ಮೇಘನಾ ರಾಜ್​ಗೆ ಅಕ್ಟೋಬರ್​ ತಿಂಗಳು ಸ್ಪೆಷಲ್​; ವಿಶೇಷ ಪೋಸ್ಟ್​ ಹಂಚಿಕೊಂಡ ನಟಿ

TV9 Digital Desk

| Edited By: Rajesh Duggumane

Updated on: Oct 01, 2021 | 8:36 PM

ಮೇಘನಾ ರಾಜ್​ ಹಾಗೂ ಚಿರಂಜೀವಿ ಅವರದ್ದು ಪ್ರೇಮ ವಿವಾಹ. ಮದುವೆ ಆಗಿ ಕೆಲವೇ ವರ್ಷಗಳಲ್ಲಿ ಚಿರಂಜೀವಿ ಸರ್ಜಾ ಅವರು ಅಕಾಲಿಕ ಮರಣ ಹೊಂದಿದರು. ಆಗ ಮೇಘನಾ ರಾಜ್​ ಗರ್ಭಿಣಿ.

ಮೇಘನಾ ರಾಜ್​ಗೆ ಅಕ್ಟೋಬರ್​ ತಿಂಗಳು ಸ್ಪೆಷಲ್​; ವಿಶೇಷ ಪೋಸ್ಟ್​ ಹಂಚಿಕೊಂಡ ನಟಿ
ಮೇಘನಾ ರಾಜ್​
Follow us

ಚಿರಂಜೀವಿ ಸರ್ಜಾ ಸಾವಿನ ನಂತರ ತೀವ್ರ ನೋವು ಅನುಭವಿಸಿದ್ದ ನಟಿ ಮೇಘನಾ ರಾಜ್​ ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಮಗ ರಿಯಾನ್​ ರಾಜ್​ ಸರ್ಜಾ ಹುಟ್ಟಿದ ನಂತರದಲ್ಲಿ ಅವರ ಮುಖದಲ್ಲಿ ಮಂದಹಾಸ ಮೂಡಿದೆ. ಈಗ ಅಕ್ಟೋಬರ್​ ಬಂದಿದ್ದು, ಅವರಿಗೆ ಇದು ವಿಶೇಷ ತಿಂಗಳು. ಇದಕ್ಕೆ ಕಾರಣ ಕೂಡ ಇದೆ.

ಮೇಘನಾ ರಾಜ್​ ಹಾಗೂ ಚಿರಂಜೀವಿ ಅವರದ್ದು ಪ್ರೇಮ ವಿವಾಹ. ಮದುವೆ ಆಗಿ ಕೆಲವೇ ವರ್ಷಗಳಲ್ಲಿ ಚಿರಂಜೀವಿ ಸರ್ಜಾ ಅವರು ಅಕಾಲಿಕ ಮರಣ ಹೊಂದಿದರು. ಆಗ ಮೇಘನಾ ರಾಜ್​ ಗರ್ಭಿಣಿ. ಈ ಎಲ್ಲಾ ನೋವುಗಳನ್ನು ದಾಟಿ ಮೇಘನಾ ರಾಜ್​ ಮುಂದೆ ಬಂದಿದ್ದಾರೆ. ಚಿರುವನ್ನು ಕಳೆದುಕೊಂಡು ಒಂದು ವರ್ಷದ ಮೇಲಾಗಿದ್ದು, ಅವರು ಈಗ ಮೊದಲಿನ ಮನಸ್ಥಿತಿಗೆ ಮರಳುತ್ತಿದ್ದಾರೆ. ಇದಕ್ಕೆ ಕಾರಣವಾಗಿದ್ದು ತಮ್ಮ ಮಗ ಎಂದು ಅವರು ಅನೇಕ ಬಾರಿ ಹೇಳಿಕೊಂಡಿದ್ದಿದೆ.

ಹಾಗಾದರೆ ಮೇಘನಾಗೆ ಅಕ್ಟೋಬರ್​ ತಿಂಗಳು ವಿಶೇಷ ಏಕೆ? ಅದಕ್ಕೆ ಕಾರಣ ಇದೆ. ಮೇಘನಾ ರಾಜ್​ ಪತಿ ಚಿರಂಜೀವಿ ಸರ್ಜಾ ಹಾಗೂ ಮಗ ರಾಯನ್​ ರಾಜ್​ ಸರ್ಜಾ ಇಬ್ಬರೂ ಹುಟ್ಟಿದ್ದು ಅಕ್ಟೋಬರ್​ ತಿಂಗಳಲ್ಲೇ. ಕೇವಲ ಐದು ದಿನಗಳ ಅಂತರದಲ್ಲಿ ಇಬ್ಬರ ಜನ್ಮದಿನ ಬರಲಿದೆ. ಅಕ್ಟೋಬರ್​ 17 ಚಿರಂಜೀವಿ ಜನ್ಮದಿನ. ರಾಯನ್​ ಹುಟ್ಟಿದ್ದು ಅಕ್ಟೋಬರ್​ 22ರಂದು. ಇದು ಮೇಘನಾಗೆ ಖುಷಿಯ ವಿಚಾರ. ಈ ಬಗ್ಗೆ ಅವರು ಇನ್​ಸ್ಟಾಗ್ರಾಮ್​ನಲ್ಲಿ ಸ್ಟೇಟಸ್​ ಹಾಕಿದ್ದಾರೆ.

ಚಿರಂಜೀವಿ ಸರ್ಜಾ ಮೃತಪಟ್ಟ ನಂತರ ಅಭಿಮಾನಿಗಳು ಅವರನ್ನು ತುಂಬಾನೇ ಮಿಸ್​ ಮಾಡಿಕೊಳ್ಳುತ್ತಿದ್ದಾರೆ. ಇದು ಅವರು ಇಲ್ಲದೆ ಆಚರಿಸುತ್ತಿರುವ ಎರಡನೇ ವರ್ಷದ ಜನ್ಮದಿನ. ಈ ವಿಶೇಷ ದಿನದಂದು ಕುಟುಂಬದವರು ಚಿರು ಸಮಾಧಿಗೆ ತೆರಳಿ ವಿಶೇಷ ಪೂಜೆ ಅರ್ಪಿಸುವ ಸಾಧ್ಯತೆ ಇದೆ. ಇನ್ನು, ರಾಯನ್​ಗೆ ಇದು ಮೊದಲ ವರ್ಷದ ಹುಟ್ಟುಹಬ್ಬ. ಹೀಗಾಗಿ, ಕುಟುಂಬದವರು ಬರ್ತ್​ಡೇಯನ್ನು ಅದ್ದೂರಿಯಾಗಿ ಆಚರಿಸುವ ಸಾಧ್ಯತೆ ಇದೆ. ​ ಒಟ್ಟಿನಲ್ಲಿ ಮೇಘನಾ ರಾಜ್​ ಅವರ ಅಭಿಮಾನಿಗಳ ಪಾಲಿಗೆ ಈ ತಿಂಗಳು ತುಂಬಾನೇ ವಿಶೇಷವಾಗಿರಲಿದೆ.

ಇದನ್ನೂ ಓದಿ: Meghana Raj: ಮೇಘನಾ ರಾಜ್​ ಎರಡನೇ ಮದುವೆ ಬಗ್ಗೆ ಸುಳ್ಳು ಸುದ್ದಿ; ನಟ ಪ್ರಥಮ್​ ಆಕ್ರೋಶ

ಮೇಘನಾ ರಾಜ್​ ಮಗ ರಾಯನ್​ ರಾಜ್​ ಸರ್ಜಾಗೆ 11ನೇ ತಿಂಗಳ ಸಂಭ್ರಮ; ಇಲ್ಲಿದೆ ವಿಡಿಯೋ 

 

ತಾಜಾ ಸುದ್ದಿ

Related Stories

Click on your DTH Provider to Add TV9 Kannada