Ranu Mondal: ರಾನು ಮಂಡಲ್​ ಕಂಠದಲ್ಲಿ ‘ಮನಿಕೆ ಮಗೆ ಹಿತೆ’; ಕಿರಿಕಿರಿ ತಾಳಲಾಗದೇ ಕಮೆಂಟ್​ ಮಾಡುತ್ತಿರುವ ನೆಟ್ಟಿಗರು

TV9 Digital Desk

| Edited By: ಮದನ್​ ಕುಮಾರ್​

Updated on:Oct 02, 2021 | 8:17 AM

Manike Mage Hithe: ‘ಮನಿಕೆ ಮಗೆ ಹಿತೆ’ ಗೀತೆಯನ್ನು ರಾನು ಮಂಡಲ್​ ಹಾಡಿರುವ ವಿಡಿಯೋ ಎಲ್ಲೆಲ್ಲೂ ವೈರಲ್​ ಆಗಿದೆ. ಕಮೆಂಟ್​ ಸೆಕ್ಷನ್​ಗೆ ಹೋಗಿ ನೋಡಿದರೆ ಬರೀ ನೆಗೆಟಿವ್​ ಮಾತುಗಳೇ ಕಾಣಿಸುತ್ತಿವೆ.

Ranu Mondal: ರಾನು ಮಂಡಲ್​ ಕಂಠದಲ್ಲಿ ‘ಮನಿಕೆ ಮಗೆ ಹಿತೆ’; ಕಿರಿಕಿರಿ ತಾಳಲಾಗದೇ ಕಮೆಂಟ್​ ಮಾಡುತ್ತಿರುವ ನೆಟ್ಟಿಗರು
ಯೊಹಾನಿ, ರಾನು ಮಂಡಲ್


ಯೂಟ್ಯೂಬ್​, ಇನ್​ಸ್ಟಾಗ್ರಾಮ್​ ಮತ್ತು ಇತರೆ ಸೋಶಿಯಲ್​ ಮೀಡಿಯಾದಲ್ಲಿ ‘ಮನಿಕೆ ಮಗೆ ಹಿತೆ’ (Manike Mage Hithe) ಹಾಡನ್ನು ಕೇಳದವರೇ ಇಲ್ಲ. ಅಷ್ಟರಮಟ್ಟಿಗೆ ಈ ಗೀತೆ ಫೇಮಸ್​ ಆಗಿದೆ. ಶ್ರೀಲಂಕಾದ ಗಾಯಕಿ ಯೊಹಾನಿ ಕಂಠದಲ್ಲಿ ಮೂಡಿಬಂದಿರುವ ಈ ಹಾಡು 135 ಮಿಲಿಯನ್​ಗಿಂತಲೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ. ಇನ್​ಸ್ಟಾಗ್ರಾಮ್ ರೀಲ್ಸ್​ನಲ್ಲಿ ಇದರದ್ದೇ ಹಾವಳಿ. ಜನ ಸಾಮಾನ್ಯರು ಮಾತ್ರವಲ್ಲದೇ ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಕೂಡ ‘ಮನಿಕೆ ಮಗೆ ಹಿತೆ’ ಹಾಡಿಗೆ ಮರುಳಾಗಿದ್ದಾರೆ. ಆದರೆ ಅದೇ ಹಾಡನ್ನು ಗುನುಗಿರುವ ರಾನು ಮಂಡಲ್​ (Ranu Mondal) ಅವರು ಹಿಗ್ಗಾಮುಗ್ಗಾ ಟ್ರೋಲ್​ಗೆ ಒಳಗಾಗುತ್ತಿದ್ದಾರೆ.

