Shocking Video: ಫಾಸ್ಟ್​ಫುಡ್​ ತಯಾರಿಸಲು ತಡವಾಗಿದೆ ಎಂದು ವಾದಕ್ಕಿಳಿದ ಗ್ರಾಹಕ; ಸಿಟ್ಟಿನಲ್ಲಿ ಕತ್ತರಿ ಹಿಡಿದು ಬಿಸಾಡಿದ ಹೋಟೆಲ್​ ಸಿಬ್ಬಂದಿ

Viral Video: ಕೋಪಗೊಂಡ ಗ್ರಾಹಕರೂ ಫೇಸ್ಬುಕ್​ನಲ್ಲಿ ವಿಡಿಯೋ ಹಂಚಿಕೊಳ್ಳುತ್ತಿದ್ದೇನೆ ಅನ್ನುವಾಗ ಸಿಟ್ಟಿಗೆದ್ದ ಹೋಟೆಲ್ ಸಿಬ್ಬಂದಿ ಎದುರಿಗಿದ್ದ ಕತ್ತರಿಯನ್ನು ಎಸೆದಿದ್ದಾಳೆ ಭಯಾನಕ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Shocking Video: ಫಾಸ್ಟ್​ಫುಡ್​ ತಯಾರಿಸಲು ತಡವಾಗಿದೆ ಎಂದು ವಾದಕ್ಕಿಳಿದ ಗ್ರಾಹಕ; ಸಿಟ್ಟಿನಲ್ಲಿ ಕತ್ತರಿ ಹಿಡಿದು ಬಿಸಾಡಿದ ಹೋಟೆಲ್​ ಸಿಬ್ಬಂದಿ
Follow us
TV9 Web
| Updated By: Digi Tech Desk

Updated on:Aug 19, 2021 | 12:13 PM

ರೆಸ್ಟೋರೆಂಟ್​ ಅಥವಾ ಹೋಟೆಲ್ ​ಆಗಿರಲಿ ಕೆಲಸಗಾರರು ಹೆಚ್ಚು ಒತ್ತಡದಲ್ಲಿಯೇ ಕೆಲಸ ಮಾಡಬೇಕಾಗುತ್ತದೆ. ಹೋಟೆಲ್​ಗೆ ಹೆಚ್ಚು ಗ್ರಾಹಕರು ಬೇಕು ಅಂದಾದಾಗ ಸಿಬ್ಬಂದಿ ಬಹಳ ಪ್ರೀತಿಯಿಂದ ಸಹನೆಯಿಂದ ವರ್ತಿಸುವುದು ಅವಶ್ಯಕ. ಆದರೆ ಇಲ್ಲಿರುವ ಹೋಟೆಲ್​ನ ಕೆಲಸಗಾರ್ತಿ ಸಿಟ್ಟಿಗೆದ್ದು ಎದುರಿಗಿದ್ದ ಕತ್ತರಿಯನ್ನು ಗ್ರಾಹಕರಿಗೆ ಬಿಸಾಡಿದ್ದಾಳೆ. ವಿಡಿಯೋ ಇದೀಗ ವೈರಲ್ ಆಗಿದೆ.

ಹೋಟೆಲ್ ಮ್ಯಾನೇಜ್ ಮಾಡುವುದು ಚಾಲೆಂಜಿಂಗ್ ಆಗಿರುತ್ತದೆ. ಹೆಚ್ಚು ತಾಳ್ಮೆಯಿಂದ ವರ್ತಿಸುವುದರ ಜೊತೆಗೆ ಗ್ರಾಹಕರೊಂದಿಗೆ ಸಹನೆಯಿಂದ ನಡೆದುಕೊಳ್ಳಬೇಕಾದುದು ಅವಶ್ಯಕ. ಅದರಲ್ಲಿಯೂ ಕೆಲವು ಬಾರಿ ಫಾಸ್ಟ್ ಫುಡ್ ಕೆಲಸಗಾರರು 12-14 ತಾಸುಗಳ ಕಾಲ ದುಡಿಯುತ್ತಾರೆ. ಹಾಗಿರುವಾಗ ಹೆಚ್ಚು ಒತ್ತಡದಿಂದ ಕೆಲಸ ಮಾಡುತ್ತಿರುತ್ತಾರೆ. ಈ ಸಂದರ್ಭದಲ್ಲಿ ಗ್ರಾಹಕರೋರ್ವರು ಆರ್ಡ್ರ್​ ಮಾಡಿದ ಪದಾರ್ಥವನ್ನು ತರಲು ತಡವಾಗಿದೆ ಎಂದು ವಾದಕ್ಕೆ ಇಳಿಯುತ್ತಾರೆ. ಮ್ಯಾನೇಜರ್ ಬಳಿ ಮಾತನಾಡುವಂತೆ ಕೇಳಿದ್ದಾರೆ.

ಕೆಲಸಗಾರ್ತಿ ನಾನೇ ಮ್ಯಾನೇಜರ್ ಎನ್ನುವಂತೆ ವರ್ತಿಸುತ್ತಾ ಗ್ರಾಹಕರೊಡನೆ ವಾದಕ್ಕೆ ಇಳಿದಿದ್ದಾಳೆ. ಕೋಪಗೊಂಡ ಗ್ರಾಹಕರೂ ಫೇಸ್ಬುಕ್​ನಲ್ಲಿ ವಿಡಿಯೋ ಹಂಚಿಕೊಳ್ಳುತ್ತಿದ್ದೇನೆ ಅನ್ನುವಾಗ ಸಿಟ್ಟಿಗೆದ್ದ ಹೋಟೆಲ್ ಸಿಬ್ಬಂದಿ ಎದುರಿಗಿದ್ದ ಕತ್ತರಿಯನ್ನು ಎಸೆದಿದ್ದಾಳೆ ಭಯಾನಕ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ನಾನು ಪೊಲೀಸರಿಗೆ ಕರೆ ಮಾಡುತ್ತಿದ್ದೇನೆ.. ಹೋಟೆಲ್ ಸಿಬ್ಬಂದಿ ನನ್ನ ಮೇಲೆ ಹಲ್ಲೆ ಮಾಡುತ್ತಿದ್ದಾಳೆ ಎಂದು ಗ್ರಾಹಕ ಹೇಳಿರುವುದು ವಿಡಿಯೋದಲ್ಲಿ ನೋಡಬಹುದು. ಘಟನೆ ಬಾಲ್ಟಿಮೋರ್ ನಗರದಲ್ಲಿ ನಡೆದಿದ್ದು ಪೊಲೀಸರು ತನಿಖೆ ನಡೆಸುವುದಾಗಿ ಹೇಳಿದ್ದಾರೆ. ಈ ಕುರಿತಂತೆ ವರದಿಗಳಿಂದ ಮಾಹಿತಿ ತಿಳಿದು ಬಂದಿದೆ.

ಇದನ್ನೂ ಓದಿ:

Shocking Video: ಗ್ರಾಹಕರಿಗೆ ಕೊಡಬೇಕಾಗಿದ್ದ ಊಟ ಕದ್ದ ಡೆಲಿವರಿ ಬಾಯ್; ಶಾಕಿಂಗ್ ವಿಡಿಯೋ ವೈರಲ್

Shocking Video: ಮಾಸ್ಕ್ ಧರಿಸದ್ದಕ್ಕೆ ದಂಡ ವಿಧಿಸಿದ ಅಧಿಕಾರಿಗೆ ಹಿಗ್ಗಾಮುಗ್ಗ ಥಳಿಸಿದ ಮಹಿಳೆ; ವಿಡಿಯೋ ವೈರಲ್

(Fast food Worker Throwing Scissors at customer watch Shocking Video)

Published On - 2:01 pm, Wed, 18 August 21