Shocking Video: ಚಲಿಸುತ್ತಿರುವ ರೈಲು ಹತ್ತಲು ಹೋಗಿ ಜಾರಿ ಬಿದ್ದ ಮಹಿಳೆ; ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರು

Viral Video: ಕೆಲ ಸೆಕೆಂಡುಗಳಲ್ಲಿ ಮಹಿಳೆ ಕೂಡಾ ರೈಲು ಹತ್ತಲು ಮುಂದಾಗಿದ್ದಾರೆ. ರೈಲು ಚಲಿಸುತ್ತಿದ್ದಾಗಲೇ ರೈಲು ಹತ್ತಲು ಮುಂದಾದ್ದರಿಂದ ಹಿಡಿತ ಸಿಗದೇ ಕೆಳಗೆ ಬಿದ್ದಿದ್ದಾರೆ.

Shocking Video: ಚಲಿಸುತ್ತಿರುವ ರೈಲು ಹತ್ತಲು ಹೋಗಿ ಜಾರಿ ಬಿದ್ದ ಮಹಿಳೆ; ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರು
ಚಲಿಸುತ್ತಿರುವ ರೈಲು ಹತ್ತಲು ಹೋಗಿ ಜಾರಿ ಬಿದ್ದ ಮಹಿಳೆ
TV9kannada Web Team

| Edited By: Apurva Kumar Balegere

Aug 19, 2021 | 12:13 PM

ಸಾಮಾಜಿಕ ಜಾಲತಾಣದಲ್ಲಿ ಅದೆಷ್ಟೋ ವಿಡಿಯೋಗಳು ಹರಿದಾಡುತ್ತಿರುತ್ತವೆ. ಕೆಲವೊಂದಿಷ್ಟು ತಮಾಷೆಯ ವಿಡಿಯೋಗಳಾಗಿದ್ದರೆ ಇನ್ನು ಕೆಲವು, ಅಚ್ಚರಿ ಮೂಡಿಸುವ ವಿಡಿಯೋಗಳಾಗಿರುತ್ತವೆ. ಇನ್ನು ಕೆಲವು ವಿಡಿಯೋಗಳುನ್ನು ನೋಡ ನೋಡುತ್ತಿದ್ದಂತೆಯೇ ಭಯವಾಗುವುದಂತೂ ಸತ್ಯ. ಒಮ್ಮೆಲೆ ಮೈ ಜುಂ ಎನಿಸುವ ವಿಡಿಯೋವೊಂದು ಇದೀಗ ಹರಿದಾಡುತ್ತಿದೆ. ಸುತ್ತಲಿರುವ ಜನ ರಕ್ಷಿಸದಿದ್ದರೆ ಮಹಿಳೆಯ ಪ್ರಾಣವೇ ಕಳೆದು ಹೋಗುತ್ತಿತ್ತು. ಅಂತಹದ್ದೊಂದು ಭಯಾನಕ ವಿಡಿಯೋ ವೈರಲ್ ಆಗಿದೆ.

