‘ಮೈನಾ’, ‘ಸಂಜು ವೆಡ್ಸ್ ಗೀತಾ’ ಮೊದಲಾದ ಹಿಟ್ ಚಿತ್ರಗಳನ್ನು ನೀಡಿರುವ ನಾಗಶೇಖರ್, ಈ ಚಿತ್ರಕ್ಕೂ ಆಕ್ಷನ್ ಕಟ್ ಹೇಳಿದ್ದಾರೆ. ಸಂದೇಶ್ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ಈ ಚಿತ್ರ ನಿರ್ಮಾಣವಾಗಿದ್ದು, ಜಯಣ್ಣ ಕಂಬೈನ್ಸ್ ಹಂಚಿಕೆಯ ಜವಾಬ್ದಾರಿ ಹೊತ್ತಿದೆ. ಅರ್ಜುನ್ ಜನ್ಯಾ ಸಂಗೀತವಿರುವ ಈ ಚಿತ್ರಕ್ಕೆ, ಸತ್ಯ ಹೆಗಡೆ ಛಾಯಾಗ್ರಹಣ ಮಾಡಿದ್ದಾರೆ. ಚಿತ್ರವು ಅಕ್ಟೋಬರ್ 15ರಂದು ಬಿಡುಗಡೆಯಾಗಲಿದೆ. ಚಿತ್ರವು ಕನ್ನಡ ಹಾಗೂ ಮಲಯಾಳಂ ಭಾಷೆಯಲ್ಲಿ ಬಿಡುಗಡೆಯಾಗಲಿದೆ.
ಚಿತ್ರದ ಟ್ರೈಲರ್ ಇಲ್ಲಿದೆ:
‘ಲವ್ ಮಾಕ್ಟೇಲ್’ ಚಿತ್ರದ ಯಶಸ್ಸಿನಲ್ಲಿರುವ ಡಾರ್ಲಿಂಗ್ ಕೃಷ್ಣ, ಈ ಚಿತ್ರದ ಕುರಿತು ಬಹುದೊಡ್ಡ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈಗಾಗಲೇ ಈ ಚಿತ್ರದ ಕೆಲವು ಹಾಡುಗಳು ಬಿಡುಗಡೆಯಾಗಿದ್ದು, ವೀಕ್ಷಕರ ಮನಗೆದ್ದಿದೆ. ಅದೇ ಮಾದರಿಯಲ್ಲಿ ಚಿತ್ರವೂ ವೀಕ್ಷಕರಿಗೆ ಪ್ರಿಯವಾಗುತ್ತದೆ ಎಂಬ ನಿರೀಕ್ಷೆಯಲ್ಲಿ ಚಿತ್ರತಂಡವಿದೆ. ಟ್ರೈಲರ್ ನೋಡಿದ ಚಿತ್ರ ಪ್ರೇಮಿಗಳು, ಪಾಸಿಟಿವ್ ಪ್ರತಿಕ್ರಿಯೆ ನೀಡುತ್ತಿದ್ದಾರೆ. ವಿಜಯದಶಮಿಯಂದು ಚಿತ್ರವು ತೆರೆಗೆ ಬರುತ್ತಿದ್ದು, ಬೆಳ್ಳಿತೆರೆಯಲ್ಲಿ ಹೇಗೆ ಸದ್ದು ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ:
12 ಕೋಟಿ ರೂ. ಬಂಗಲೆ ಖರೀದಿಸಿದ ಪವನ್ ಕಲ್ಯಾಣ್; 6350 ಚದರ ಅಡಿ ಇರುವ ಐಷಾರಾಮಿ ಮನೆ
‘ನಿನ್ನ ಸನಿಹಕೆ’ ಚಿತ್ರ ನೋಡಲಿರುವ ರಜನಿಕಾಂತ್; ಧನ್ಯಾ ರಾಮ್ಕುಮಾರ್-ಸೂರಜ್ಗೆ ತಲೈವಾ ಬೆಂಬಲ
ಗೋಡೆ ಮೇಲೆ ಜೇಮ್ಸ್ ಬಾಂಡ್ 007 ಬರೆದು ಕಳ್ಳರು ಎಸ್ಕೇಪ್! ರಾಜಸ್ಥಾನದಲ್ಲಿ ನಾಲ್ವರ ಬಂಧಿಸಿದ ಮಾರ್ಕೆಟ್ ಪೊಲೀಸರು