- Kannada News Entertainment Sandalwood Abhishek Ambareesh receives his first SIIMA award: Sumalatha shares photos with pride
ಮೊದಲ ಅವಾರ್ಡ್ ತಂದು ಅಪ್ಪನ ಫೋಟೋ ಮುಂದೆ ಇರಿಸಿದ ಅಭಿಷೇಕ್ ಅಂಬರೀಷ್; ಸುಮಲತಾ ಮೊಗದಲ್ಲಿ ಸಂಭ್ರಮ
‘ಅಮರ್’ ಚಿತ್ರದಲ್ಲಿನ ಅಭಿನಯಕ್ಕಾಗಿ ಅಭಿಷೇಕ್ ಅಂಬರೀಷ್ ಅವರಿಗೆ ಸೈಮಾ ಸಮಾರಂಭದಲ್ಲಿ ‘ಅತ್ಯುತ್ತಮ ಹೊಸ ನಟ’ ಪ್ರಶಸ್ತಿ ಸಿಕ್ಕಿದೆ. ಆ ಖುಷಿಯನ್ನು ಸುಮಲತಾ ಅಂಬರೀಷ್ ಅವರು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.
Updated on: Sep 20, 2021 | 1:46 PM

Abhishek Ambareesh receives his first SIIMA award: Sumalatha shares photos with pride

Abhishek Ambareesh receives his first SIIMA award: Sumalatha shares photos with pride

‘ಮಗನಿಗೆ ಮೊದಲ ಅವಾರ್ಡ್ ಸಿಕ್ಕಿದ್ದಕ್ಕೆ ಹೆಮ್ಮೆ ಮತ್ತು ಸಂತಸ ಆಗುತ್ತಿದೆ. ಅಂಬರೀಷ್ ಇನ್ನೂ ಹೆಚ್ಚು ಹೆಮ್ಮೆ ಪಡುತ್ತಿದ್ದರು’ ಎಂದು ಸುಮಲತಾ ಮನದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಸದ್ಯ ಅಭಿಷೇಕ್ ಅವರು ಸೂರಿ ನಿರ್ದೇಶನದ ಬ್ಯಾಡ್ ಮ್ಯಾನರ್ಸ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ನಾಗಶೇಖರ್ ನಿರ್ದೇಶನದ ‘ಅಮರ್’ ಸಿನಿಮಾ ಮೂಲಕ ಅಭಿಷೇಕ್ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟರು. ಆ ಸಿನಿಮಾ ಬಿಡುಗಡೆ ಆಗುವುದಕ್ಕೂ ಮುನ್ನವೇ ಅಂಬರೀಷ್ ಇಹಲೋಕ ತ್ಯಜಿಸಿದ್ದು ನೋವಿನ ಸಂಗತಿ.

ಸೈಮಾ ಸಮಾರಂಭದಲ್ಲಿ ಸುಮಲತಾ ಅಂಬರೀಷ್ ಜೊತೆಗೆ ಅವರ ಸ್ನೇಹಿತೆಯರು ಸಾಥ್ ನೀಡಿದರು. ಎಲ್ಲರ ಜೊತೆ ಸುಮಲತಾ ಸೆಲ್ಫೀ ಕ್ಲಿಕ್ಕಿಸಿಕೊಂಡರು. ತಮ್ಮ ಮಗನ ಬಗ್ಗೆ ಸ್ನೇಹಿತೆಯರಿಂದ ಮೆಚ್ಚುಗೆ ಕೇಳಿಬಂದಿರುವುದಕ್ಕೆ ಅವರು ಖುಷಿ ಆಗಿದ್ದಾರೆ.




