Rashmika Mandanna: ಅಂದುಕೊಂಡಿದ್ದಕಿಂತಲೂ ಮುನ್ನವೇ ‘ಪುಷ್ಪ’ ರಿಲೀಸ್​; ಅಲ್ಲು ಅರ್ಜುನ್​-ರಶ್ಮಿಕಾ ಚಿತ್ರದ ಬಿಡುಗಡೆ ದಿನಾಂಕ ಪ್ರಕಟ

TV9 Digital Desk

| Edited By: ಮದನ್​ ಕುಮಾರ್​

Updated on: Oct 02, 2021 | 12:00 PM

Pushpa Release Date: ಪಾತ್ರವರ್ಗದ ಕಾರಣದಿಂದ ‘ಪುಷ್ಪ’ ಚಿತ್ರ ಹೈಪ್​ ಸೃಷ್ಟಿಮಾಡಿದೆ. ಅಲ್ಲು ಅರ್ಜುನ್​, ರಶ್ಮಿಕಾ ಮಂದಣ್ಣ ಮಾತ್ರವಲ್ಲದೇ ಡಾಲಿ ಧನಂಜಯ, ಪ್ರಕಾಶ್​ ರೈ, ಫಹಾದ್​ ಫಾಸಿಲ್​, ಜಗಪತಿ ಬಾಬು ಮುಂತಾದವರು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Rashmika Mandanna: ಅಂದುಕೊಂಡಿದ್ದಕಿಂತಲೂ ಮುನ್ನವೇ ‘ಪುಷ್ಪ’ ರಿಲೀಸ್​; ಅಲ್ಲು ಅರ್ಜುನ್​-ರಶ್ಮಿಕಾ ಚಿತ್ರದ ಬಿಡುಗಡೆ ದಿನಾಂಕ ಪ್ರಕಟ
ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ
Follow us

ನಟಿ ರಶ್ಮಿಕಾ ಮಂದಣ್ಣ ಅಭಿಮಾನಿಗಳು ‘ಪುಷ್ಪ’ ಚಿತ್ರದ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಅಲ್ಲು ಅರ್ಜುನ್​ ನಾಯಕತ್ವದ ಈ ಸಿನಿಮಾ ಬಗ್ಗೆ ಭಾರಿ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಈ ಬಾರಿಯ ಕ್ರಿಸ್​ಮಸ್​ ಹಬ್ಬದ ಪ್ರಯುಕ್ತ ‘ಪುಷ್ಪ’ ಬಿಡುಗಡೆ ಆಗಲಿದೆ ಎಂದು ಹೇಳಲಾಗಿತ್ತು. ಆದರೆ ನಿರ್ದಿಷ್ಟ ದಿನಾಂಕವನ್ನು ಚಿತ್ರತಂಡ ತಿಳಿಸಿರಲಿಲ್ಲ. ಈಗ ದಿನಾಂಕ ಕೂಡ ನಿಗದಿ ಆಗಿದೆ. ಆ ಕುರಿತು ಅಧಿಕೃತ ಮಾಹಿತಿ ಹೊರಬಿದ್ದಿದೆ. ಡಿ.17ರಂದು ವಿಶ್ವಾದ್ಯಂತ ‘ಪುಷ್ಪ’ ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ಅನೌನ್ಸ್​ ಮಾಡಿದೆ.

ಪುಷ್ಪ ಸಿನಿಮಾ ಬಗ್ಗೆ ನಿರೀಕ್ಷೆ ಮೂಡಲು ಹಲವು ಕಾರಣಗಳಿವೆ. ಈ ಚಿತ್ರದಲ್ಲಿ ಅಲ್ಲು ಅರ್ಜುನ್​ ಅವರು ಲಾರಿ ಡ್ರೈವರ್​ ಪಾತ್ರ ಮಾಡಿದ್ದಾರೆ. ಅವರ ಲುಕ್​ ರಗಡ್​ ಆಗಿದೆ. ಖ್ಯಾತ ನಿರ್ದೇಶಕ ಸುಕುಮಾರ್​ ಅವರು ರಕ್ತಚಂದನ ಕಳ್ಳಸಾಗಾಣಿಕೆಯ ಹಿನ್ನೆಲೆಯಲ್ಲಿ ಈ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ಎರಡು ಪಾರ್ಟ್​ನಲ್ಲಿ ‘ಪುಷ್ಪ’ ಮೂಡಿಬರುತ್ತಿದ್ದು, ಸಿನಿಪ್ರಿಯರಲ್ಲಿ ಭಾರಿ ನಿರೀಕ್ಷೆ ಹುಟ್ಟುಹಾಕಿದೆ.

