ಮತ್ತೆ ಜಯಲಲಿತಾ ಅವತಾರದಲ್ಲಿ ಕಂಗನಾ ರಣಾವತ್​; ಹೊಸ ಸಿನಿಮಾಗಾಗಿ ನಡೆದಿದೆ ಸಿದ್ಧತೆ

‘ತಲೈವಿ’ ಸಿನಿಮಾ ಸಂಪೂರ್ಣವಾಗಿ ಜಯಲಲಿತಾ ಜೀವನ ಕಥೆ ಆಧರಿಸಿ ಇದೆ. ಜಯಲಲಿತಾ ಚಿತ್ರರಂಗಕ್ಕೆ ಬಂದಿದ್ದು ಹೇಗೆ? ಅವರು ನಂತರ ಹೇಗೆ ರಾಜಕೀಯಕ್ಕೆ ಬಂದರು? ಹೇಗೆ ಸಿಎಂ ಆದರು? ಎನ್ನುವುದನ್ನು ಈ ಬಯೋಪಿಕ್​ನಲ್ಲಿ ಹೇಳಲಾಗಿತ್ತು.

ಮತ್ತೆ ಜಯಲಲಿತಾ ಅವತಾರದಲ್ಲಿ ಕಂಗನಾ ರಣಾವತ್​; ಹೊಸ ಸಿನಿಮಾಗಾಗಿ ನಡೆದಿದೆ ಸಿದ್ಧತೆ
ಕಂಗನಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Sep 22, 2021 | 6:00 PM

ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಜೀವನ ಆಧರಿಸಿ ಸಿದ್ಧಗೊಂಡಿರುವ ‘ತಲೈವಿ’ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಸೋತಿದೆ. ಇದಕ್ಕೆ ಕಾರಣಗಳು ಹಲವು. ಆದರೆ, ಕಂಗನಾ ರಣಾವತ್​ ನಟನೆಯನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಸಿನಿಮಾ ಮೇಕಿಂಗ್​ ಬಗ್ಗೆಯೂ ಎಲ್ಲರೂ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. ಹೀಗಿರುವಾಗಲೇ ಕಂಗನಾ ಮತ್ತೆ ಜಯಲಲಿತಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಗಾದರೆ, ಜಯಲಲಿತಾ ಬಗ್ಗೆ ಮತ್ತೊಂದು ಬಯೋಪಿಕ್​ ಬರುತ್ತಿದೆಯೇ? ಇಲ್ಲ. ‘ತಲೈವಿ 2’ ತೆರೆಮೇಲೆ ತರೋಕೆ ಪ್ಲ್ಯಾನ್​ ಸಿದ್ಧಗೊಂಡಿದೆ.

‘ತಲೈವಿ’ ಸಿನಿಮಾ ಸಂಪೂರ್ಣವಾಗಿ ಜಯಲಲಿತಾ ಜೀವನ ಕಥೆ ಆಧರಿಸಿ ಇದೆ. ಜಯಲಲಿತಾ ಚಿತ್ರರಂಗಕ್ಕೆ ಬಂದಿದ್ದು ಹೇಗೆ? ಅವರು ನಂತರ ಹೇಗೆ ರಾಜಕೀಯಕ್ಕೆ ಬಂದರು? ಹೇಗೆ ಸಿಎಂ ಆದರು? ಎನ್ನುವುದನ್ನು ಈ ಬಯೋಪಿಕ್​ನಲ್ಲಿ ಹೇಳಲಾಗಿತ್ತು. ಜಯಲಲಿತಾ ಮುಖ್ಯಮಂತ್ರಿ ಆದ ನಂತರ ಸಿನಿಮಾ ಪೂರ್ಣಗೊಂಡಿತ್ತು. ಇದು ಅನೇಕರಿಗೆ ಬೇಸರ ತರಿಸಿತ್ತು. ‘ತಲೈವಿ’ ಸಿನಿಮಾದಲ್ಲಿ ಜಯಲಲಿತಾ ಬಣ್ಣದ ಬದುಕಿನ ಬಗ್ಗೆ ಹೆಚ್ಚು ತೋರಿಸಲಾಗಿದೆ. ರಾಜಕೀಯ ಬದುಕನ್ನು ಹೆಚ್ಚು ಹೈಲೈಟ್​ ಮಾಡಿಲ್ಲ ಎನ್ನುವ ಮಾತುಗಳು ಕೇಳಿ ಬಂದಿತ್ತು. ಇದಕ್ಕೆ ನಿರ್ದೇಶಕರು ‘ತಲೈವಿ 2’ ಮೂಲಕ ಪ್ರೇಕ್ಷಕರ ಎದುರು ಬರೋಕೆ ರೆಡಿ ಆಗಿದ್ದಾರೆ.

ಸಿನಿಮಾದ ಸಹ ಬರಹಗಾರ ರಜತ್ ಅರೋರಾ ಈ ಬಗ್ಗೆ ಹೇಳಿಕೊಂಡಿದ್ದಾರೆ.  ‘ಜಯಲಲಿತಾ ರಾಜಕೀಯ ಬದುಕು ತುಂಬಾನೇ ದೀರ್ಘವಾಗಿತ್ತು. ಇದನ್ನು 15 ನಿಮಿಷಗಳಲ್ಲಿ ಹೇಳಿದರೆ ನಾವು ಅದಕ್ಕೆ ನ್ಯಾಯ ಒದಗಿಸಿದಂತೆ ಆಗುವುದಿಲ್ಲ ಎಂದು ನಮಗನಿಸಿತು. ಹೀಗಾಗಿ, ‘ತಲೈವಿ ಪಾರ್ಟ್​ 2’ ತರೋಕೆ ಸಿದ್ಧತೆ ನಡೆದಿದೆ. ನಾವು ಕಂಗನಾ ಜತೆಗೆ ಮಾತುಕತೆ ನಡೆಸಿದ್ದೇವೆ’ ಎಂದಿದ್ದಾರೆ ರಜತ್.

‘ಜಯಲಲಿತಾ ಸಿಎಂ ಆದ ನಂತರ ಏನಾಯಿತು ಎಂದು ಸಿನಿಮಾದಲ್ಲಿ ತೋರಿಸಿಯೇ ಇಲ್ಲ ಎಂದು ಅನೇಕರು ಹೇಳುತ್ತಿದ್ದಾರೆ. ಹಾಗೆ ತೋರಿಸೋಕೆ ಸಾಕಷ್ಟು ವಿಷಯಗಳಿವೆ. ಅದನ್ನು ನಾವು ತೆರೆಮೇಲೆ ತರುತ್ತೇವೆ. ಮತ್ತೊಮ್ಮೆ ಇಡೀ ತಂಡವನ್ನು ಭೇಟಿ ಮಾಡಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ’ ಎಂದಿದ್ದಾರೆ ಅವರು.

ಇದನ್ನೂ ಓದಿ: ಹೀನಾಯವಾಗಿ ಮುಗ್ಗರಿಸಿದ ‘ತಲೈವಿ’; ಮೊದಲ ದಿನ ಕಂಗನಾ ರಣಾವತ್​ ಚಿತ್ರ ಗಳಿಸಿದ್ದೆಷ್ಟು?

Thalaivii Movie Review: ‘ತಲೈವಿ’.. ಇದು ಕೇವಲ ಜಯಲಲಿತಾ ಕತೆಯಲ್ಲ

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