ಆಡಿ ಇಂಡಿಯ ಇಲೆಕ್ಟ್ರಿಕ್ ಕಾರುಗಳ ಮಾರುಕಟ್ಟೆಯಲ್ಲಿ ಶೇಕಡಾ 15ರಷ್ಟು ಪಾಲು ಹೊಂದುವ ಇರಾದೆ ಹೊಂದಿದೆ

ಚಾರ್ಜ್ ಮಾಡಲು ಸುಲಭವಾಗುವಂತೆ, ಆಡಿ ಕಾರಿನ ಎರಡೂ ಬದಿಗಳಲ್ಲಿ ಚಾರ್ಜಿಂಗ್ ಪೋರ್ಟ್‌ಗಳನ್ನು ನೀಡುತ್ತಿದೆ. ಕಾರುಗಳು 11ಕೆಡಬ್ಲ್ಯು ಹೋಮ್ ಚಾರ್ಜಿಂಗ್ ಕಿಟ್‌ನೊಂದಿಗೆ ಬರುತ್ತವೆ.

ಎಲ್ಲ ಮೋಟಾರು ತಯಾರಿಕೆ ಕಂಪನಿಗಳು ಎಲೆಕ್ಟ್ರಿಕ್ ಮೋಡ್ ವಾಹನಗಳ ಉತ್ಪಾದನೆಗೆ ಮುಂದಾಗುತ್ತಿರುವಂತೆಯೇ, ಆಡಿ ಇಂಡಿಯ ಸಹ ಈ ನಿಟ್ಟಿನೆಡೆ ಕಾಲಿರಿಸಿದ್ದು ಎಲೆಕ್ಟ್ರಿಕ್ ವಾಹನಗಳ ಮಾರ್ಕೆಟ್ ನಲ್ಲಿ ಶೇಕಡಾ 15ರಷ್ಟು ಪಾಲನ್ನು ತನ್ನದಾಗಿಸಿಕೊಳ್ಳುವ ಬಗ್ಗೆ ಗಂಭೀರ ಚಿಂತನೆ ನಡೆಸಿದೆ. ಆಡಿ ಇಂಡಿಯಾದ ಇ-ಟ್ರಾನ್ ಎಸ್ ಯು ವಿ ಮತ್ತು ಇ-ಟ್ರಾನ್ ಸ್ಪೋರ್ಟ್ಸ್ ಬ್ಯಾಕ್ ಅದಾಗಲೇ ಭಾರತದಲ್ಲಿ ಲಭ್ಯವಿವೆ. ಈಗ ಕಂಪನಿಯು ಇ-ಟ್ರಾನ್ ಜಿಟಿ ಮತ್ತು ಆರ್ ಎಸ್ ಇ-ಟ್ರಾನ್ ಜಿಟಿ ತನ್ನ ಫ್ಲೀಟ್​ಗೆ ಸೇರಿಸಿಕೊಳ್ಳುತ್ತಿದೆ.

ಇ-ಟ್ರಾನ್ ಜಿಟಿ ಮತ್ತು ಆರ್ ಎಸ್ ಇ-ಟ್ರಾನ್ ಜಿಟಿ ಎರಡೂ ಕಾರುಗಳು ಭಾವನಾತ್ಮಕ ವಿನ್ಯಾಸದ ಹೆಗ್ಗಳಿಕೆ ಹೊಂದಿವೆ. ತೀಕ್ಷ್ಣವಾದ ಲೈನ್​ಗಳು, ಮಿರಮಿರನೆ ಹೊಳೆಯುವ ವಿಸೃತ ಬಾಡಿ ಮತ್ತು ಕ್ರೀಡಾ ಕೂಪೆಯಲ್ಲಿ ಕಾಣುವ ಎಲ್ಲಾ ವಿನ್ಯಾಸದ ಸುಳಿವುಗಳಿವೆ. ಎರಡೂ ಆವೃತ್ತಿಗಳು ನಾಲ್ಕು-ಬಾಗಿಲಿನ ಮಾದರಿಗಳಾಗಿವೆ, ದಿಟ್ಟಿಸಿ ನೋಡಿದಾಗ ಅವುಗಳ ಸರಳತೆ ನಿಮ್ಮನ್ನು ಬೆರಗುಗೊಳಿಸುತ್ತದೆ!

ದೀಪಗಳಂತಿರುವ ಆಡಿ ಗ್ರಿಲ್ ಹೊಸ ವ್ಯಾಖ್ಯಾನದ ದ್ಯೋತಕವಾಗಿವೆ. ಹಿಂಭಾಗವು ಉತ್ತಮವಾದ ವಿಶಾಲವಾದ ನೋಟವನ್ನು ಹೊಂದಿದ್ದು ಅದು ಕಾರಿನ ಸ್ಪೋರ್ಟಿ ಲೋಸ್ಲಂಗ್ ನಿಲುವನ್ನು ಎತ್ತಿ ತೋರಿಸುತ್ತದೆ.

ಆಡಿ ಇ-ಟ್ರಾನ್ ಜಿಟಿ ಮತ್ತು ಆರ್‌ಎಸ್ ಇ-ಟ್ರಾನ್ ಜಿಟಿಯಲ್ಲಿರುವ ಕ್ಯಾಬಿನ್ ಒಂದು ಪ್ರಗತಿಪರ ನೋಟವನ್ನು ಹೊಂದಿದೆ ಮತ್ತು ಮರುಬಳಕೆಯ ಪ್ಲಾಸ್ಟಿಕ್‌ನಿಂದ ತಯಾರಿಸಲಾದ ಸಾಕಷ್ಟು ಸುಸ್ಥಿರ ವಸ್ತುಗಳನ್ನು ಒಳಗೊಂಡಂತೆ ಅತ್ಯುತ್ತಮವಾದ ವಸ್ತುಗಳಿಂದ ನಿರ್ಮಿಸಲಾಗಿದೆ. ಕೃತಕ ಚರ್ಮದ ಹೊದಿಕೆಯೊಂದಿಗೆ ಜೆಟ್-ಕಪ್ಪು ಕ್ಯಾಬಿನ್ ಸಂಪೂರ್ಣವಾಗಿ ನೋಡುಗರನ್ನು ಆಶ್ಚರ್ಯಚಕಿತರನ್ನಾಗಿಸುತ್ತದೆ.

ಚಾರ್ಜ್ ಮಾಡಲು ಸುಲಭವಾಗುವಂತೆ, ಆಡಿ ಕಾರಿನ ಎರಡೂ ಬದಿಗಳಲ್ಲಿ ಚಾರ್ಜಿಂಗ್ ಪೋರ್ಟ್‌ಗಳನ್ನು ನೀಡುತ್ತಿದೆ. ಕಾರುಗಳು 11ಕೆಡಬ್ಲ್ಯು ಹೋಮ್ ಚಾರ್ಜಿಂಗ್ ಕಿಟ್‌ನೊಂದಿಗೆ ಬರುತ್ತವೆ. ಆದರೆ ಹೆಚ್ಚುವರಿ ಚಾರ್ಜ್‌ನಲ್ಲಿ ಗ್ರಾಹಕರು 22 ಕೆಡಬ್ಲ್ಯು ಚಾರ್ಜಿಂಗ್ ಘಟಕವನ್ನು ಆಯ್ಕೆ ಮಾಡಬಹುದು. ಪ್ರಾಸಂಗಿಕವಾಗಿ, ಇ-ಟ್ರಾನ್ ಶ್ರೇಣಿಯನ್ನು 270ಕೆಡಬ್ಲ್ಯು ಸೂಪರ್‌ಫಾಸ್ಟ್ ಚಾರ್ಜರ್ ವ್ಯವಸ್ಥೆಯ ಮೂಲಕವೂ ಚಾರ್ಜ್ ಮಾಡಬಹುದು.

ಇದನ್ನೂ ಓದಿ:  Viral Video: ಮದುವೆ ದಿನವೇ ಕೋಪಗೊಂಡು ಏಣಿ ಸಹಾಯದಿಂದ ಮನೆಯ ಮೇಲ್ಛಾವಣಿ ಹತ್ತಿ ಕುಳಿತ ವಧು; ವಿಡಿಯೋ ಮಜವಾಗಿದೆ ನೀವೂ ನೋಡಿ

Click on your DTH Provider to Add TV9 Kannada