ಮಾರ್ಕೆಟ್​ನಿಂದ ಟಾಯ್ಲೆಟ್​ವರೆಗೆ ಎಲ್ಲೆಲ್ಲೂ ರಶ್ಮಿಕಾ; ‘ಪುಷ್ಪ’ ಚಿತ್ರದ ಶ್ರೀವಲ್ಲಿ ಗೆಟಪ್​ ಸಿಕ್ಕಾಪಟ್ಟೆ ಟ್ರೋಲ್​​

ರಶ್ಮಿಕಾ ಮಂದಣ್ಣ ಅವರ ಹೊಸ ಪೋಸ್ಟರ್​ ಇಟ್ಟುಕೊಂಡು ಹಲವು ಬಗೆಯಲ್ಲಿ ಮೀಮ್​ಗಳನ್ನು ತಯಾರಿಸಲಾಗಿದೆ. ಇದರಿಂದ ‘ಪುಷ್ಪ’ ಚಿತ್ರಕ್ಕೆ ಭರ್ಜರಿ ಪ್ರಚಾರ ಸಿಗುತ್ತಿದೆ. ಆದರೆ ಈ ರೀತಿ ಟ್ರೋಲ್​ ಆಗುತ್ತಿರುವುದಕ್ಕೆ ರಶ್ಮಿಕಾ ಅಭಿಮಾನಿಗಳು ಬೇಸರ ಮಾಡಿಕೊಳ್ಳುತ್ತಿದ್ದಾರೆ.

ಮಾರ್ಕೆಟ್​ನಿಂದ ಟಾಯ್ಲೆಟ್​ವರೆಗೆ ಎಲ್ಲೆಲ್ಲೂ ರಶ್ಮಿಕಾ; ‘ಪುಷ್ಪ’ ಚಿತ್ರದ ಶ್ರೀವಲ್ಲಿ ಗೆಟಪ್​ ಸಿಕ್ಕಾಪಟ್ಟೆ ಟ್ರೋಲ್​​
ವೈರಲ್​ ಆಗುತ್ತಿರುವ ರಶ್ಮಿಕಾ ಮಂದಣ್ಣ ಮೀಮ್ಸ್​

ರಶ್ಮಿಕಾ ಮಂದಣ್ಣ ಈಗ ಪ್ಯಾನ್​ ಇಂಡಿಯಾ ಹೀರೋಯಿನ್​. ದಕ್ಷಿಣ ಭಾರತದಿಂದ ಬಾಲಿವುಡ್​ವರೆಗೆ ಅವರಿಗೆ ಬೇಡಿಕೆ ಇದೆ. ಬಹುಭಾಷೆಯಲ್ಲಿ ನಟಿಸುತ್ತಿರುವ ಈ ಕೊಡಗಿನ ಕುವರಿ ಪ್ರತಿ ನಿತ್ಯ ಸುದ್ದಿ ಆಗುತ್ತಲೇ ಇರುತ್ತಾರೆ. ರಶ್ಮಿಕಾಗೆ ಸಂಬಂಧಿಸಿದ ಅನೇಕ ವಿಚಾರಗಳನ್ನು ಇಟ್ಟುಕೊಂಡು ಟ್ರೋಲ್​ ಮಾಡುವವರ ಸಂಖ್ಯೆಯೂ ದೊಡ್ಡದಿದೆ. ಬುಧವಾರವಷ್ಟೇ (ಸೆ.29) ‘ಪುಷ್ಪ’ ಚಿತ್ರದಿಂದ ಹೊಸ ಪೋಸ್ಟರ್​ ರಿಲೀಸ್​ ಆಗಿದೆ. ಅದನ್ನು ಇಟ್ಟುಕೊಂಡು ಹಲವು ಬಗೆಯ ಮೀಮ್​ಗಳನ್ನು ಮಾಡಲಾಗುತ್ತಿದೆ. ಸೋಶಿಯಲ್​ ಮೀಡಿಯಾದಲ್ಲಿ ಅವು ಸಖತ್​ ವೈರಲ್​ ಆಗುತ್ತಿವೆ.

‘ಪುಷ್ಪ’ ಚಿತ್ರದಲ್ಲಿ ಅಲ್ಲು ಅರ್ಜುನ್​ ಜೊತೆ ರಶ್ಮಿಕಾ ಮಂದಣ್ಣ ತೆರೆಹಂಚಿಕೊಂಡಿದ್ದಾರೆ. ಅವರ ಪಾತ್ರದ ಹೆಸರು ಶ್ರೀವಲ್ಲಿ. ಅವರ ಲುಕ್​ ಹೇಗಿದೆ ಎಂಬುದನ್ನು ತಿಳಿಸಲು ಚಿತ್ರತಂಡ ಬಿಡುಗಡೆ ಮಾಡಿರುವ ಈ ಪೋಸ್ಟರ್​ ಕೆಲವರಿಗೆ ಇಷ್ಟ ಆಗಿಲ್ಲ. ಅದನ್ನು ಮೀಮ್​ಗಳ ರೂಪದಲ್ಲಿ ತಿಳಿಸಲಾಗುತ್ತಿದೆ. ಆ ಫೋಟೋವನ್ನು ಹಲವು ಬಗೆಯಲ್ಲಿ ಎಡಿಟ್​ ಮಾಡಿ ಹರಿಬಿಡಲಾಗುತ್ತಿದೆ.

