ಗೋವಾದಲ್ಲಿ ಹೊಸ ಮನೆ ಖರೀದಿಸಿದ ರಶ್ಮಿಕಾ ಮಂದಣ್ಣ; ಎಲ್ಲಿಂದ ಬರುತ್ತಿದೆ ಇಷ್ಟೊಂದು ದುಡ್ಡು?

ಪ್ರಕೃತಿ ಸೌಂದರ್ಯದ ನಡುವೆ ಈ ಮನೆ ಇದೆ. ಈಜುಕೊಳದ ಪಕ್ಕದಲ್ಲೇ ಬುದ್ಧನ ಮೂರ್ತಿ ಇದೆ. ಸದಾ ನೆರಳು ನೀಡಲು ಬೃಹದಾದ ಮರವಿದೆ. ಇದನ್ನೆಲ್ಲ ನೋಡಿದರೆ ಬೇರೆ ನಟಿಯರಿಗೆ ಹೊಟ್ಟೆಕಿಚ್ಚಾದರೂ ಅಚ್ಚರಿ ಏನಿಲ್ಲ.

ಗೋವಾದಲ್ಲಿ ಹೊಸ ಮನೆ ಖರೀದಿಸಿದ ರಶ್ಮಿಕಾ ಮಂದಣ್ಣ; ಎಲ್ಲಿಂದ ಬರುತ್ತಿದೆ ಇಷ್ಟೊಂದು ದುಡ್ಡು?
ರಶ್ಮಿಕಾ ಹಂಚಿಕೊಂಡಿರುವ ಹೊಸ ಮನೆ ಆವರಣದ ಫೋಟೋ

ಚಿತ್ರರಂಗದಲ್ಲಿ ರಶ್ಮಿಕಾ ಮಂದಣ್ಣ ಯಶಸ್ಸಿನ ಉತ್ತುಂಗಕ್ಕೆ ಏರಿದ್ದಾರೆ. ಎಲ್ಲ ಭಾಷೆಗಳಲ್ಲೂ ಅವರಿಗೆ ಬೇಡಿಕೆ ಇದೆ. ಕೈ ತುಂಬ ಸಂಪಾದನೆ ಮಾಡುತ್ತಿರುವ ಅವರು ಹೊಸ ಹೊಸ ಆಸ್ತಿ ಖರೀದಿಸುತ್ತ ಮುನ್ನುಗ್ಗುತ್ತಿದ್ದಾರೆ. ಕೆಲವೇ ದಿನಗಳ ಹಿಂದೆ ಅವರು ಮುಂಬೈನಲ್ಲಿ ಮನೆ ಕೊಂಡುಕೊಂಡಿದ್ದು ದೊಡ್ಡ ಸುದ್ದಿ ಆಗಿತ್ತು. ಅದಾಗಿ ಕೆಲವೇ ದಿನ ಕಳೆಯುವುದರೊಳಗೆ ಅವರು ಗೋವಾದಲ್ಲಿ ಒಂದು ಮನೆ ಖರೀದಿ ಮಾಡಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ. ತಮ್ಮ ನೆಚ್ಚಿನ ನಟಿಯ ಬೆಳವಣಿಗೆ ಕಂಡು ಫ್ಯಾನ್ಸ್​ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ಆ್ಯಕ್ಟೀವ್​ ಆಗಿರುವ ರಶ್ಮಿಕಾ ಮಂದಣ್ಣ ಅವರು ತಮ್ಮ ದಿನಚರಿ ಬಗ್ಗೆ ಅಭಿಮಾನಿಗಳಿಗೆ ಆಗಾಗ ಅಪ್​ಡೇಟ್​ ನೀಡುತ್ತಲೇ ಇರುತ್ತಾರೆ. ಅದೇ ರೀತಿ ಅವರು ಗೋವಾದಲ್ಲಿ ಮನೆ ಕೊಂಡುಕೊಂಡಿದ್ದರ ಬಗ್ಗೆಯೂ ಮಾಹಿತಿ ಹಂಚಿಕೊಂಡಿದ್ದಾರೆ. ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಮನೆಯ ಹೊರಾಂಗಣದ ಫೋಟೋ ಶೇರ್​ ಮಾಡಿಕೊಂಡಿದ್ದಾರೆ.

