AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Photo: ನವ ಜೋಡಿಗೆ 5 ಲೀಟರ್ ಪೆಟ್ರೋಲ್ ಗಿಫ್ಟ್ ಕೊಟ್ಟ ತಮಿಳು ಹಾಸ್ಯನಟ ಮಯಿಲ್ ಸಾಮಿ; ಶುಭ ಹಾರೈಸಿ ಹೇಳಿದ್ದೇನು ಗೊತ್ತಾ?

Tamil actor comedian Mayilsamy: ತಮಿಳು ಹಾಸ್ಯ ನಟ ಮಯಿಲ್ ಸಾಮಿ ನವ ಜೋಡಿಗೆ 5 ಲೀಟರ್ ಪೆಟ್ರೋಲ್ ಉಡುಗೊರೆಯಾಗಿ ನೀಡಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

Viral Photo: ನವ ಜೋಡಿಗೆ 5 ಲೀಟರ್ ಪೆಟ್ರೋಲ್ ಗಿಫ್ಟ್ ಕೊಟ್ಟ ತಮಿಳು ಹಾಸ್ಯನಟ ಮಯಿಲ್ ಸಾಮಿ; ಶುಭ ಹಾರೈಸಿ ಹೇಳಿದ್ದೇನು ಗೊತ್ತಾ?
ನವ ಜೋಡಿಗೆ 5 ಲೀಟರ್ ಪೆಟ್ರೋಲ್ ಗಿಫ್ಟ್ ಕೊಟ್ಟ ತಮಿಳು ಹಾಸ್ಯನಟ ಮಯಿಲ್ ಸಾಮಿ
TV9 Web
| Edited By: |

Updated on: Aug 20, 2021 | 9:48 AM

Share

ಸಾಮಾಜಿಕ ಜಾಲತಾಣದಲ್ಲಿ ಅದೆಷ್ಟೋ ವಿಡಿಯೋಗಳು, ಫೋಟೋಗಳು ವೈರಲ್ ಆಗುತ್ತಿರುತ್ತದೆ. ಅದೇ ರೀತಿ ಲೀಟರ್ ಪೆಟ್ರೋಲ್, ಡೀಸೆಲ್ ದರ ಏರಿಕೆ ಕಾಣುತ್ತಿದ್ದು ಗರಿಷ್ಠ ಮಟ್ಟ ತಲುಪಿ ಇತಿಹಾಸ ಸೃಷ್ಟಿಸಿದೆ. ಸಾಮಾನ್ಯ ಜನರ ಕೆಂಗಣ್ಣಿಗೆ ಕಾರಣವಾಗಿದೆ. ವಾಹನಗಳನ್ನು ರಸ್ತೆಗಿಳಿಸಲು ಭಯ ಪಡುವ ಪರಿಸ್ಥಿತಿ ಎದುರಾಗಿದೆ. ಈಗೆಲ್ಲ ಪೆಟ್ರೋಲ್ ಗಿಫ್ಟ್ ಕೊಟ್ಟರೆ ಚಿನ್ನಾಭರಣವನ್ನೇ ಉಡುಗೊರೆಯಾಗಿ ನೀಡಿದಂತೆ! ಇದೀಗ ವೈರಲ್ ಆದ ಸುದ್ದಿಯೂ ಅಂಥದ್ದೇ.. ತಮಿಳು ಹಾಸ್ಯ ನಟ ಮಯಿಲ್ ಸಾಮಿ ನವ ಜೋಡಿಗೆ 5 ಲೀಟರ್ ಪೆಟ್ರೋಲ್ ಉಡುಗೊರೆಯಾಗಿ ನೀಡಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

ಹೊಸದಾಗಿ ಮದುವೆಯಾದ ಜೋಡಿಗೆ ಉಡುಗೊರೆ ನೀಡಲು ವೇದಿಕೆಗೆ ಮಯಿಲ್ ಸಾಮಿಲ್ ಹತ್ತುತ್ತಿದ್ದಂತೆಯೇ 2 ಪ್ಲಾಸ್ಟಿಕ್ ಕ್ಯಾನ್​ಗಳು ಕಾಣಿಸಿಕೊಂಡಿವೆ. ಎರಡೂ ಪ್ಲಾಸ್ಟಿಕ್ ಕ್ಯಾನ್​ಗಳಲ್ಲಿ ಪೆಟ್ರೋಲ್ಅನ್ನು ತುಂಬಿಸಲಾಗಿದೆ. ಅವುಗಳನ್ನು ಉಡುಗೊರೆಯಾಗಿ ನೀಡುತ್ತಾ ವಧು ವರರಿಗೆ ಗುಟ್ಟೊಂದನ್ನು ಮಯಿಲ್ ಸಾಮಿ ಹೇಳಿದ್ದಾರೆ.

ಉಡುಗೊರೆಯಾಗಿ ಪೆಟ್ರೋಲ್ ನೀಡಿದ ಬಳಿಕ, ಹೊರಗಡೆ ತಿರುಗಾಡಲು ಇದು ತುಂಬಾ ಮುಖ್ಯವಾಗುತ್ತದೆ. ಇದನ್ನು ಜೋಪಾನವಾಗಿ ಕಾಯ್ದುಕೊಂಡು ಉಪಯೋಗಿಸಿ ಎಂದು ತಮಾಷೆ ಮಾಡುತ್ತಾ 5 ಲೀಟರ್ ಪೆಟ್ರೋಲ್ಅನ್ನು ಉಡುಗೊರೆಯಾಗಿ ನೀಡಿದ ತಮಿಳಿನ ಹಾಸ್ಯನಟ ಮಯಿಲ್ ಸಾಮಿ ಶುಭ ಹಾರೈಸಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಪೆಟ್ರೋಲ್ ಬೆಲೆ ಏರಿಕೆ ಕಾಣುತ್ತಿರುವುದರಿಂದಾಗಿ ಅದೆಷ್ಟೋ ಪ್ರತಿಭಟನೆಗಳು ನಡೆದಿವೆ. ತಮಿಳುನಾಡಿನಲ್ಲಿ ಪೆಟ್ರೋಲ್ ಬೆಲೆಯನ್ನು 3 ರೂಪಾಯಿ ಇಳಿಕೆ ಮಾಡುವಂತೆ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಕೂಗಿದ್ದಾರೆ. ಈ ಪ್ರತಿಭಟನೆಯಲ್ಲಿ ಹಾಸ್ಯ ನಟ ಮಯಿಲ್ ಸಾಮಿ ಅವರೂ ಸಹ ಬೆಲೆ ಏರಿಕೆಯ ವಿರುದ್ಧ ಧ್ವನಿ ಎತ್ತಿದ್ದಾರೆ.

ಇದನ್ನೂ ಓದಿ:

Viral News: ಪ್ರೇಯಸಿಗಾಗಿ ಹುಡುಗಿಯಂತೆ ಡ್ರೆಸ್ ಧರಿಸಿ, ಮೇಕಪ್ ಮಾಡಿಕೊಂಡು ಪರೀಕ್ಷೆ ಬರೆದ ಪ್ರೇಮಿ!

Viral Video: ದೈತ್ಯಾಕಾರದ ಉಡ ಹೊತ್ತು ಮುದ್ದಾಡಿದ ಮಹಿಳೆ; ಟೆಡ್ಡಿ ಬೇರ್ ಅಂದುಕೊಂಡಳಾ ಹೇಗೆ? ನೆಟ್ಟಿಗರ ಪ್ರಶ್ನೆ

(Tamil Nadu new couple gets 5 liter petrol gift by Tamil actor comedian Mayilsamy pic viral in social media)