12 ಕೋಟಿ ರೂ. ಬಂಗಲೆ ಖರೀದಿಸಿದ ಪವನ್​ ಕಲ್ಯಾಣ್​; 6350 ಚದರ ಅಡಿ ಇರುವ ಐಷಾರಾಮಿ ಮನೆ

ಪವನ್​ ಕಲ್ಯಾಣ್​ ಖರೀದಿಸಿರುವ ಈ ಮನೆ ಹೈದರಾಬಾದ್​ನ ಜ್ಯುಬಿಲಿ ಹಿಲ್ಸ್​ನಲ್ಲಿದೆ. ಇದು ಟಾಲಿವುಡ್​ನ ಹಲವು ಸೆಲೆಬ್ರಿಟಿಗಳು ವಾಸಿಸುತ್ತಿರುವ ಪ್ರತಿಷ್ಠಿತ ಏರಿಯಾ.

ಟಾಲಿವುಡ್​ನ ಬಹುಬೇಡಿಕೆಯ ನಟ ಪವನ್​ ಕಲ್ಯಾಣ್​ ಸದ್ಯ ‘ಭೀಮ್ಲಾ ನಾಯಕ್​’ ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಪ್ರತಿ ಚಿತ್ರಕ್ಕೆ ಅವರು ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುತ್ತಾರೆ. ರಾಜಕೀಯದ ಕಡೆಗೂ ಅವರು ಗಮನ ಹರಿಸಿದ್ದಾರೆ. ಇತ್ತೀಚೆಗೆ ಆಂಧ್ರಪ್ರದೇಶ ಸರ್ಕಾರವನ್ನು ಟೀಕಿಸಿ ಅವರು ಸುದ್ದಿ ಆಗಿದ್ದರು. ಅದರ ಬೆನ್ನಲ್ಲೇ ಅವರು ಖರೀದಿಸಿರುವ ಹೊಸ ಮನೆ ಬಗ್ಗೆ ಮಾಹಿತಿ ಸಿಕ್ಕಿದೆ. ಬರೋಬ್ಬರಿ 12 ಕೋಟಿ ರೂ. ನೀಡಿ ಅವರೊಂದು ಭವ್ಯ ಬಂಗಲೆ ಕೊಂಡುಕೊಂಡಿದ್ದಾರೆ. ಇದರ ವಿಸ್ತೀರ್ಣ 6350 ಚದರ ಅಡಿಗಳು.

ಈ ಮನೆ ಖರೀದಿಸಲು ಪವನ್​ ಕಲ್ಯಾಣ್​ ಲಕ್ಷಾಂತರ ರೂ. ತೆರಿಗೆ ಪಾವತಿಸಿದ್ದಾರೆ. ಸ್ಟ್ಯಾಂಪ್ ಡ್ಯೂಟಿ 66 ಲಕ್ಷ ರೂಪಾಯಿ, ಟ್ರಾನ್ಸ್​ಫರ್​ ಡ್ಯೂಟಿ 18 ಲಕ್ಷ ರೂಪಾಯಿ ಹಾಗೂ ರಿಜಿಸ್ಟ್ರೇಷನ್ ಶುಲ್ಕ 6 ಲಕ್ಷ ರೂಪಾಯಿ ಪಾವತಿ ಮಾಡಿದ್ದಾರೆ. ಹೈದರಾಬಾದ್​ನ ಜ್ಯುಬಿಲಿ ಹಿಲ್ಸ್​ನಲ್ಲಿ ಈ ಮನೆ ಇದೆ. ಇದು ಟಾಲಿವುಡ್​ನ ಹಲವು ಸೆಲೆಬ್ರಿಟಿಗಳು ವಾಸಿಸುತ್ತಿರುವ ಪ್ರತಿಷ್ಠಿತ ಏರಿಯಾ.

ಇದನ್ನೂ ಓದಿ:

‘ಆ ನಟನಿಗೆ ಕೆಟ್ಟ ಸಾವು ಬರುತ್ತೆ’; ಪೊಸಾನಿಗೆ ಬಂಡ್ಲ ಗಣೇಶ್​ ಶಾಪ: ಪವನ್​ ಕಲ್ಯಾಣ್​ ಬಗ್ಗೆ ಮಾತಾಡಿದ್ದೇ ತಪ್ಪಾಯ್ತು

‘ಪವರ್​ ಇಲ್ಲದವರಿಗೆ ಪವರ್​ ಸ್ಟಾರ್​ ಅಂತ ಯಾಕೆ ಕರೆಯುತ್ತೀರಿ’? ಪವನ್​ ಕಲ್ಯಾಣ್​ ಟಾಂಗ್​ ಕೊಟ್ಟಿದ್ದು ಯಾರಿಗೆ?

Click on your DTH Provider to Add TV9 Kannada