮಾಡುತ್ತಿರುವ ‘ಮೇ ಡೇ’ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಹಾಗೂ ರಾಕುಲ್ ಪ್ರೀತ್ ಸಿಂಗ್ ಕಾಣಿಸಿಕೊಳ್ಳಲಿದ್ದಾರೆ. ಅದನ್ನು ಸ್ವತಃ ಅಜಯ್ ದೇವಗನ್ ನಿರ್ಮಾಣ ಮಾಡುತ್ತಿದ್ದು, ಪ್ರಮುಖ ಪಾತ್ರವೊಂದರಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಇದರೊಂದಿಗೆ ಚಿತ್ರದಲ್ಲಿ ರಾಕುಲ್ ಪ್ರೀತ್ ಸಿಂಗ್ ಕೂಡ ಕಾಣಿಸಿಕೊಳ್ಳುತ್ತಿದ್ದು, ಥ್ರಿಲ್ಲರ್ ಮಾದರಿಯ ಚಿತ್ರ ಇದಾಗಿರಲಿದೆ ಎಂದಿದ್ದದು. ಚಿತ್ರವು ಮುಂದಿನ ವರ್ಷದ ಏಪ್ರಿಲ್ 29ರಂದು ಬಿಡುಗಡೆಯಾಗಲಿದೆ ಎಂದು ಅಜಯ್ ಟ್ವೀಟ್ ಮುಖಾಂತರ ತಿಳಿಸಿದ್ದಾರೆ.

ಇದನ್ನೂ ಓದಿ:

ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮೊದಲು ಭಾವುಕ ಪೋಸ್ಟ್​ ಹಾಕಿದ್ದ ಸ್ಯಾಂಡಲ್​ವುಡ್​ ನಟಿ

ಅಪ್ಪನನ್ನೇ ಮನೆ ಬಾಗಿಲ ಮುಂದೆ ಗಂಟೆಗಟ್ಟಲೆ ಕಾಯಿಸಿದ್ರಾ ನಟ ವಿಜಯ್​? ತಂದೆಯಿಂದಲೇ ಸಿಕ್ತು ಸ್ಪಷ್ಟನೆ

Published On - 3:17 pm, Thu, 30 September 21