‘ಆ ನಟನಿಗೆ ಕೆಟ್ಟ ಸಾವು ಬರುತ್ತೆ’; ಪೊಸಾನಿಗೆ ಬಂಡ್ಲ ಗಣೇಶ್​ ಶಾಪ: ಪವನ್​ ಕಲ್ಯಾಣ್​ ಬಗ್ಗೆ ಮಾತಾಡಿದ್ದೇ ತಪ್ಪಾಯ್ತು

‘ಪವನ್​ ಕಲ್ಯಾಣ್​ ಮೇಲೆ ಪೊಸಾನಿ ಕೃಷ್ಣ ಮುರಳಿ ಮಾತಿನ ದಾಳಿ ಮಾಡಿದ್ದರ ಬಗ್ಗೆ ನನಗೆ ಯಾವುದೇ ತಕರಾರು ಇಲ್ಲ. ಆದರೆ ಪವನ್​ ಕಲ್ಯಾಣ್​ರ ತಾಯಿ ಬಗ್ಗೆ ಮಾತನಾಡಿದ್ದು ತಪ್ಪು’ ಎಂದು ಬಂಡ್ಲ ಗಣೇಶ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಆ ನಟನಿಗೆ ಕೆಟ್ಟ ಸಾವು ಬರುತ್ತೆ’; ಪೊಸಾನಿಗೆ ಬಂಡ್ಲ ಗಣೇಶ್​ ಶಾಪ: ಪವನ್​ ಕಲ್ಯಾಣ್​ ಬಗ್ಗೆ ಮಾತಾಡಿದ್ದೇ ತಪ್ಪಾಯ್ತು
ಬಂಡ್ಲ ಗಣೇಶ್, ಪವನ್ ಕಲ್ಯಾಣ್, ಪೊಸಾನಿ ಕೃಷ್ಣ ಮುರಳಿ

ತೆಲುಗು ಚಿತ್ರರಂಗದ ಪ್ರತಿಭಾನ್ವಿತ ನಟರಲ್ಲಿ ಪೊಸಾನಿ ಕೃಷ್ಣ ಮುರಳಿ ಕೂಡ ಪ್ರಮುಖರು. ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಇರುವ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಆದರೆ ಈಗ ಅವರು ವಿವಾದ ಮಾಡಿಕೊಂಡಿದ್ದಾರೆ. ‘ಪವರ್​ ಸ್ಟಾರ್​’ ಪವನ್​ ಕಲ್ಯಾಣ್​ ಬಗ್ಗೆ ಅನೇಕ ಆರೋಪಗಳನ್ನು ಹೊರಿಸಿರುವ ಪೊಸಾನಿ ಕೃಷ್ಣ ಮುರಳಿ ವಿರುದ್ಧ ಪವನ್​ ಕಲ್ಯಾಣ್​ ಅಭಿಮಾನಿಗಳು ತಿರುಗಿಬಿದ್ದಿದ್ದಾರೆ. ಟಾಲಿವುಡ್​ನ ಜನಪ್ರಿಯ ನಿರ್ಮಾಪಕ ಬಂಡ್ಲ ಗಣೇಶ್​ ಕೂಡ ಪೊಸಾನಿ ಕೃಷ್ಣ ಮುರಳಿ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