ಪಾತ್ರವರ್ಗದ ಕಾರಣದಿಂದಲೂ ‘ಪುಷ್ಪ’ ಚಿತ್ರ ಹೈಪ್​ ಸೃಷ್ಟಿಮಾಡಿದೆ. ಡಾಲಿ ಧನಂಜಯ, ಪ್ರಕಾಶ್​ ರೈ, ಫಹಾದ್​ ಫಾಸಿಲ್​, ಜಗಪತಿ ಬಾಬು ಮುಂತಾದವರು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿಗೂ ಡಬ್​ ಆಗಿ ಈ ಸಿನಿಮಾ ತೆರೆಕಾಣುತ್ತಿದೆ.

ರಶ್ಮಿಕಾ ನಿಭಾಯಿಸುತ್ತಿರುವ ಶ್ರೀವಲ್ಲಿ ಎಂಬ ಪಾತ್ರದ ಫಸ್ಟ್​ ಲುಕ್​ ಕೂಡ ಇತ್ತೀಚೆಗೆ ಬಿಡುಗಡೆ ಆಗಿದೆ. ಆದರೆ ಅದು ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿರುವುದು ಅವರ ಅಭಿಮಾನಿಗಳಿಗೆ ಬೇಸರ ತರಿಸಿದೆ. ಈ ಪೋಸ್ಟರ್​ ಕೆಲವರಿಗೆ ಇಷ್ಟ ಆಗಿಲ್ಲ. ಅದನ್ನು ಮೀಮ್​ಗಳ ರೂಪದಲ್ಲಿ ತಿಳಿಸಲಾಗುತ್ತಿದೆ. ಆ ಫೋಟೋವನ್ನು ಹಲವು ಬಗೆಯಲ್ಲಿ ಎಡಿಟ್​ ಮಾಡಿ ಹರಿಬಿಡಲಾಗುತ್ತಿದೆ. ರಶ್ಮಿಕಾ ಟಾಯ್ಲೆಟ್​ನಲ್ಲಿ ಕುಳಿತಿರುವಂತೆ, ಮಾರ್ಕೆಟ್​ನಲ್ಲಿ ಮೀನು ಮಾರುತ್ತಿರುವಂತೆ, ಹೊಲ ಗದ್ದೆಯಲ್ಲಿ ಕುಳಿತು ಕೆಲಸ ಮಾಡುತ್ತಿರುವಂತೆ, ದುಂಡು ಪಾಳ್ಯ ಸಿನಿಮಾದಲ್ಲಿ ಪೂಜಾ ಗಾಂಧಿಯ ಪಕ್ಕ ಕುಳಿತಿರುವಂತೆ.. ಹೀಗೆ ನಾನಾ ಬಗೆಯಲ್ಲಿ ಮೀಮ್​ಗಳನ್ನು ತಯಾರಿಸಲಾಗಿದೆ. ಇದರಿಂದ ‘ಪುಷ್ಪ’ ಚಿತ್ರಕ್ಕೆ ಭರ್ಜರಿ ಪ್ರಚಾರ ಸಿಗುತ್ತಿದೆ.

ಇದನ್ನೂ ಓದಿ:

ಗೋವಾದಲ್ಲಿ ಹೊಸ ಮನೆ ಖರೀದಿಸಿದ ರಶ್ಮಿಕಾ ಮಂದಣ್ಣ; ಎಲ್ಲಿಂದ ಬರುತ್ತಿದೆ ಇಷ್ಟೊಂದು ದುಡ್ಡು?

ಪುರುಷರ ಒಳಉಡುಪು ಜಾಹೀರಾತಿನಲ್ಲಿ ರಶ್ಮಿಕಾ ಮಂದಣ್ಣ; ಇದರ ಕಾನ್ಸೆಪ್ಟ್​ ನೋಡಿ ಹೆಣ್ಮಕ್ಕಳು ಸಹಿಸ್ತಾರಾ?

ತಾಜಾ ಸುದ್ದಿ

Related Stories

Click on your DTH Provider to Add TV9 Kannada