8,000ಕ್ಕಿಂತಲೂ ಹೆಚ್ಚು ಬಿಯರ್ ಬಾಟಲಿಗಳ ರಾಶಿ, ಅಲ್ಲಲ್ಲೇ ಎಸೆದ ಆಹಾರ ಪದಾರ್ಥ; ಬಾಡಿಗೆ ಕೊಟ್ಟು ಕಂಗಾಲಾದ ಮಾಲೀಕ

ಇದೀಗ ವೈರಲ್ ಆದ ಫೋಟೋದಲ್ಲಿ ಮನೆಯಲ್ಲಿ ಬಾಡಿಗೆಗಿದ್ದ ವ್ಯಕ್ತಿ ಎಷ್ಟು ಅವ್ಯವಸ್ಥೆ ಮಾಡಿದ್ದ ಎಂಬುದು ಕಾಣಿಸುತ್ತಿದೆ. ವಿಡಿಯೋ ನೋಡಿದಾಕ್ಷಣ ಒಮ್ಮೆಲೆ ಮೈ ಜುಂ ಅನಿಸುವುದಂತೂ ಸತ್ಯ. ಆ ಗಲೀಜಿನಲ್ಲಿ ವ್ಯಕ್ತಿ ವಾಸವಾಗಿದ್ದನ್ನು ನಂಬಲೇ ಅಸಾಧ್ಯವೆನಿಸುತ್ತಿದೆ.

8,000ಕ್ಕಿಂತಲೂ ಹೆಚ್ಚು ಬಿಯರ್ ಬಾಟಲಿಗಳ ರಾಶಿ, ಅಲ್ಲಲ್ಲೇ ಎಸೆದ ಆಹಾರ ಪದಾರ್ಥ; ಬಾಡಿಗೆ ಕೊಟ್ಟು ಕಂಗಾಲಾದ ಮಾಲೀಕ
8,000ಕ್ಕಿಂತಲೂ ಹೆಚ್ಚು ಬಿಯರ್ ಬಾಟಲಿಗಳ ರಾಶಿ
Follow us
TV9 Web
| Updated By: shruti hegde

Updated on:Aug 17, 2021 | 1:54 PM

ಸ್ವಂತ ಮನೆಯೇ ಆಗಿರಲಿ ಅಥವಾ ಬಾಡಿಗೆ ಮನೆಯಲ್ಲಿಯೇ ವಾಸವಾಗಿರಲಿ.. ಮನೆಯೆಲ್ಲಾ ಸ್ವಚ್ಛವಾಗಿರಬೇಕು ಎಂಬ ಯೋಚನೆ ಸಹಜ. ಬಾಡಿಗೆಗೆ ಮನೆ ಹುಡುಕುವಾಗಲೂ ಅಷ್ಟೆ. ಸ್ವಚ್ಛವಾಗಿದೆಯೇ, ಇಲ್ಲವೇ? ಎಂದು ಮೊದಲು ನೋಡುತ್ತೇವೆ. ಇದೀಗ ವೈರಲ್ ಆದ ಫೋಟೋದಲ್ಲಿ ಮನೆಯಲ್ಲಿ ಬಾಡಿಗೆಗಿದ್ದ ವ್ಯಕ್ತಿ ಎಷ್ಟು ಅವ್ಯವಸ್ಥೆ ಮಾಡಿದ್ದ ಎಂಬುದು ಕಾಣಿಸುತ್ತಿದೆ. ವಿಡಿಯೋ ನೋಡಿದಾಕ್ಷಣ ಒಮ್ಮೆಲೆ ಮೈ ಜುಂ ಅನಿಸುವುದಂತೂ ಸತ್ಯ. ಆ ಗಲೀಜಿನಲ್ಲಿ ವ್ಯಕ್ತಿ ವಾಸವಾಗಿದ್ದನ್ನು ನಂಬಲೇ ಅಸಾಧ್ಯವೆನಿಸುತ್ತಿದೆ. ಆತನ ಅವ್ಯವಸ್ಥೆ ನೋಡಿ ಮನೆಯ ಮಾಲೀಕ ಧಂಗಾಗಿದ್ದಾನೆ.

ಅಪಾರ್ಟ್​ಮೆಂಟ್​ ಖಾಲಿ ಮಾಡಿದ ಬಳಿಕ ಮನೆ ಕ್ಲೀನ್ ಮಾಡಿಸಲು ಮಾಲೀಕ ಬಂದಿದ್ದಾನೆ. ಮನೆಯ ಒಳಗೆ 8,000ಕ್ಕಿಂತಲೂ ಹೆಚ್ಚು ಬಿಯರ್ ಬಾಟಲಿಗಳು ರಾಶಿ ಹೊಡೆದಿರುವುದು ಕಂಡು ಬಂದಿದೆ. ಇದೊಂದೇ ಅಲ್ಲದೇ ಅಡುಗೆ ಮನೆಯಲ್ಲಿ ಕೊಳೆತು ಬಿದ್ದ ತರಕಾರಿಗಳು ವಾಸನೆ ಬೀರುತ್ತಿದ್ದವು, ಶೌಚಾಲಯವನ್ನು ಸ್ವಚ್ಛಗೊಳಿಸದೇ ಯಾವ ಕಾಲವಾಗಿತ್ತೋ ಏನೋ.. ದುರ್ವಾಸನೆ ಬೀರುತ್ತಿದ್ದವು. ಶೌಚಕ್ಕೆ ಸರಿಯಾಗಿ ನೀರು ಸಹ ಹಾಕುತ್ತಿಲ್ಲದ್ದನ್ನು ನೋಡಿದ ಮಾಲೀಕ ಗೊಂದಲಕ್ಕೊಳಗಾಗಿದ್ದಾನೆ.

