Viral News: ಪ್ರೇಯಸಿಗಾಗಿ ಹುಡುಗಿಯಂತೆ ಡ್ರೆಸ್ ಧರಿಸಿ, ಮೇಕಪ್ ಮಾಡಿಕೊಂಡು ಪರೀಕ್ಷೆ ಬರೆದ ಪ್ರೇಮಿ!

ತನ್ನ ಪ್ರೇಯಸಿ ಪರೀಕ್ಷೆಯಲ್ಲಿ ಪಾಸ್ ಆಗುವುದಿಲ್ಲ ಎಂಬ ಭಯದಲ್ಲಿ ಆಕೆಯ ಬದಲಾಗಿ ತಾನೇ ಆಕೆಯ ಸಿಲೆಬಸ್ ಓದಿಕೊಂಡು, ಹುಡುಗಿಯಂತೆ ಡ್ರೆಸ್ ಮಾಡಿಕೊಂಡು ಆಕೆಯ ಹೆಸರಿನಲ್ಲಿ ಪರೀಕ್ಷೆ ಬರೆದು ಬಂದಿದ್ದಾನೆ 22 ವರ್ಷದ ಭೂಪ.

Viral News: ಪ್ರೇಯಸಿಗಾಗಿ ಹುಡುಗಿಯಂತೆ ಡ್ರೆಸ್ ಧರಿಸಿ, ಮೇಕಪ್ ಮಾಡಿಕೊಂಡು ಪರೀಕ್ಷೆ ಬರೆದ ಪ್ರೇಮಿ!
ಪ್ರೇಯಸಿಗಾಗಿ ಹುಡುಗಿಯಂತೆ ಡ್ರೆಸ್ ಮಾಡಿಕೊಂಡ ಯುವಕ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Aug 17, 2021 | 8:40 PM

ಪ್ರೀತಿಯಲ್ಲಿ ಬಿದ್ದವರಿಗೆ ಯಾವುದೂ ತಪ್ಪು ಎಂದು ಕಾಣುವುದಿಲ್ಲ. ಈಗಂತೂ ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು ಕಡ್ಡಾಯವಾದ್ದರಿಂದ ಯಾರು ಯಾರೆಂಬುದು ಕೂಡ ಕಂಡುಹಿಡಿಯುವುದು ಸುಲಭವಲ್ಲ. ತನ್ನ ಪ್ರೇಯಸಿಯನ್ನು ಬಹಳ ಪ್ರೀತಿಸುತ್ತಿದ್ದ ಯುವಕನೊಬ್ಬ ಆಕೆಯಂತೆಯೇ ಹುಡುಗಿಯ ಡ್ರೆಸ್ ಹಾಕಿಕೊಂಡು ಆಕೆಯ ಬದಲು ಆಕೆಯ ಪರೀಕ್ಷೆ ಬರೆದಿರುವ ವಿಚಿತ್ರ ಮತ್ತು ಶಾಕಿಂಗ್ ಘಟನೆ ಸೆನೆಗಲ್​ನಲ್ಲಿ ನಡೆದಿದೆ.

ಸೆನೆಗಲ್​ನ ಗ್ಯಾಸ್ಟನ್ ಬರ್ಗರ್ ಯುನಿವರ್ಸಿಟಿಯಲ್ಲಿ ಈ ಘಟನೆ ನಡೆದಿದೆ. ತನ್ನ ಪ್ರೇಯಸಿ ಪರೀಕ್ಷೆಯಲ್ಲಿ ಪಾಸ್ ಆಗುವುದಿಲ್ಲ ಎಂಬ ಭಯದಲ್ಲಿ ಆಕೆಯ ಬದಲಾಗಿ ತಾನೇ ಆಕೆಯ ಸಿಲೆಬಸ್ ಓದಿಕೊಂಡು, ಹುಡುಗಿಯಂತೆ ಡ್ರೆಸ್ ಮಾಡಿಕೊಂಡು ಆಕೆಯ ಹೆಸರಿನಲ್ಲಿ ಪರೀಕ್ಷೆ ಬರೆದು ಬಂದಿದ್ದಾನೆ 22 ವರ್ಷದ ಭೂಪ. ಆದರೆ, ಪರೀಕ್ಷೆ ಬರೆಯುವಾಗಲೇ ಆತ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಇದರಿಂದ ತನ್ನ ಪ್ರೇಯಸಿಯ ಭವಿಷ್ಯಕ್ಕೆ ತಾನೇ ತೊಡಕಾಗಿದ್ದಾನೆ.

ಗ್ಯಾಸ್ಟಮ್ ಬರ್ಗರ್ ಯುನಿವರ್ಸಿಟಿಯ ಖಾದಿಮ್ ಎಂಬೂಪ್ ಎಂಬಾತ ಹುಡುಗಿಯಂತೆ ಡ್ರೆಸ್ ಧರಿಸಿ, ಮೇಕಪ್ ಮಾಡಿಕೊಂಡು, ತಲೆಗೆ ಸ್ಕಾರ್ಫ್ ಧರಿಸಿಕೊಂಡು, ಕಿವಿಯೋಲೆ ಹಾಕಿಕೊಂಡು ಮುಖಕ್ಕೆ ಮಾಸ್ಕ್ ಧರಿಸಿಕೊಂಡು ಪರೀಕ್ಷಾ ಹಾಲ್​ಗೆ ಹೋಗಿದ್ದಾನೆ. ಇದೇ ರೀತಿ ಯಾಮಾರಿಸಿ ಮೂರು ಪರೀಕ್ಷೆಗಳನ್ನು ಬರೆದ ಆ ಯುವಕ ನಾಲ್ಕನೇ ದಿನ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಆತನನ್ನು ಪೊಲೀಸರು ಬಂಧಿಸಿ, ಪೊಲೀಸ್ ಸ್ಟೇಷನ್​ಗೆ ಕರೆದುಕೊಂಡು ಹೋಗಿದ್ದಾರೆ.

ಇದನ್ನೂ ಓದಿ: Crime News: ಆನ್​ಲೈನ್​ ಗೇಮ್​ನಲ್ಲಿ 40,000 ರೂ. ಕಳೆದುಕೊಂಡ 13 ವರ್ಷದ ಬಾಲಕ; ಅಮ್ಮ ಬೈದಿದ್ದಕ್ಕೆ ಬೇಸರಗೊಂಡು ಆತ್ಮಹತ್ಯೆ

Viral News: ತಾಳಿ ಕಟ್ಟುವ ಹೊತ್ತಲ್ಲಿ ಮದುವೆ ಬೇಡವೆಂದ ವಧು; ಕಾರಣ ಕೇಳಿದ್ರೆ ಶಾಕ್ ಆಗ್ತೀರ

(Viral News: Man dresses up as his Lover to appear for girlfriend exam get Arrested in Exam Hall)

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