ಟೈಗರ್​ ಶ್ರಾಫ್​ ಸಿನಿಮಾಗೆ ಜೇಮ್ಸ್​ ಬಾಂಡ್​ ಸ್ಟಂಟ್​ ಡೈರೆಕ್ಟರ್​; ರಷ್ಯಾದಲ್ಲಿ ನಡೆಯಲಿದೆ ಶೂಟ್​

‘ಹೀರೋಪಂತಿ 2’ ಸಿನಿಮಾದ ಮೊದಲ ಶೆಡ್ಯೂಲ್​ ಮುಂಬೈನಲ್ಲಿ ನೆರವೇರಿತ್ತು. ಅಹ್ಮದ್​ ಖಾನ್​ ನಿರ್ದೇಶನ ಮಾಡುತ್ತಿರುವ ಈ ಸಿನಿಮಾದಲ್ಲಿ ಸಾಕಷ್ಟು ಆ್ಯಕ್ಷನ್​ ದೃಶ್ಯಗಳು ಇರಲಿವೆಯಂತೆ.

ಟೈಗರ್​ ಶ್ರಾಫ್​ ಸಿನಿಮಾಗೆ ಜೇಮ್ಸ್​ ಬಾಂಡ್​ ಸ್ಟಂಟ್​ ಡೈರೆಕ್ಟರ್​; ರಷ್ಯಾದಲ್ಲಿ ನಡೆಯಲಿದೆ ಶೂಟ್​
ಟೈಗರ್​​ ಶ್ರಾಫ್​
Follow us
| Updated By: ಮದನ್​ ಕುಮಾರ್​

Updated on: Jun 07, 2021 | 2:55 PM

ಟೈಗರ್ ಶ್ರಾಫ್​ ಸಿನಿಮಾ ಎಂದರೆ ಅಲ್ಲಿ ಆ್ಯಕ್ಷನ್​ ದೃಶ್ಯಗಳಿಗೆ ಹೆಚ್ಚು ಒತ್ತು ನೀಡಲಾಗುತ್ತದೆ. ಮೈನವಿರೇಳಿಸುವ ದೃಶ್ಯಗಳಿಗೆ ಹೆಚ್ಚು ಆದ್ಯತೆ ಇರುತ್ತದೆ. ಈಗ ಅವರ ನಟನೆಯ ‘ಹೀರೋಪಂತಿ 2’ ಸಿನಿಮಾ ಬಗ್ಗೆ ಅಚ್ಚರಿಯ ಅಪ್​ಡೇಟ್​ ಒಂದು ಸಿಕ್ಕಿದೆ. ಈ ಸಿನಿಮಾದ ಆ್ಯಕ್ಷನ್​ ದೃಶ್ಯಗಳನ್ನು ನಿರ್ದೇಶಿಸಲು ಹಾಲಿವುಡ್​ ಸ್ಟಂಟ್​ ಡೈರೆಕ್ಟರ್​ ಜತೆಗೆ ಮಾತುಕತೆ ನಡೆಯುತ್ತಿದೆಯಂತೆ.

‘ಹೀರೋಪಂತಿ 2’ ಸಿನಿಮಾದ ಮೊದಲ ಶೆಡ್ಯೂಲ್​ ಮುಂಬೈನಲ್ಲಿ ನೆರವೇರಿತ್ತು. ಅಹ್ಮದ್​ ಖಾನ್​ ನಿರ್ದೇಶನ ಮಾಡುತ್ತಿರುವ ಈ ಸಿನಿಮಾದಲ್ಲಿ ಸಾಕಷ್ಟು ಆ್ಯಕ್ಷನ್​ ದೃಶ್ಯಗಳು ಇರಲಿವೆಯಂತೆ. ಎರಡನೇ ಭಾಗದ ಶೂಟಿಂಗ್​ ಈಗ ರಷ್ಯಾದಲ್ಲಿ ನಡೆಯಲಿದೆ ಎನ್ನಲಾಗಿದೆ.

ಪ್ರಮುಖ ಆ್ಯಕ್ಷನ್​ ಹಾಗೂ ಹಾಡನ್ನು ಮಾಸ್ಕೋವ್​ ಹಾಗೂ ಪೀಟರ್ಸ್​ಬರ್ಗ್​ನಲ್ಲಿ ಶೂಟ್​ ಮಾಡಲು ನಿರ್ಧರಿಸಲಾಗಿದೆ. ಸದ್ಯ, ಲೊಕೇಷನ್​ ಹುಡುಕುವ ಕಾರ್ಯ ನಡೆಯುತ್ತಿದೆ. ಸಾಕಷ್ಟು ಸ್ಟಂಟ್​ ಡೈರೆಕ್ಟರ್​ಗಳ ಜತೆಯೂ ಮಾತುಕತೆ ನಡೆಯುತ್ತಿದೆಯಂತೆ. 2012ರಲ್ಲಿ ತೆರೆಗೆ ಬಂದ ಜೇಮ್ಸ್​ ಬಾಂಡ್​ ಸರಣಿಯ ‘ಸ್ಕೈಫಾಲ್’​ ಸಿನಿಮಾಗೆ ಆ್ಯಕ್ಷನ್​ ದೃಶ್ಯಗಳನ್ನು ನಿರ್ದೇಶನ ಮಾಡಿದ್ದ ಮಾರ್ಟಿನೋ​ ಇವಾನೋ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ.

ಬಾಲಿವುಡ್​ನ ಖ್ಯಾತ ನಿರ್ಮಾಪಕ ಸಾಜಿದ್​ ನಾಡಿಯದ್ವಾಲಾ ಅವರು ಹೀರೋಪಂತಿ ಸಿನಿಮಾ ಮೂಲಕ ಟೈಗರ್​ ಶ್ರಾಫ್​ ಅವರನ್ನು ಲಾಂಚ್​ ಮಾಡಿದ್ದರು. ಈಗ ಈ ಸರಣಿಯಲ್ಲಿ ಎರನೇ ಸಿನಿಮಾ ಮೂಡಿ ಬರುತ್ತಿದೆ. ಈಗ ಈ ಸಿನಿಮಾಗೆ ಹಾಲಿವುಡ್ ಸ್ಟಂಟ್​ ಡೈರೆಕ್ಟರ್​ ಜತೆ ಮಾತುಕತೆ ನಡೆದಿದೆ ಎನ್ನುವ ವಿಚಾರ ಸಾಕಷ್ಟು ಕುತೂಹಲ ಮೂಡಿಸಿದೆ.

ಇತ್ತೀಚೆಗೆ ಟೈಗರ್​ ಶ್ರಾಫ್​ ವಿರುದ್ಧ ಎಫ್​ಐಆರ್​ ದಾಖಲಾಗಿತ್ತು. ಕೊರೊನಾ ವೈರಸ್​ ಎರಡನೇ ಅಲೆ ನಿಯಂತ್ರಿಸುವ ಸಲುವಾಗಿ ದೇಶದ ಹಲವು ಕಡೆಗಳಲ್ಲಿ ಲಾಕ್​ಡೌನ್ ಜಾರಿ ಮಾಡಲಾಗಿದೆ. ಜನಸಾಮಾನ್ಯರಿಗೆ ಮಾತ್ರವಲ್ಲದೆ ಸೆಲೆಬ್ರಿಟಿಗಳಿಗೂ ಈ ನಿಯಮಗಳು ಅನ್ವಯ ಆಗುತ್ತವೆ. ಅನವಶ್ಯಕವಾಗಿ ಹೊರಗಡೆ ಸುತ್ತಾಡಿದರೆ ಪೊಲೀಸರು ಸೂಕ್ತ ಕ್ರಮಕೈಗೊಳ್ಳುತ್ತಾರೆ. ಸೆಲೆಬ್ರಿಟಿಗಳು ಕೂಡ ಲಾಕ್​ಡೌನ್​ ನಿಯಮಗಳಿಗೆ ಬದ್ಧರಾಗಿರಬೇಕು. ಆದರೆ ಕೆಲವು ಸ್ಟಾರ್​ಗಳ ತಮ್ಮ ಮನ ಬಂದಂತೆ ತಿರುಗಾಡುತ್ತ, ಪೊಲೀಸರಿಂದ ಕೇಸ್​ ಜಡಿಸಿಕೊಂಡಿದ್ದಾರೆ. ನಟಿ ದಿಶಾ ಪಟಾನಿ ಮತ್ತು ಟೈಗರ್​ ಶ್ರಾಫ್​ಗೆ ಹೀಗೆಯೇ ಆಗಿತ್ತು. ಬಾಂದ್ರಾ ಸುತ್ತಮುತ್ತ ಟೈಗರ್​ ಶ್ರಾಫ್​ ಮತ್ತು ದಿಶಾ ಪಟಾನಿ ಅನವಶ್ಯಕವಾಗಿ ತಿರುಗಾಡುತ್ತಿರುವುದು ಗಮನಕ್ಕೆ ಬಂದಿತ್ತು. ಹೀಗಾಗಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದರು.

ಇದನ್ನೂ ಓದಿ: ಲಾಕ್​ಡೌನ್​ ನಿಯಮ ಉಲ್ಲಂಘನೆ; ದಿಶಾ ಪಟಾನಿ, ಟೈಗರ್​ ಶ್ರಾಫ್​ ವಿರುದ್ಧ ಎಫ್​ಐಆರ್​ ದಾಖಲು

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