ರೋಬೋಟ್ಗಿಂತ ವೇಗವಾಗಿ ದೋಸೆ ಮಾಡ್ತಾನೆ ಈತ! ಆನಂದ್ ಮಹೀಂದ್ರ ಹಂಚಿಕೊಂಡ ವಿಡಿಯೋ ವೈರಲ್
Viral Video: ವ್ಯಕ್ತಿಯ ಅಸಾಧಾರಣ ಕೌಶಲ್ಯವನ್ನು ಮಹೀಂದ್ರ ಶ್ಲಾಘಿಸಿದ್ದಾರೆ. ರೋಬೋಟ್ಗಳಿಗಿಂತಲೂ ಹೆಚ್ಚಿನ ವೇಗದಲ್ಲಿ ಈತ ಕೆಲಸ ಮಾಡುತ್ತಿದ್ದಾನೆ. ಈತನಿಗಿಂತ ರೋಬೋಟ್ ನಿಧಾನಗತಿಯಲ್ಲಿ ಸಾಗುವಂತೆ ಅನಿಸುತ್ತದೆ ಎಂದು ಹೇಳಿದ್ದಾರೆ.
ಉದ್ಯಮಿ ಆಗಿರುವ ಆನಂದ್ ಮಹೀಂದ್ರ ಆಗಾಗ ಕುತೂಹಲ ಕೆರಳಿಸುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ತಮ್ಮ ಟ್ವಿಟರ್ ಅಧಿಕೃತ ಖಾತೆಯಲ್ಲಿ ಆಶ್ಚರ್ಯಕರ ಅಚ್ಚರಿಯ ವಿಡಿಯೋಗಳನ್ನು ಹರಿಬಿಡುತ್ತಾರೆ. ಇದೀಗ ಕೂಡ ವ್ಯಕ್ತಿ ದೋಸೆ ಮಾಡುತ್ತಿರುವ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ರೋಬೋಟ್ಗಿಂತಲೂ ವೇಗವಾಗಿ ಈತ ದೋಸೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಈತನು ದೋಸೆ ಮಾಡುತ್ತಿರುವ ವೇಗ ನೋಡಿದ ನೆಟ್ಟಿಗರು ಆಶ್ಚರ್ಯಗೊಂಡಿದ್ದಾರೆ.
ವ್ಯಕ್ತಿಯ ಅಸಾಧಾರಣ ಕೌಶಲ್ಯವನ್ನು ಮಹೀಂದ್ರ ಶ್ಲಾಘಿಸಿದ್ದಾರೆ. ರೋಬೋಟ್ಗಳಿಗಿಂತಲೂ ಹೆಚ್ಚಿನ ವೇಗದಲ್ಲಿ ಈತ ಕೆಲಸ ಮಾಡುತ್ತಿದ್ದಾನೆ. ಈತನಿಗಿಂತ ರೋಬೋಟ್ ನಿಧಾನಗತಿಯಲ್ಲಿ ಸಾಗುವಂತೆ ಅನಿಸುತ್ತದೆ ಎಂದು ಹೇಳಿದ್ದಾರೆ.
This gentleman makes robots look like unproductive slowpokes… I’m tired just watching him…and hungry, of course.. pic.twitter.com/VmdzZDMiOk
— anand mahindra (@anandmahindra) August 17, 2021
ನಾನು ಅವನನ್ನು ನೋಡಿ ಸುಸ್ತಾಗಿದ್ದೇನೆ… ಖಂಡಿತವಾಗಿಯೂ ನನಗೆ ತುಂಬಾ ಹಸಿವಾಗುತ್ತಿದೆ ಎಂದು ಟ್ವಿಟರ್ನಲ್ಲಿ ಶೀರ್ಷಿಕೆ ನೀಡುವ ಮೂಲಕ ಉದ್ಯಮಿ ಆನಂದ್ ಮಹೀಂದ್ರ ವಿಡಿಯೋ ಹರಿಬಿಟ್ಟಿದ್ದಾರೆ.
ಇಲ್ಲಿಯವರೆಗೆ ವಿಡಿಯೋ 18,000 ಕ್ಕೂ ಹೆಚ್ಚು ಲೈಕ್ಸ್ಗಳನ್ನು ಪಡೆದುಕೊಂಡಿದೆ. 1,500 ಕ್ಕೂ ಹೆಚ್ಚು ರೀಟ್ವೀಟ್ ಮಾಡಲಾಗಿದೆ. ಉದ್ಯಮಿ ಆನಂದ್ ಮಹೀಂದ್ರ ತನ್ನ ಟ್ವಿಟರ್ ಹಿಂಬಾಲಕರಿಗಾಗಿ ಉಲ್ಲಾದ ಅದೆಷ್ಟೋ ವಿಡಿಯೋಗಳನ್ನು ಆಗಾಗ ಹಂಚಿಕೊಳ್ಳುತ್ತಿರುತ್ತಾರೆ.
ಕಳೆದ ವಾರ ಮಹೀಂದ್ರ, ವ್ಯಾಪಾರಸ್ಥ ತಮ್ಮ ಯಂತ್ರದ ಮೂಲಕ ತೆಂಗಿನ ನೀರನ್ನು ಗ್ರಾಹಕರಿಗೆ ನೀಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದರು. ಹೊಸ ಯಂತ್ರ ತೆಂಗಿನಕಾಯಿಗೆ ಬಹುಬೇಗ ರಂಧ್ರವನ್ನು ಮಾಡಿಕೊಡುತ್ತದೆ. ನಂತರ ನೀರನ್ನು ಫಿಲ್ಟರ್ ಮಾಡಿ ಲೋಟಕ್ಕೆ ವರ್ಗಾಯಿಸುತ್ತದೆ. ಈ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿತ್ತು.
ಇದನ್ನೂ ಓದಿ:
Viral Video: ರಸ್ತೆಗಿಳಿದ ಭಾರತೀಯನ ಚಿನ್ನದ ಕಾರಿನ ವಿಡಿಯೋ ವೈರಲ್; ಕನ್ಫ್ಯೂಸ್ ಆದ ಆನಂದ್ ಮಹೀಂದ್ರಾ
ಟ್ವೀಟ್ ಮೂಲಕ ಆಸ್ಟ್ರೇಲಿಯನ್ನರ ಕೆನ್ನೆಗೆ ನಯವಾಗಿಯೇ ಬಾರಿಸಿದ ಆನಂದ್ ಮಹೀಂದ್ರಾ! ಏನದು?
(Anand Mahindra shares Dosa man he is faster than robot viral video)
Published On - 1:27 pm, Thu, 19 August 21