‘ಮೂವೀ ಆರ್ಟಿಸ್ಟ್​ ಅಸೋಸಿಯೇಷನ್​’ ಚುನಾವಣೆಗೆ ತಾವು ಸಲ್ಲಿಸಿದ್ದ ನಾಮಪತ್ರವನ್ನು ಬಂಡ್ಲ ಗಣೇಶ್​ ಹಿಂಪಡೆದುಕೊಂಡಿದ್ದಾರೆ. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಪೊಸಾನಿ ಕೃಷ್ಣ ಮುರಳಿ ಬಗ್ಗೆ ಕಿಡಿಕಾರಿದ್ದಾರೆ. ‘ಪೊಸಾನಿ ಅವರ ಪತ್ನಿ ನನಗೆ ತಾಯಿ ಇದ್ದಂತೆ. ಅವರ ಬಗ್ಗೆ ನನಗೆ ಅಪಾರ ಗೌರವ ಇದೆ. ಪೊಸಾನಿಯನ್ನು ಇಷ್ಟು ದಿನ ಸಹಿಸಿಕೊಂಡಿದ್ದಕ್ಕೆ ಅವರಿಗೆ ಹ್ಯಾಟ್ಸ್​ ಆಫ್​. ದೇವರು ಇರುವುದೇ ನಿಜವಾದರೆ ಪೊಸಾನಿಗೆ ಬರ್ಬರವಾದ ಸಾವು ಬರಲಿದೆ’ ಎಂದು ಬಂಡ್ಲ ಗಣೇಶ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಪವನ್​ ಕಲ್ಯಾಣ್​ ಮೇಲೆ ಪೊಸಾನಿ ಮಾತಿನ ದಾಳಿ ಮಾಡಿದ್ದರ ಬಗ್ಗೆ ನನಗೆ ಯಾವುದೇ ತಕರಾರು ಇಲ್ಲ. ಆದರೆ ಪವನ್​ ಕಲ್ಯಾಣ್​ರ ತಾಯಿ ಬಗ್ಗೆ ಮಾತನಾಡಿದ್ದು ತಪ್ಪು. ಅವರನ್ನು ಈ ವಿಚಾರದಲ್ಲಿ ಎಳೆದು ತರಬಾರದಿತ್ತು. ಕುಟುಂಬದ ಮಹಿಳೆಯರ ಬಗ್ಗೆ ಪೊಸಾನಿ ಮಾತನಾಡಿದ್ದು ಸರಿಯಲ್ಲ’ ಎಂದು ಬಂಡ್ಲ ಗಣೇಶ್​ ಗರಂ ಆಗಿದ್ದಾರೆ.

ಪವನ್ ಕಲ್ಯಾಣ್ ಇತ್ತೀಚೆಗೆ ಆಂಧ್ರಪ್ರದೇಶದ ಮಂತ್ರಿಗಳ ವಿರುದ್ಧ ವಾಗ್ದಾಳಿ ನಡೆಸುವಾಗ ಆಕ್ಷೇಪಾರ್ಹ ಭಾಷೆಯನ್ನು ಬಳಸಿದ್ದಾರೆ ಎಂದು ಪೊಸಾನಿ ಕೃಷ್ಣ ಮುರಳಿ ಆರೋಪಿಸಿದ್ದರು. ಇದಕ್ಕೆ ಸಂಬಂಧಪಟ್ಟಂತೆ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪವನ್ ಕಲ್ಯಾಣ್​ರ ವೈಯಕ್ತಿಕ ಜೀವನದ ವಿಚಾರಗಳನ್ನು ಎಳೆದುತಂದು ಅವರಿಗೆ ಪಂಜಾಬ್ ಮೂಲದ ನಟಿಯೊಂದಿಗೆ ಸಂಬಂಧ ಇತ್ತು ಎಂದು ಆರೋಪಿಸಿದ್ದರು. ಈ ಎಲ್ಲ ಕಾರಣಗಳಿಗಾಗಿ ಪೊಸಾನಿ ವಿರುದ್ಧ ಪವನ್​ ಕಲ್ಯಾಣ್​ ಅಭಿಮಾನಿಗಳು ತಿರುಗಿಬಿದ್ದಿದ್ದಾರೆ.

ಇದನ್ನೂ ಓದಿ:

‘ಪವರ್​ ಇಲ್ಲದವರಿಗೆ ಪವರ್​ ಸ್ಟಾರ್​ ಅಂತ ಯಾಕೆ ಕರೆಯುತ್ತೀರಿ’? ಪವನ್​ ಕಲ್ಯಾಣ್​ ಟಾಂಗ್​ ಕೊಟ್ಟಿದ್ದು ಯಾರಿಗೆ?

ಪೊಸಾನಿ ಕೃಷ್ಣ ಮುರಳಿ ಮೇಲೆ ಪವನ್ ಕಲ್ಯಾಣ್ ಅಭಿಮಾನಿಗಳಿಂದ ಹಲ್ಲೆಗೆ ಯತ್ನ, 10 ಜನರ ಬಂಧನ; ಏನಿದು ಪ್ರಕರಣ?

Read Full Article

Click on your DTH Provider to Add TV9 Kannada