ಅಪಾರ್ಟ್ಮೆಂಟ್​ನಲ್ಲಿದ್ದ ಎರಡು ಹಾಸಿಗೆಯು ಅಲ್ಲೋಲ ಕಲ್ಲೋಲವಾಗಿ ಬಿದ್ದಿತ್ತು. ಮನೆಯ ಒಳಗೆ ಪ್ರವೆಶಿಸುತ್ತಿದ್ದಂತೆಯೇ ಬಿಯರ್ ಬಾಟಲಿಗಳ ರಾಶಿಯೇ ಬಿದ್ದಿತ್ತು. ಆನ್​ಲೈನ್​ನಲ್ಲಿ ಹಂಚಿಕೊಂಡ ಫೋಟೋಗಳು ವೈರಲ್ ಆಗಿದ್ದು ಕೊಳೆತ ಆಹಾರ ಪದಾರ್ಥಗಳು ಮತ್ತು ರಾಶಿ ಹೊಡೆದ ಬಿಯರ್​ ಬಾಟಲಿಗಳನ್ನು ನೋಡಿದ ನೆಟ್ಟಿಗರು ವ್ಯಕ್ತಿಯ ಬಗ್ಗೆ ಅಸಹ್ಯ ಪಟ್ಟಿದ್ದಾರೆ.

ಅತ್ಯಂತ ಕೆಟ್ಟದಾಗಿದೆ ಎಂದು ಮಾಲೀಕ ಹೇಳಿದ್ದಾರೆ. ಶಾಚಾಲಯವನ್ನು ಸಹ ತೊಳೆದಿಲ್ಲ ಆತ.. ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಅವ್ಯವಸ್ಥೆಯನ್ನು ಸರಿ ಪಡಿಸಲು ತ್ಯಾಜ್ಯ ತಜ್ಞರನ್ನೇ ನೇಮಿಸಲಾಯಿತು. 10 ಬಾಟಲಿ ಬ್ಲೀಚ್ಅನ್ನು ಬಳಸಬೇಕಾಯಿತು ಎಂದು ಅವರು ಹೇಳಿದ್ದಾರೆ.

ನಾನು ಬಾಗಿಲು ದಾಟಿ ಒಳಗೆ ಪ್ರವೇಶಿಸುತ್ತಿದ್ದಂತೆಯೇ ಎಲ್ಲೆಡೆ ಬಿಯರ್ ಬಾಟಲಿಗಳು ಬಿದ್ದಿದ್ದವು. ಮನೆ ತುಂಬ ದುರ್ವಾಸನೆ ಬರುತ್ತಿತ್ತು. ಸರಿಯಾದ ದಿನಚರಿ ಅವರದ್ದಾಗಿರಲಿಲ್ಲ. ತಿಂದ ಆಹಾರವನ್ನು ಅಲ್ಲಲ್ಲೇ ಎಸೆಯುತ್ತಿದ್ದರು. ಕೊಳೆತ ಆಹಾರ ಪದಾರ್ಥಗಳು, ಅರೆಬರೆ ತಿಂದ ಕಬಾಬ್​ಗಳೆಲ್ಲ ಅಲ್ಲಲ್ಲೇ ಬಿದ್ದಿವೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಈ ಕುರಿತಂತೆ ಟೈಮ್ಸ್ ನೌ ವರದಿ ಮಾಡಿದೆ.

ಮಾಲೀಕನಿಗೆ ಬಾಡಿಗೆಯನ್ನೂ ಸಹ ಕೊಟ್ಟಿಲ್ಲ. ಹಾಗೆಯೇ ಹೊರಟುಹೋಗಿದ್ದಾನೆ. ಇದರ ಜತೆಗೆ ಮನೆಯನ್ನು ಸ್ವಚ್ಛಗೊಳಿಸಲು 12,000 ಕ್ಕಿಂತಲೂ ಹೆಚ್ಚು ಖರ್ಚಾಗಿದೆ ಎಂಬುದು ವರದಿಗಳಿಂದ ತಿಳಿದು ಬಂದಿದೆ.

ಇದನ್ನೂ ಓದಿ:

Shocking Video: ಅಡ್ಡ ಹಾಕಿದ ಪೊಲೀಸನ್ನೇ ರಸ್ತೆಯಲ್ಲಿ ಎಳೆದುಕೊಂಡು ಹೋದ ಕಾರು ಚಾಲಕ; ಶಾಕಿಂಗ್ ವಿಡಿಯೋ ವೈರಲ್

Shocking Video: ಮಾಸ್ಕ್ ಧರಿಸದ್ದಕ್ಕೆ ದಂಡ ವಿಧಿಸಿದ ಅಧಿಕಾರಿಗೆ ಹಿಗ್ಗಾಮುಗ್ಗ ಥಳಿಸಿದ ಮಹಿಳೆ; ವಿಡಿಯೋ ವೈರಲ್

Published On - 1:48 pm, Tue, 17 August 21