ಘಟನೆ ಕಳೆದ ಮಂಗಳವಾರ ಮಧ್ಯಪ್ರದೇಶದ ಇಂದೋರ್ ಪಟ್ಟಣದಲ್ಲಿ ನಡೆದಿದೆ. ರೈಲು ಹತ್ತಲೆಂದು ಹಲವು ಮಂದಿ ಕಾಯುತ್ತಾ ನಿಂತಿರುತ್ತಾರೆ. ರೈಲು ನಿಧಾನವಾಗುತ್ತಾ ಇದ್ದಂತೆಯೇ ಅಲ್ಲದ್ದ ಒಂದೆರಡು ಮಂದಿ ರೈಲನ್ನು ಹತ್ತಿಕೊಳ್ಳುತ್ತಾರೆ. ಗಡಿಬಿಡಿಯಲ್ಲಿದ್ದ ಮಹಿಳೆ ರೈಲು ಹತ್ತಲು ಮುಂದಾಗುತ್ತಾಳೆ. ಕಾಲುಜಾರಿ ಕೆಳಗೆ ಬಿದ್ದಿದ್ದಾಳೆ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ವೇಗವಾಗಿ ಚಲಿಸುತ್ತಿರುವ ರೈಲು ನಿಲ್ದಾಣ ಬಂದಾಕ್ಷಣ ನಿಧಾನವಾಗುತ್ತಿದೆ. ಹಲವು ಮಂದಿ ರೈಲು ಹತ್ತಲು ಕಾಯುತ್ತಾ ನಿಂತಿದ್ದಾರೆ. ಅವರಲ್ಲಿ ಕೆಲವರು ರೈಲು ಹತ್ತಿದ್ದಾರೆ ಕೂಡ. ಕೆಲ ಸೆಕೆಂಡುಗಳಲ್ಲಿ ಮಹಿಳೆ ಕೂಡಾ ರೈಲು ಹತ್ತಲು ಮುಂದಾಗಿದ್ದಾರೆ. ರೈಲು ಚಲಿಸುತ್ತಿದ್ದಾಗಲೇ ರೈಲು ಹತ್ತಲು ಮುಂದಾದ್ದರಿಂದ ಹಿಡಿತ ಸಿಗದೇ ಕೆಳಗೆ ಬಿದ್ದಿದ್ದಾರೆ. ಈ ಭಯಾನಕ ಘಟನೆ ಗಮನಿಸಿದ ಸುತ್ತಲಿದ್ದ ಜನರ ತಡ ಮಾಡದೇ ಮಹಿಳೆಯನ್ನು ರಕ್ಷಿಸಿದ್ದಾರೆ. ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ರೈಲ್ವೇ ಪೊಲೀಸ್ ಅಧಿಕಾರಿಯೂ ಸಹ ಮಹಿಳೆಯನ್ನು ರಕ್ಷಿಸಲು ಓಡುತ್ತಿರುವುದನ್ನು ನೋಡಬಹುದು.

ಮಹಿಳೆ, ಓರ್ವ ಪುರುಷ ಮತ್ತು ಮಗುವಿನೊಂದಿಗೆ ರೈಲು ಹತ್ತಲು ಪ್ರಯತ್ನಿಸುತ್ತಿದ್ದರು. ಲಗೇಜನ್ನು ಹಿಡಿದು ಮಗು ಮತ್ತು ಪುರುಷ ರೈಲು ಹತ್ತಿದ್ದಾರೆ. ಗಡಿಬಿಡಿಯಲ್ಲಿದ್ದ ಮಹಿಳೆ ರೈಲು ಹತ್ತಲು ಹೋಗಿ ಜಾರಿ ಬಿದ್ದಿದ್ದಾರೆ. ರೈಲು ನಿಲ್ದಾಣ ಮತ್ತು ಪ್ಲಾಟ್​ಫಾರ್ಮ್​​ ನಡುವೆ ಸಿಲುಕಿಕೊಂಡಿದ್ದಾರೆ ಎಂದು ರೈಲ್ವೇ ಪಿಆರ್​ಒ ಘಟನೆಯನ್ನು ವಿವರಿಸಿದ್ದಾರೆ.

ಅಲ್ಲಿ ಸುತ್ತಮುತ್ತಲಿದ್ದ ಪ್ರಯಾಣಿಕರು ಜಾಗರೂಕತೆಯಿಂದ ಮಹಿಳೆಯನ್ನು ಎಳೆದಿದ್ದಾರೆ. ರೈಲು ಕೂಡ ನಿಂತಿತು ಮತ್ತು ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:

Neo Metro: ಮೈಸೂರಿಗೆ ಬರಲಿರುವ ನಿಯೋ ಮೆಟ್ರೋ ವಿಶೇಷತೆಗಳೇನು? ರಸ್ತೆಯ ಮೇಲೆ ಓಡಾಡುವ ರೈಲು ಹೇಗಿರಲಿದೆ?

Bengaluru Metro: ರಾತ್ರಿ ಕರ್ಫ್ಯೂ ಹಿನ್ನೆಲೆ; ಮೆಟ್ರೋ ರೈಲು ಕಾರ್ಯನಿರ್ವಹಿಸುವ ಅವಧಿಯಲ್ಲಿ ಬದಲಾವಣೆ

(Women falling under moving train in madhyapradesh indore viral video)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada