‘ನೋ ಟೈಮ್​ ಟು ಡೈ’ ಪ್ರೇಕ್ಷಕರ ವಿಮರ್ಶೆ: ಬಾಂಡ್​ ಸರಣಿಯ 25ನೇ ಚಿತ್ರ ನೋಡಿ ಸಿನಿಪ್ರಿಯರು ಏನಂದ್ರು?

TV9 Digital Desk

| Edited By: ಮದನ್​ ಕುಮಾರ್​

Updated on: Oct 01, 2021 | 12:11 PM

No time To Die Review: ಜೇಮ್ಸ್​ ಬಾಂಡ್​ ಪಾತ್ರದಲ್ಲಿ ಡೇನಿಯಲ್​ ಕ್ರೇಗ್​ ಅವರ ಕೊನೇ ಸಿನಿಮಾ ‘ನೋ ಟೈಮ್​ ಟು ಡೈ’. ಆ ಕಾರಣದಿಂದಲೂ ಕೂಡ ನಿರೀಕ್ಷೆ ಜೋರಾಗಿತ್ತು. ಸಿನಿಮಾ ನೋಡಿದ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

‘ನೋ ಟೈಮ್​ ಟು ಡೈ’ ಪ್ರೇಕ್ಷಕರ ವಿಮರ್ಶೆ: ಬಾಂಡ್​ ಸರಣಿಯ 25ನೇ ಚಿತ್ರ ನೋಡಿ ಸಿನಿಪ್ರಿಯರು ಏನಂದ್ರು?
ನೋ ಟೈಮ್ ಟು ಡೈ ಚಿತ್ರದ ದೃಶ್ಯ

Follow us on

ಜಾಗತಿಕ ಮಟ್ಟದಲ್ಲಿ ಯಶಸ್ವಿಯಾದ ಸಿನಿಮಾ ಸರಣಿಗಳಲ್ಲಿ ಬಾಂಡ್​ ಚಿತ್ರಗಳ ಸಾಧನೆ ಗಮನಾರ್ಹ. ಜೇಮ್ಸ್​ ಬಾಂಡ್​ ಪಾತ್ರವನ್ನೇ ಇಟ್ಟುಕೊಂಡು ಈವರೆಗೂ 25 ಸಿನಿಮಾಗಳು ಮೂಡಿಬಂದಿವೆ. 25ನೇ ಚಿತ್ರವಾದ ‘ನೋ ಟೈಮ್ ಟು ಡೈ’ ಸೆ.30ರಂದು ಬಿಡುಗಡೆಯಾಗಿ ಎಲ್ಲೆಡೆ ಪ್ರದರ್ಶನ ಕಾಣುತ್ತಿದೆ. ಲಂಡನ್​ನ ರಾಯಲ್​ ಆಲ್ಬರ್ಟ್​ ಹಾಲ್​ನಲ್ಲಿ ಸೆ.28ರಂದು ಪ್ರೀಮಿಯರ್​ ಪ್ರದರ್ಶನವಾಯಿತು. ಯುನೈಡೆಟ್​ ಕಿಂಗ್​ಡಮ್​, ಭಾರತ ಸೇರಿ ಜಗತ್ತಿನ ಹಲವೆಡೆ ಈ ಚಿತ್ರ ಸೆ.30ರಂದು ರಿಲೀಸ್​ ಆಗಿದೆ. ಅಮೆರಿಕದಲ್ಲಿ ಅ.8ರಂದು ಬಿಡುಗಡೆ ಆಗಲಿದೆ. ಈಗಾಗಲೇ ಸಿನಿಮಾ ನೋಡಿದವರು ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.

ಜೇಮ್ಸ್​ ಬಾಂಡ್​ ಸಿನಿಮಾ ಎಂದರೆ ನಿರೀಕ್ಷೆ ಜೋರಾಗಿಯೇ ಇರುತ್ತದೆ. ಐದು ಸಿನಿಮಾಗಳಲ್ಲಿ ಜೇಮ್ಸ್​ ಬಾಂಡ್​ ಪಾತ್ರವನ್ನು ಡೇನಿಯಲ್​ ಕ್ರೇಗ್​ ಮಾಡಿದ್ದಾರೆ. ಈ ಪಾತ್ರದಲ್ಲಿ ಅವರ ಕೊನೇ ಸಿನಿಮಾ ‘ನೋ ಟೈಮ್​ ಟು ಡೈ’. ಆ ಕಾರಣದಿಂದಲೂ ಕೂಡ ನಿರೀಕ್ಷೆ ಜೋರಾಗಿತ್ತು. ಸಿನಿಮಾ ನೋಡಿದ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಚಿತ್ರದ ಅವಧಿ 2 ಗಂಟೆ 43 ನಿಮಿಷ ಇದೆ. ಇದು ಕೊಂಚ ದೀರ್ಘವಾಯಿತು ಎಂಬುದು ಬಹುತೇಕರ ದೂರು. ಕಳೆದ 15 ವರ್ಷದಿಂದ ಬಾಂಡ್​ ಪಾತ್ರವನ್ನು ಮಾಡುತ್ತ ಬಂದಿರುವ ಡೇನಿಯಲ್​ ಕ್ರೇಗ್​ ಅವರು ಆ ಪಾತ್ರಕ್ಕೆ ವಿದಾಯ ಹೇಳಲು ಇದು ಸೂಕ್ತ ಸಿನಿಮಾ ಎಂಬುದನ್ನು ಹಲವರು ಒಪ್ಪಿಕೊಂಡಿದ್ದಾರೆ.

