ಸೂಪರ್ ಮಾರ್ಕೆಟ್ನಲ್ಲಿ ಶಾಪಿಂಗ್ಗಾಗಿ ಹೋದವರಿಗೆ ಕಂಡಿದ್ದು ಹೆಬ್ಬಾವು! ಗ್ರಾಹಕರು ಕಂಗಾಲು
ಹೆಬ್ಬಾವು ನೋಡಿದ ಗ್ರಾಹರು ಒಮ್ಮೆಲೆ ಭಯಗೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದ್ದು ವಿಡಿಯೋ ಇದೀಗ ಫುಲ್ ವೈರಲ್ ಆಗಿದೆ.
ಹಾವು ಅಂದಾಕ್ಷಣ ಭಯವಾಗುವುದಂತೂ ಸತ್ಯ. ಅದರಲ್ಲಿಯೂ ಹೆಬ್ಬಾವು ಒಮ್ಮೆಲೆಗೆ ನಿಮ್ಮ ಮುಂದೆ ಬಂದುಬಿಟ್ಟರೆ? ಕ್ಷಣವನ್ನೂ ಊಹಿಸಿಕೊಳ್ಳಲೂ ಭಯವಾಗುತ್ತದೆ. ಆಸ್ಟ್ರೇಲಿಯಾದ ಸೂಪರ್ ಮಾರ್ಕೆಟ್ನಲ್ಲಿ ಮಸಾಲೆ ಪದಾರ್ಥಗಳು ಸಿಗುವ ಜಾಗದಲ್ಲಿ ಹೆಬ್ಬಾವು ಪತ್ತೆಯಾಗಿದೆ. ನೋಡಿದ ಗ್ರಾಹಕರು ಒಮ್ಮೆಲೆ ಭಯಗೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದ್ದು ವಿಡಿಯೋ ಇದೀಗ ಫುಲ್ ವೈರಲ್ ಆಗಿದೆ.
ಹಿಲರಿ ಲೇಹ್ ಎಂಬ ಮಹಿಳೆಯು ಸೂಪರ್ ಮಾರ್ಕೆಟ್ನಲ್ಲಿ ಕಂಡು ಬಂದು ಹೆಬ್ಬಾವಿನ ಫೋಟೋವನ್ನು ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದಾರೆ. ಅದೆಷ್ಟೋ ಸಮಯದಿಂದ ಹೆಬ್ಬಾವು ಇದ್ದ ಜಾಗದಲ್ಲಿಯೇ ಇತ್ತು. ಮಸಾಲೆ ಪದಾರ್ಥಗಳ ಹಿಂದೆ ಅಡಿಗಿತ್ತು. ಯಾರಿಗೂ ಕಾಣಿಸುತ್ತಿರಲಿಲ್ಲ. ಮಸಾಲೆ ಪದಾರ್ಥಗಳನ್ನು ತೆಗೆಯಲು ಹೋದಾಗ ಹಾವು ಮುಖವನ್ನು ಹೊರಗೆ ಹಾಕಿದೆ. ಒಮ್ಮೆಲೆ ಭಯವಾಯಿತು ಎಂದು ಹೇಳಿದ್ದಾರೆ.
ಹಾವು ಸುಮಾರು 10 ಅಡಿ ಉದ್ದವಾಗಿತ್ತು. ಹಾವನ್ನು ಹೊರಗಡೆ ತರಲು ಹರಸಾಹಸವನ್ನೇ ಪಡಬೇಕಾಯಿತು. ಹಾವು ಹಿಡಿಯುವವರಿಗೆ ಕರೆಮಾಡಿ ಹಾವು ಸುರಕ್ಷಿತವಾಗಿರುವಂತೆ ಹೇಳಲಾಗಿದೆ ಎಂದು ಅವರು ಹೇಳಿದ್ದಾರೆ.
ಸೂಪರ್ಮಾರ್ಕೆಟ್ ಮಾಲೀಕರು ಮಾತನಾಡಿ, ನಮ್ಮ ಅಂಗಡಿಗೆ ಹೊಸ ಗ್ರಾಹಕರೊಬ್ಬರು ಆಗಮಿಸಿದ್ದರು. ಮಸಾಲೆ ಪದಾರ್ಥಗಳ ಹಿಂದೆ ಅಡಗಿ ಕುಳಿತಿದ್ದರು. ಗ್ರಾಹಕರು ತುಂಬಾ ಅಪರೂಪದವರು ಎಂದು ಹೇಳಿದ್ದಾರೆ. ಹಾವು ಇತರ ಗ್ರಾಹಕರಿಗೆ ಏನಾದರೂ ಮಾಡಬಹುದೆಂಬ ಭಯವಿತ್ತು, ಗ್ರಾಹಕರ ಸುರಕ್ಷತೆಗಾಗಿ ಕ್ರಮಗಳನ್ನು ತೆಗೆದುಕೊಳ್ಳಲಾಯಿತು ಎಂದು ಹೇಳಿದ್ದಾರೆ.
ಇದನ್ನೂ ಓದಿ:
Shocking News: ಬೈಕ್ ಹ್ಯಾಂಡಲ್ನಿಂದ ವಿಚಿತ್ರ ಶಬ್ದ; ತೆರೆದು ನೋಡಿದ್ರೆ 5 ಅಡಿ ಉದ್ದದ ನಾಗರಹಾವು!
Video: ವಿಮಾನವೇರಿದ ಹಾವು..; ಸರಕು ಹಾಕುವ ಜಾಗದಲ್ಲಿ ಸ್ನೇಕ್ ನೋಡಿ ಕಂಗಾಲಾದ ಸಿಬ್ಬಂದಿ
Published On - 11:55 am, Wed, 18 August 21