ಪ್ರಕೃತಿ ಸೌಂದರ್ಯದ ನಡುವೆ ಈ ಮನೆ ಇದೆ. ಈಜುಕೊಳದ ಪಕ್ಕದಲ್ಲೇ ಬುದ್ಧನ ಮೂರ್ತಿ ಇದೆ. ಸದಾ ನೆರಳು ನೀಡಲು ಬೃಹದಾದ ಮರವಿದೆ. ಇದನ್ನೆಲ್ಲ ನೋಡಿದರೆ ಬೇರೆ ನಟಿಯರಿಗೆ ಹೊಟ್ಟೆಕಿಚ್ಚಾದರೂ ಅಚ್ಚರಿ ಏನಿಲ್ಲ. ಅದಕ್ಕೆ ರಶ್ಮಿಕಾ ನೀಡಿದ ಕ್ಯಾಪ್ಷನ್​ ಕೂಡ ಗಮನ ಸೆಳೆಯುತ್ತಿದೆ. ‘ಗೋವಾದಲ್ಲಿ ಹೊಸ ಮನೆ ಖರೀದಿಸಿದಾಗ… ಹೊಟ್ಟೆಕಿಚ್ಚು ಆಯ್ತಾ?’ ಎಂದು ರಶ್ಮಿಕಾ ಪ್ರಶ್ನಿಸಿದ್ದಾರೆ. ಆದರೆ ಅವರು ಹೀಗೆ ಟಾಂಗ್​ ನೀಡಿರುವುದು ಯಾರಿಗೆ ಎಂಬುದು ಗೊತ್ತಾಗಿಲ್ಲ.

ಹೀಗೆ ಮೇಲಿಂದ ಮೇಲೆ ಮನೆ ಖರೀದಿಸುತ್ತಿರುವ ರಶ್ಮಿಕಾಗೆ ದುಡ್ಡು ಎಲ್ಲಿಂದ ಬರುತ್ತಿದೆ ಎಂದು ಕೆಲವರ ತಲೆ ಕೆಡಿಸಿಕೊಂಡಿರಬಹುದು. ಉತ್ತರ ಸಿಂಪಲ್​. ಬಾಲಿವುಡ್​ಗೂ ಕಾಲಿಟ್ಟಿರುವ ರಶ್ಮಿಕಾ ಅವರು ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಿದ್ದಾರೆ. ಸಿನಿಮಾ ಮಾತ್ರವಲ್ಲದೇ ಅವರಿಗೆ ಜಾಹೀರಾತು ಕ್ಷೇತ್ರದಲ್ಲೂ ಭಾರಿ ಬೇಡಿಕೆ ಇದೆ. ಅನೇಕ ಪ್ರತಿಷ್ಠಿತ ಬ್ರ್ಯಾಂಡ್​ಗಳಿಗೆ ಅವರು ರಾಯಭಾರಿ ಆಗಿದ್ದಾರೆ. ಅವುಗಳಿಂದಲೂ ಅವರಿಗೆ ಆದಾಯ ಹರಿದುಬರುತ್ತಿದೆ. ಬಾಲಿವುಡ್​ನಲ್ಲಿ ಅವರು ‘ಮಿಷನ್​ ಮಜ್ನು’ ಸಿನಿಮಾ ಶೂಟಿಂಗ್​ ಮುಗಿಸಿದ್ದಾರೆ. ‘ಗುಡ್​ಬೈ’ ಚಿತ್ರದಲ್ಲಿ ಅಮಿತಾಭ್​ ಬಚ್ಚನ್​ ಜೊತೆ ನಟಿಸುತ್ತಿದ್ದಾರೆ.

ಇದನ್ನೂ ಓದಿ:

ಮಾರ್ಕೆಟ್​ನಿಂದ ಟಾಯ್ಲೆಟ್​ವರೆಗೆ ಎಲ್ಲೆಲ್ಲೂ ರಶ್ಮಿಕಾ; ‘ಪುಷ್ಪ’ ಚಿತ್ರದ ಶ್ರೀವಲ್ಲಿ ಗೆಟಪ್​ ಸಿಕ್ಕಾಪಟ್ಟೆ ಟ್ರೋಲ್​​

ಪುರುಷರ ಒಳಉಡುಪು ಜಾಹೀರಾತಿನಲ್ಲಿ ರಶ್ಮಿಕಾ ಮಂದಣ್ಣ; ಇದರ ಕಾನ್ಸೆಪ್ಟ್​ ನೋಡಿ ಹೆಣ್ಮಕ್ಕಳು ಸಹಿಸ್ತಾರಾ?

Read Full Article

Click on your DTH Provider to Add TV9 Kannada