‘ಡೇನಿಯಲ್​ ಕ್ರೇಗ್​ ಅವರ ಆ್ಯಕ್ಷನ್​ ದೃಶ್ಯಗಳು ಅದ್ಭುತವಾಗಿವೆ.  ಹಿನ್ನೆಲೆ ಸಂಗೀತ ಮತ್ತು ಛಾಯಾಗ್ರಹಣ ಅತ್ಯುತ್ತಮವಾಗಿದೆ. ಚಿತ್ರದಲ್ಲಿನ ಟ್ವಿಸ್ಟ್​ಗಳು ಮತ್ತು ಎಮೋಷನ್​ಗಳು ಚೆನ್ನಾಗಿವೆ. ಬೇಗ ಹೋಗಿ ಚಿತ್ರಮಂದಿರದಲ್ಲಿ ಸಿನಿಮಾ ನೋಡಿ’ ಎಂದು ಪ್ರೇಕ್ಷಕರೊಬ್ಬರು ಟ್ವೀಟ್​ ಮಾಡಿದ್ದಾರೆ. ಕ್ಲೈಮ್ಯಾಕ್ಸ್​ನಲ್ಲಿ ಬರುವ ಆ್ಯಕ್ಷನ್​ ದೃಶ್ಯಕ್ಕಿಂತಲೂ ಚಿತ್ರದ ಪ್ರಾರಂಭದಲ್ಲಿ ಬರುವ ಸಾಹಸ ಸನ್ನಿವೇಶಗಳೇ ಹೆಚ್ಚು ಚೆನ್ನಾಗಿವೆ ಎಂದು ಕೆಲವರು ತಮ್ಮ ಅನಿಸಿಕೆ ಹೇಳಿಕೊಂಡಿದ್ದಾರೆ.

ಭಾರತದಲ್ಲಿರುವ ಪ್ರೇಕ್ಷಕರು ಈ ಚಿತ್ರವನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ. 5ಕ್ಕೆ 5 ಅಂಕ ಕೊಟ್ಟು ಹೊಗಳುತ್ತಿದ್ದಾರೆ. ಬಾಂಡ್​ ಸಿನಿಮಾ ಎಂಬುದನ್ನು ಬದಿಗಿಟ್ಟು, ಬರೀ ಒಂದು ಆ್ಯಕ್ಷನ್​ ಥ್ರಿಲ್ಲರ್​ ಚಿತ್ರ ಎಂದು ನೋಡಿದರೂ ಕೂಡ ಇದು ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎಂದು ಹಲವರು ಟ್ವೀಟ್​ ಮಾಡಿದ್ದಾರೆ.

ಮತ್ತೆ ಕೆಲವರಿಗೆ ಈ ಸಿನಿಮಾ ಹೆಚ್ಚೇನೂ ಇಷ್ಟ ಆಗಿಲ್ಲ. ಭಾರಿ ನಿರೀಕ್ಷೆ ಇಟ್ಟುಕೊಂಡು ‘ನೋ ಟೈಮ್​ ಟು ಡೈ’ ನೋಡಬೇಡಿ ಎಂಬ ಸೂಚನೆಯೂ ಕೆಲ ಪ್ರೇಕ್ಷಕರಿಂದ ಬಂದಿದೆ. ಕನ್ನಡಕ್ಕೂ ಈ ಚಿತ್ರ ಡಬ್​ ಆಗಿ ಬಿಡುಗಡೆ ಆಗಿದೆ. ಕರ್ನಾಟಕದ ಪ್ರಮುಖ ನಗರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಮುಂಬರುವ ಜೇಮ್ಸ್​ ಬಾಂಡ್​ ಸರಣಿಯಲ್ಲಿ ಯಾರು ಹೀರೋ ಆಗುತ್ತಾರೆ ಎಂಬುದರ ಬಗ್ಗೆ ಸಿನಿಪ್ರಿಯರು ಈಗಲೇ ಚರ್ಚೆ ಆರಂಭಿಸಿದ್ದಾರೆ.

ಇದನ್ನೂ ಓದಿ:

ಟೈಗರ್​ ಶ್ರಾಫ್​ ಸಿನಿಮಾಗೆ ಜೇಮ್ಸ್​ ಬಾಂಡ್​ ಸ್ಟಂಟ್​ ಡೈರೆಕ್ಟರ್​; ರಷ್ಯಾದಲ್ಲಿ ನಡೆಯಲಿದೆ ಶೂಟ್​

‘ನೆನಪಿರಲಿ’ ಪ್ರೇಮ್​ ಮುಂದಿನ ಚಿತ್ರಕ್ಕೆ 400 ಕೋಟಿ ರೂ. ಬಜೆಟ್​; ಹಾಲಿವುಡ್​ ಹಾದಿಯತ್ತ ‘ಲವ್ಲಿ ಸ್ಟಾರ್​’

ತಾಜಾ ಸುದ್ದಿ

Related Stories

Most Read Stories

Click on your DTH Provider to Add TV9 Kannada