AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಂದ ಲವ್ಸ್​ ನಂದಿತ’ ಖ್ಯಾತಿಯ ನಟಿ ಶ್ವೇತಾ ತಂದೆ ನಿಧನ; ಅಭಿಮಾನಿಗಳ ಸಂತಾಪ

ನಂದಿತಾ ಅವರ ತಂದೆಯ ಹೆಸರು ಶಿವಸ್ವಾಮಿ. ಅವರಿಗೆ 54 ವರ್ಷ ವಯಸ್ಸಾಗಿತ್ತು. ಇನ್ನೂ ಬದುಕಿ ಬಾಳಬೇಕಿದ್ದ ಅವರು ನಿಧನ ಹೊಂದಿರುವುದು ನಂದಿತಾ ಶ್ವೇತಾಗೆ ತೀವ್ರ ದುಃಖ ಉಂಟು ಮಾಡಿದೆ.

‘ನಂದ ಲವ್ಸ್​ ನಂದಿತ’ ಖ್ಯಾತಿಯ ನಟಿ ಶ್ವೇತಾ ತಂದೆ ನಿಧನ; ಅಭಿಮಾನಿಗಳ ಸಂತಾಪ
‘ನಂದ ಲವ್ಸ್​ ನಂದಿತ’ ಖ್ಯಾತಿಯ ನಟಿ ಶ್ವೇತಾ ತಂದೆ ನಿಧನ; ಅಭಿಮಾನಿಗಳ ಸಂತಾಪ
TV9 Web
| Edited By: |

Updated on: Sep 20, 2021 | 2:54 PM

Share

ಕನ್ನಡದ ‘ನಂದ ಲವ್ಸ್​ ನಂದಿತ’ ಸಿನಿಮಾ ಮೂಲಕ ಬಣ್ಣದ ಬದುಕು ಆರಂಭಿಸಿದ ನಂದಿತಾ ಶ್ವೇತಾ ಅವರ ತಂದೆ ಇಂದು (ಸೆಪ್ಟೆಂಬರ್​ 19) ನಿಧನ ಹೊಂದಿದ್ದಾರೆ. ಈ ಬಗ್ಗೆ ನಂದಿತಾ ಶ್ವೇತಾ ಸೋಶಿಯಲ್​ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ಅವರ ಅಭಿಮಾನಿಗಳು ಬೇಸರ ಹೊರ ಹಾಕಿದ್ದಾರೆ.

ನಂದಿತಾ ಅವರ ತಂದೆಯ ಹೆಸರು ಶಿವಸ್ವಾಮಿ. ಅವರಿಗೆ 54 ವರ್ಷ ವಯಸ್ಸಾಗಿತ್ತು. ಇನ್ನೂ ಬದುಕಿ ಬಾಳಬೇಕಿದ್ದ ಅವರು ನಿಧನ ಹೊಂದಿರುವುದು ನಂದಿತಾ ಶ್ವೇತಾಗೆ ತೀವ್ರ ದುಃಖ ಉಂಟು ಮಾಡಿದೆ. ಈ ಬಗ್ಗೆ ಅವರು ಸೋಶಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ‘ನನ್ನ ತಂದೆ ಶಿವಸ್ವಾಮಿ (54) ಇಂದು ಮೃತಪಟ್ಟಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ನಂದಿತಾ ಶ್ವೇತಾ ಸೋಮವಾರ ಟ್ವೀಟ್​ ಮಾಡಿದ್ದಾರೆ. ಅನೇಕರು ಇದಕ್ಕೆ ರೆಸ್ಟ್​ ಇನ್ ಪೀಸ್​ ಎಂದು ಕಮೆಂಟ್​ ಮಾಡಿದ್ದಾರೆ. ನಂದಿತಾ ಶ್ವೆತಾ ಆಪ್ತ ಗೆಳತಿ ಹಾಗೂ ನಟಿ ಐಶ್ವರ್ಯಾ ರಾಜೇಶ್​ ಈ ಬಗ್ಗೆ ಸಂತಾಪ ಸೂಚಿಸಿದ್ದಾರೆ. ಇದರ ಜತೆಗೆ ಸಾಕಷ್ಟು ಸೆಲೆಬ್ರಿಟಿಗಳು ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.

ನಂದಿತಾ ಶ್ವೇತಾ 2008ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ಲೂಸ್​ ಮಾದ ಯೋಗೇಶ್​ ನಟನೆಯ ‘ನಂದ ಲವ್ಸ್​ ನಂದಿತ’ ಅವರ ಮೊದಲ ಸಿನಿಮಾ. ಈ ಚಿತ್ರ ತೆರೆಕಂಡ ನಂತರದಲ್ಲಿ ಅವರು ಮತ್ತೆ ಶಿಕ್ಷಣದತ್ತ ಗಮನ ಹರಿಸಿದರು. ನಾಲ್ಕು ವರ್ಷ ಬಿಟ್ಟು ಅವರಿಗೆ ತಮಿಳಿನಿಂದ ಆಫರ್​ ಬಂತು. ನಂತರ ಅಲ್ಲಿಯೇ ಅವರು ಬ್ಯುಸಿ ಆದರು. ನಂತರ ಶ್ವೇತಾ ಕನ್ನಡಕ್ಕೆ ಮರಳಲೇ ಇಲ್ಲ.

ಯಶ್​ ನಟನೆಯ ‘ಕಿರಾತಕ 2’ ಸಿನಿಮಾ ಸೆಟ್ಟೇರಿತ್ತು. ನಂತರ ಈ ಸಿನಿಮಾ ಬಗ್ಗೆ ಯಾವುದೇ ಅಪ್​ಡೇಟ್​ ಸಿಕ್ಕಿಲ್ಲ. ಈ ಸಿನಿಮಾಗೆ ನಂದಿತಾ ನಾಯಕಿ ಆಗಿ ಆಯ್ಕೆ ಆಗಿದ್ದರು. ಈ ಮೂಲಕ ಕನ್ನಡಕ್ಕೆ ಕಂಬ್ಯಾಕ್​ ಮಾಡೋಕೆ ಅವರು ರೆಡಿ ಆಗಿದ್ದರು. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ.

ಇದನ್ನೂ ಓದಿ: ಸ್ವರ್ಗದಲ್ಲಿ ಮೇರು ನಟರ ಜತೆ ಸಂಚಾರಿ ವಿಜಯ್​ ಮಾತು; ಸಿನಿಮಾ ಪ್ರಚಾರಕ್ಕೆ ಹೀಗೊಂದು ಮಾರ್ಗ

ಅಳಿಸಿದ್ದಾಯ್ತು, ನಗಿಸಿದ್ದಾಯ್ತು.. ಈಗ ಭಯ ಹುಟ್ಟಿಸುವ ಲುಕ್​ನಲ್ಲಿ ಶ್ರುತಿ; ಹುಟ್ಟುಹಬ್ಬಕ್ಕೆ ಖಡಕ್​ ಪೋಸ್ಟರ್​

ವಿದ್ಯಾರ್ಥಿಗಳ ಕೈಯಲ್ಲಿ ಕಾರು ತೊಳೆಸಿದ ಶಿಕ್ಷಕ
ವಿದ್ಯಾರ್ಥಿಗಳ ಕೈಯಲ್ಲಿ ಕಾರು ತೊಳೆಸಿದ ಶಿಕ್ಷಕ
ತೆಲಂಗಾಣದ ಹಾಸ್ಟೆಲ್​ನಲ್ಲಿ ವಿದ್ಯಾರ್ಥಿನಿಯ ಮೇಲೆ ವಾರ್ಡನ್ ದರ್ಪ
ತೆಲಂಗಾಣದ ಹಾಸ್ಟೆಲ್​ನಲ್ಲಿ ವಿದ್ಯಾರ್ಥಿನಿಯ ಮೇಲೆ ವಾರ್ಡನ್ ದರ್ಪ
ಹೊಸ ವರ್ಷಕ್ಕೆ ಶುಭಸುದ್ದಿ: ಫಲಾನುಭವಿಗಳ ಖಾತೆಗೆ ಬಂದ ಗೃಹಲಕ್ಷ್ಮಿ
ಹೊಸ ವರ್ಷಕ್ಕೆ ಶುಭಸುದ್ದಿ: ಫಲಾನುಭವಿಗಳ ಖಾತೆಗೆ ಬಂದ ಗೃಹಲಕ್ಷ್ಮಿ
ಡಿಕಾಕ್ ಸಿಡಿಲಬ್ಬರ... ಸನ್​ರೈಸರ್ಸ್ ತಂಡಕ್ಕೆ ಬೋನಸ್ ಪಾಯಿಂಟ್
ಡಿಕಾಕ್ ಸಿಡಿಲಬ್ಬರ... ಸನ್​ರೈಸರ್ಸ್ ತಂಡಕ್ಕೆ ಬೋನಸ್ ಪಾಯಿಂಟ್
ಹೊಸ ವರ್ಷ ಸ್ವಾಗತಕ್ಕೆ ಬೆಂಗಳೂರು ಸಜ್ಜು: ಪಬ್​ಗಳಲ್ಲಿ ಹೇಗಿದೆ ಸುರಕ್ಷತೆ?
ಹೊಸ ವರ್ಷ ಸ್ವಾಗತಕ್ಕೆ ಬೆಂಗಳೂರು ಸಜ್ಜು: ಪಬ್​ಗಳಲ್ಲಿ ಹೇಗಿದೆ ಸುರಕ್ಷತೆ?
ಮಂತ್ರಾಲಯದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ
ಮಂತ್ರಾಲಯದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ
ಅಲ್ಮೋರಾದಲ್ಲಿ ಕಂದಕಕ್ಕೆ ಉರುಳಿದ ಬಸ್, 7 ಜನರ ದುರ್ಮರಣ
ಅಲ್ಮೋರಾದಲ್ಲಿ ಕಂದಕಕ್ಕೆ ಉರುಳಿದ ಬಸ್, 7 ಜನರ ದುರ್ಮರಣ
ವಿಷ್ಣುವರ್ಧನ್ 16ನೇ ವರ್ಷದ ಪುಣ್ಯತಿಥಿ; ವಿಶೇಷ ಪೂಜೆ ನಡೆದಿದ್ದು ಎಲ್ಲಿ?
ವಿಷ್ಣುವರ್ಧನ್ 16ನೇ ವರ್ಷದ ಪುಣ್ಯತಿಥಿ; ವಿಶೇಷ ಪೂಜೆ ನಡೆದಿದ್ದು ಎಲ್ಲಿ?
ಆಭರಣದಂಗಡಿಗೆ ಕದಿಯಲೆಂದು ಹೋಗಿ ಫಜೀತಿಗೆ ಸಿಲುಕಿದ ಕಳ್ಳರು
ಆಭರಣದಂಗಡಿಗೆ ಕದಿಯಲೆಂದು ಹೋಗಿ ಫಜೀತಿಗೆ ಸಿಲುಕಿದ ಕಳ್ಳರು
ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ: ಪತಿಗಾಗಿ ಪತ್ನಿ ಪ್ರೊಟೆಸ್ಟ್​​
ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ: ಪತಿಗಾಗಿ ಪತ್ನಿ ಪ್ರೊಟೆಸ್ಟ್​​