ರಶ್ಮಿಕಾ ಟಾಯ್ಲೆಟ್​ನಲ್ಲಿ ಕುಳಿತಿರುವಂತೆ, ಮಾರ್ಕೆಟ್​ನಲ್ಲಿ ಮೀನು ಮಾರುತ್ತಿರುವಂತೆ, ಹೊಲ ಗದ್ದೆಯಲ್ಲಿ ಕುಳಿತು ಕೆಲಸ ಮಾಡುತ್ತಿರುವಂತೆ, ದುಂಡು ಪಾಳ್ಯ ಸಿನಿಮಾದಲ್ಲಿ ಪೂಜಾ ಗಾಂಧಿಯ ಪಕ್ಕ ಕುಳಿತಿರುವಂತೆ.. ಹೀಗೆ ನಾನಾ ಬಗೆಯಲ್ಲಿ ಮೀಮ್​ಗಳನ್ನು ತಯಾರಿಸಲಾಗಿದೆ. ಇದರಿಂದ ‘ಪುಷ್ಪ’ ಚಿತ್ರಕ್ಕೆ ಭರ್ಜರಿ ಪ್ರಚಾರ ಸಿಗುತ್ತಿದೆ. ಆದರೆ ತಮ್ಮ ನೆಚ್ಚಿನ ನಟಿಯನ್ನು ಈ ರೀತಿ ಟ್ರೋಲ್​ ಮಾಡಲಾಗುತ್ತಿದೆಯಲ್ಲ ಎಂದು ರಶ್ಮಿಕಾ ಅಭಿಮಾನಿಗಳು ಬೇಸರ ಮಾಡಿಕೊಳ್ಳುತ್ತಿದ್ದಾರೆ.

ಈ ಸಿನಿಮಾ ಎರಡು ಪಾರ್ಟ್​ಗಳಲ್ಲಿ ಮೂಡಿಬಂದಿದೆ. ಈ ವರ್ಷ ಡಿಸೆಂಬರ್​ನಲ್ಲಿ ಕ್ರಿಸ್​ಮಸ್​ ಹಬ್ಬದ ಪ್ರಯುಕ್ತ ‘ಪುಷ್ಪ’ ಮೊದಲ ಪಾರ್ಟ್​ ತೆರೆಕಾಣಲಿದೆ. ಕನ್ನಡದ ನಟ ಡಾಲಿ ಧನಂಜಯ ಕೂಡ ಇದರಲ್ಲಿ ಪ್ರಮುಖ ಪಾತ್ರ ಮಾಡಿರುವುದು ವಿಶೇಷ. ಖ್ಯಾತ ನಿರ್ದೇಶಕ ಸುಕುಮಾರ್​ ಅವರು ಈ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ.

ಸದ್ಯ ಶ್ರೀವಲ್ಲಿ ಫಸ್ಟ್​ಲುಕ್​ ಟ್ರೋಲ್​ ಆಗುತ್ತಿರುವ ಬಗ್ಗೆ ರಶ್ಮಿಕಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಸಿನಿಮಾದಿಂದ ಅವರ ವೃತ್ತಿಜೀವನಕ್ಕೆ ದೊಡ್ಡ ಮೈಲೇಜ್​ ಸಿಗುವ ನಿರೀಕ್ಷೆ ಇದೆ. ಬಾಲಿವುಡ್​ನಲ್ಲಿ ಅವರು ‘ಮಿಷನ್​ ಮಜ್ನು’ ಸಿನಿಮಾ ಶೂಟಿಂಗ್​ ಮುಗಿಸಿದ್ದಾರೆ. ‘ಗುಡ್​ಬೈ’ ಚಿತ್ರದಲ್ಲಿ ಅಮಿತಾಭ್​ ಬಚ್ಚನ್​ ಜೊತೆ ನಟಿಸುತ್ತಿದ್ದಾರೆ.

ಇದನ್ನೂ ಓದಿ:

ಪುರುಷರ ಒಳಉಡುಪು ಜಾಹೀರಾತಿನಲ್ಲಿ ರಶ್ಮಿಕಾ ಮಂದಣ್ಣ; ಇದರ ಕಾನ್ಸೆಪ್ಟ್​ ನೋಡಿ ಹೆಣ್ಮಕ್ಕಳು ಸಹಿಸ್ತಾರಾ?

ರಶ್ಮಿಕಾ ಮುಂಬೈಗೆ ಹೋದ್ಮೇಲೆ ಪ್ರಚಾರಕ್ಕಾಗಿ ಮಾಡಿದ ಕೆಲಸ ಏನು? ಬಾಲಿವುಡ್​ನಲ್ಲಿ ಇದು ಕಾಮನ್​

Read Full Article

Click on your DTH Provider to Add TV9 Kannada