ರಾನು ಮಂಡಲ್​ ಜೀವನ ಆಧರಿಸಿ ಬರಲಿದೆ ಬಯೋಪಿಕ್; ಇದರಲ್ಲಿ ಮುಖ್ಯಭೂಮಿಕೆ ಯಾರದ್ದು?  ​

ರಾನು ಮಂಡಲ್​ ಖ್ಯಾತ ಗಾಯಕಿ ಲತಾ ಮಂಗೇಶ್ಕರ್​ ಅವರ ‘ಏಕ್​ ಪ್ಯಾರ್​ ಕಾ ನಗ್ಮಾ ಹೈ..’ ಹಾಡನ್ನು ರೈಲು ನಿಲ್ದಾಣದಲ್ಲಿ ಹಾಡಿದ್ದರು. ಇದನ್ನು ಕೆಲವರು ವಿಡಿಯೋ ಮಾಡಿ ಸೋಶಿಯಲ್​ ಮೀಡಿಯಾದಲ್ಲಿ ಹರಿಬಿಟ್ಟಿದ್ದರು.

ರಾನು ಮಂಡಲ್​ ಜೀವನ ಆಧರಿಸಿ ಬರಲಿದೆ ಬಯೋಪಿಕ್; ಇದರಲ್ಲಿ ಮುಖ್ಯಭೂಮಿಕೆ ಯಾರದ್ದು?  ​
Ranu Mandal Biopic Bollywood to Comeup with Ranu Mandal Biopic
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Sep 04, 2021 | 8:13 PM

ಸೋಶಿಯಲ್​ ಮೀಡಿಯಾದಲ್ಲಿ ರಾನು ಮಂಡಲ್​ ಹೊಸ ಸಂಚಲನ ಸೃಷ್ಟಿ ಮಾಡಿದ್ದರು. ಅವರ ಹಾಡನ್ನು ಕೇಳಿ ಗಾಯಕ ಹಿಮೇಶ್​ ರೇಷಮಿಯಾ​ ಕೂಡ ಫಿದಾ ಆಗಿದ್ದರು. ಆದರೆ, ಕೆಲವೇ ತಿಂಗಳಲ್ಲಿ ಅವರು ಮೂಲೆಗುಂಪಾದರು. ಅವರ ಬಗ್ಗೆ ನಾನಾ ಸುದ್ದಿಗಳು ಹರಿದಾಡೋಕೆ ಆರಂಭವಾದವು. ಈಗ ರಾನು ಮಂಡಲ್​ ಕುರಿತಾಗಿ ಬಯೋಪಿಕ್​ ಸಿದ್ಧಗೊಳ್ಳುತ್ತಿದೆ. ಈ ವಿಚಾರ ನೆಟ್ಟಿಗರಿಗೆ ಕೊಂಚ ಅಚ್ಚರಿ ನೀಡಿದ್ದಂತೂ ಸತ್ಯ.

ರಾನು ಮಂಡಲ್​ ಖ್ಯಾತ ಗಾಯಕಿ ಲತಾ ಮಂಗೇಶ್ಕರ್​ ಅವರ ‘ಏಕ್​ ಪ್ಯಾರ್​ ಕಾ ನಗ್ಮಾ ಹೈ..’ ಹಾಡನ್ನು ರೈಲು ನಿಲ್ದಾಣದಲ್ಲಿ ಹಾಡಿದ್ದರು. ಇದನ್ನು ಕೆಲವರು ವಿಡಿಯೋ ಮಾಡಿ ಸೋಶಿಯಲ್​ ಮೀಡಿಯಾದಲ್ಲಿ ಹರಿಬಿಟ್ಟಿದ್ದರು. ಇದು ಕೆಲವೇ ದಿನಗಳಲ್ಲಿ ಸಾಕಷ್ಟು ವೈರಲ್​ ಆಗಿತ್ತು. ಅನೇಕರು ರಾನು ಗಾಯನವನ್ನು ಕೊಂಡಾಡಿದ್ದರು. ರಾನು ರಾತ್ರಿ ಬೆಳಗಾಗುವುದರೊಳಗೆ ಸೋಶಿಯಲ್​ ಮೀಡಿಯಾ ಸ್ಟಾರ್​ ಆದರು.

ಹಿಮೇಶ್​ ಅವರು ‘ತೇರಿ ಮೇರಿ ಕಹಾನಿ..’ ಹಾಡು ಹೇಳೋಕೆ ರಾನುಗೆ ಅವಕಾಶ ನೀಡಿದ್ದರು. ಇದಾದ ನಂತರದಲ್ಲಿ ಸಾಕಷ್ಟು ಶೋಗಳಿಗೆ ಅತಿಥಿ​ ಆಗುವ ಅವಕಾಶ ಅವರಿಗೆ ಸಿಕ್ಕಿತ್ತು. ಇದೆಲ್ಲವನ್ನೂ ಅವರು ಬೇಡ ಎನ್ನಲೇ ಇಲ್ಲ. ಈಗ ರಾನು ಜೀವನದ ಕಥೆ ಬಯೋಪಿಕ್​ ಆಗುತ್ತಿದೆ. ರಿಶಿಕೇಶ್​ ಮಂಡಲ್​ ಅವರು ಈ ಬಯೋಪಿಕ್​ ನಿರ್ದೇಶನ ಮಾಡುತ್ತಿದ್ದಾರೆ. ಇಶಿಕಾ ಡೇ ಅವರು ರಾನು ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಮಿಸ್​ ರಾನು ಮರಿಯಾ’ ಎಂದು ಸಿನಿಮಾಗೆ ಟೈಟಲ್​ ಫಿಕ್ಸ್​ ಮಾಡಲಾಗಿದೆ.

ರಾನು ಪಶ್ಚಿಮ ಬಂಗಾಳದವರು. ಹೀಗಾಗಿ, ಬೆಂಗಾಲಿ ಭಾಷೆಯಲ್ಲಿ ಮಾತ್ರ ಈ ಸಿನಿಮಾ ಮಾಡುವ ಆಲೋಚನೆ ಚಿತ್ರತಂಡದ್ದಾಗಿತ್ತು. ಆದರೆ, ರಾನುಗೆ ದೇಶಾದ್ಯಂತ ಪ್ರಚಾರ ಸಿಕ್ಕಿದೆ. ಈ ಕಾರಣಕ್ಕೆ ಹಿಂದಿ ಭಾಷೆಯಲ್ಲೂ ಸಿನಿಮಾ ಮಾಡುವ ಆಲೋಚನೆ ಚಿತ್ರತಂಡಕ್ಕೆ ಬಂದಿದೆ. ಹಿಮೇಶ್​ ಕೂಡ ಈ ಸಿನಿಮಾಗಾಗಿ ಕೆಲಸ ಮಾಡಲಿದ್ದಾರೆ ಎನ್ನಲಾಗುತ್ತಿದೆ.  ಮುಂದಿನ ಮಾರ್ಚ್​ ಅಥವಾ ಏಪ್ರಿಲ್​ ವೇಳೆಗೆ ಸಿನಿಮಾ ರಿಲೀಸ್​ ಆಗುವ ನಿರೀಕ್ಷೆ ಇದೆ.  ಈ ಬಯೋಪಿಕ್​ ವಿಚಾರ ಅನೇಕರಲ್ಲಿ ಅಚ್ಚರಿ ಮೂಡಿಸಿದೆ. ಈ ಸಿನಿಮಾ ಹೇಗಿರಬಹುದು ಎನ್ನುವ ಪ್ರಶ್ನೆ ಪ್ರೇಕ್ಷಕರನ್ನು ಕೊರೆಯೋಕೆ ಆರಂಭಿಸಿದೆ.

ಇದನ್ನೂ ಓದಿ: ‘ಮೇಘನಾಳನ್ನು ನಾವು ನೋಡಿಕೊಳ್ತೀವಿ, ಬೇರೆ ಯಾರೂ ಬೇಡ’; ಪ್ರಮೀಳಾ ಜೋಷಾಯ್​ ನೇರ​ ಮಾತು

ಯಾವ ಬ್ರಾ ತೊಡುತ್ತೀರಿ ಎಂದು ಹೀರೋಯಿನ್ಅನ್ನು​ ಪ್ರಶ್ನಿಸಿದ ಅಭಿಮಾನಿ; ಮುಜುಗರ ಇಲ್ಲದೆ ಉತ್ತರಿಸಿದ 19 ವರ್ಷದ ನಟಿ

Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್