ಒಂದು ಕಾಲದಲ್ಲಿ ರಾತ್ರೋರಾತ್ರಿ ಇಂಟರ್​ನೆಟ್​ನಲ್ಲಿ ಫೇಮಸ್​ ಆದವರು ರಾನು ಮಂಡಲ್​. ರೈಲ್ವೆ ಸ್ಟೇಷನ್​ನಲ್ಲಿ ಹಾಡುತ್ತಿದ್ದ ಅವರು ನಂತರ ದೊಡ್ಡ ದೊಡ್ಡ ಮನರಂಜನಾ ವಾಹಿನಿಗಳ ರಿಯಾಲಿಟಿ ಶೋ ವೇದಿಕೆಗೂ ಕಾಲಿಟ್ಟಿದ್ದರು. ಸಂಗೀತ ನಿರ್ದೇಶಕ ಹಿಮೇಶ್​ ರೇಷಮಿಯಾ ಅವರು ರಾನು ಮಂಡಲ್​ಗೆ ಸಿನಿಮಾದಲ್ಲೂ ಹಾಡುವ ಅವಕಾಶ ನೀಡಿದ್ದರು. ಅನೇಕರಿಗೆ ಅವರ ಕಂಠ ಇಷ್ಟ ಆಗಿತ್ತು. ಆದರೆ ಈಗ ಅದೇ ರಾನು ಮಂಡಲ್​ ಸಿಕ್ಕಾಪಟ್ಟೆ ಟ್ರೋಲ್​ ಆಗುತ್ತಿದ್ದಾರೆ.

‘ಮನಿಕೆ ಮಗೆ ಹಿತೆ’ ಹಾಡನ್ನು ರಾನು ಮಂಡಲ್​ ಹಾಡಿರುವ ವಿಡಿಯೋ ಎಲ್ಲೆಲ್ಲೂ ವೈರಲ್​ ಆಗಿದೆ. ಅನೇಕ ಯೂಟ್ಯೂಬ್​ ಚಾನೆಲ್​ಗಳಲ್ಲಿ ಇದನ್ನು ಅಪ್​ಲೋಡ್​ ಮಾಡಲಾಗಿದೆ. ಅಚ್ಚರಿ ಎಂದರೆ ಅವರು ಹಾಡಿರುವುದು ಕೂಡ ಮಿಲಿಯನ್​ಗಟ್ಟಲೆ ವೀವ್ಸ್​ ಪಡೆದುಕೊಂಡಿದೆ. ಕಮೆಂಟ್​ ಸೆಕ್ಷನ್​ಗೆ ಹೋಗಿ ನೋಡಿದರೆ ಬರೀ ನೆಗೆಟಿವ್​ ಮಾತುಗಳೇ ಕಾಣಿಸುತ್ತಿವೆ.

‘ಎಲ್ಲದಕ್ಕೂ ಒಂದು ಕೊನೆ ಅಂತ ಇರುತ್ತದೆ. ರಾನು ಮಂಡಲ್​ ಈ ಕೂಡಲೇ ಇಂಥದ್ದನ್ನೆಲ್ಲ ನಿಲ್ಲಿಸಬೇಕು. ಇವರ ಗಾಯನ ಕೇಳಿ ನನ್ನ ಇಂದ್ರಿಯಗಳು ಸ್ತಬ್ದವಾಯಿತು. ಮತ್ತೆ ಅವು ಸರಿಯಾಗಬೇಕು ಎಂದರೆ ಒರಿಜಿನಲ್​ ಹಾಡು ಕೇಳಲೇಬೇಕು. ರಾನು ಹಾಡಿದ್ದನ್ನು ಒಂದುವೇಳೆ ಮೂಲ ಗಾಯಕಿ ಯೊಹಾನಿ ಕೇಳಿಸಿಕೊಂಡರೆ ಅವರು ಜೀವನದಲ್ಲಿ ಹಾಡುವುದನ್ನೇ ತ್ಯಜಿಸಿಬಿಡುತ್ತಾರೆ’ ಎಂಬಿತ್ಯಾದಿ ಕಮೆಂಟ್​ಗಳ ಮೂಲಕ ರಾನು ಮಂಡಲ್​ ಅವರನ್ನು ಟ್ರೋಲ್​ ಮಾಡಲಾಗುತ್ತಿದೆ.

ಇದನ್ನೂ ಓದಿ:

ರಾನು ಮಂಡಲ್​ ಜೀವನ ಆಧರಿಸಿ ಬರಲಿದೆ ಬಯೋಪಿಕ್; ಇದರಲ್ಲಿ ಮುಖ್ಯಭೂಮಿಕೆ ಯಾರದ್ದು?  ​

‘ಮನಿಕೆ ಮಗೆ ಹಿತೆ’ ಹಾಡನ್ನು ಒಮ್ಮೆಯಲ್ಲ ಸಾವಿರ ಬಾರಿ ಕೇಳಿಸಿಕೊಂಡರೂ ಬೇಸರವಾಗದು, ಅಮಿತಾಬ್, ಮಾಧುರಿಯವರನ್ನೇ ಕೇಳಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada