AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿನ್ನ ಸನಿಹಕೆ: ಸೂರಜ್​ ಜತೆ ಲಿವ್​ ಇನ್ ರಿಲೇಷನ್​ಶಿಪ್​ ಕಥೆ ಹೇಳ್ತಾರೆ ಡಾ. ರಾಜ್​ ಮೊಮ್ಮಗಳು ಧನ್ಯಾ

ಥಿಯೇಟರ್​ನಲ್ಲಿ ಶೇ.100ರಷ್ಟು ಆಕ್ಯುಪೆನ್ಸಿಗೆ ಅವಕಾಶ ನೀಡಿದ ಬಳಿಕ ಕನ್ನಡ ಚಿತ್ರರಂಗದಲ್ಲಿ ಮತ್ತೆ ಹಳೇ ಚಾರ್ಮ್​ ಮರಳುತ್ತಿದೆ. ಧನ್ಯಾ ರಾಮ್​ಕುಮಾರ್​, ಸೂರಜ್​ ಗೌಡ ಜೋಡಿಯ ‘ನಿನ್ನ ಸನಿಹಕೆ’ ಚಿತ್ರ ಅ.8ರಂದು ತೆರೆಕಾಣುತ್ತಿದೆ.

ನಿನ್ನ ಸನಿಹಕೆ: ಸೂರಜ್​ ಜತೆ ಲಿವ್​ ಇನ್ ರಿಲೇಷನ್​ಶಿಪ್​ ಕಥೆ ಹೇಳ್ತಾರೆ ಡಾ. ರಾಜ್​ ಮೊಮ್ಮಗಳು ಧನ್ಯಾ
ಸೂರಜ್​ ಗೌಡ, ಧನ್ಯಾ ರಾಮ್​ಕುಮಾರ್​
TV9 Web
| Edited By: |

Updated on: Oct 04, 2021 | 10:59 AM

Share

ರಾಜ್​ಕುಮಾರ್​ ಮೊಮ್ಮಗಳು ಧನ್ಯಾ ರಾಮ್​ಕುಮಾರ್​ ಮತ್ತು ಸೂರಜ್​ ಗೌಡ ಜೋಡಿಯಾಗಿ ನಟಿಸಿರುವ ‘ನಿನ್ನ ಸನಿಹಕೆ’ ಚಿತ್ರ ಟ್ರೇಲರ್​ ಮೂಲಕವೇ ಭರವಸೆ ಮೂಡಿಸಿದೆ. ಹೊಸ ತಲೆಮಾರಿನ ಪ್ರೇಕ್ಷಕರನ್ನು ಗಮನದಲ್ಲಿ ಇಟ್ಟುಕೊಂಡು ಈ ಸಿನಿಮಾ ತಯಾರಾದಂತಿದೆ. ನಾಯಕನಾಗಿ ನಟಿಸುವುದರ ಜೊತೆ ನಿರ್ದೇಶಕನಾಗಿಯೂ ಸೂರಜ್​ ಗೌಡ ಕೆಲಸ ಮಾಡಿದ್ದಾರೆ. ಲಿವ್​-ಇನ್​-ರಿಲೇಷನ್​ಶಿಪ್​ ಕುರಿತ ಕಥೆ ಈ ಚಿತ್ರದಲ್ಲಿದೆ. ಅ.8ರಂದು ರಾಜ್ಯಾದ್ಯಂತ ‘ನಿನ್ನ ಸನಿಹಕೆ’ ಬಿಡುಗಡೆ ಆಗಲಿದ್ದು, ಜನರ ಪ್ರತಿಕ್ರಿಯೆ ಪಡೆಯಲು ಚಿತ್ರತಂಡ ಕಾಯುತ್ತಿದೆ. ಅಕ್ಷಯ್​ ರಾಜಶೇಖರ್​, ರಂಗನಾಥ್​ ಕೂಡ್ಲಿ ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ.

ತಮ್ಮ ಕೆಲಸದ ಬಗ್ಗೆ ಸೂರಜ್​ ಗೌಡ ಆತ್ಮವಿಶ್ವಾಸ ಇಟ್ಟುಕೊಂಡಿದ್ದಾರೆ. ‘ಇದು ನಮ್ಮೆಲ್ಲರ ಕನಸು. ಸಿನಿಮಾ ಶುರು ಮಾಡಿದಾಗಿನಿಂದಲೂ ಇದು ಡಿಫರೆಂಟ್​ ಆಗಿ ಮೂಡಿಬರಬೇಕು ಅಂದುಕೊಂಡಿದ್ವಿ. ಅದು ಈಡೇರಿದೆ. ಇದೊಂದು ರೊಮ್ಯಾಂಟಿಕ್​ ಕಾಮಿಡಿ ಚಿತ್ರ. ಈಗಿನ ಕಾಲದಲ್ಲಿ ಪ್ರೀತಿಯನ್ನು ನಾವು ಹೇಗೆ ಗ್ರಹಿಸುತ್ತೇವೆ ಎಂಬುದನ್ನು ಇದರಲ್ಲಿ ತೋರಿಸಿದ್ದೇವೆ. ಲಿವ್​-ಇನ್​-ರಿಲೇಷನ್​ಶಿಪ್​ ಬಗ್ಗೆ ಈ ಚಿತ್ರದ ಕಥೆ ಇದೆ ಎಂಬುದು ಟ್ರೇಲರ್ ನೋಡಿದರೆ ಗೊತ್ತಾಗುತ್ತದೆ. ಲಿವ್​-ಇನ್​-ರಿಲೇಷನ್​ಶಿಪ್​ಗೆ ಕಾನೂನಿನ ಸಮ್ಮತಿ ಇದ್ದರೂ ಕೂಡ ಅದನ್ನು ನಮ್ಮ ಸಮಾಜ ಒಪ್ಪಿಕೊಂಡಿಲ್ಲ. ಅದನ್ನು ಕಾಮಿಡಿ ಮೂಲಕ ಹೇಳುತ್ತಿದ್ದೇವೆ’ ಎಂದಿದ್ದಾರೆ ಸೂರಜ್​.

ತಮ್ಮ ಮೊದಲ ಸಿನಿಮಾದ ಬಿಡುಗಡೆ ಹೊಸ್ತಿಲಿನಲ್ಲಿ ನಿಂತಿರುವ ಧನ್ಯಾ ರಾಮ್​ಕುಮಾರ್​ ಅವರು ಈ ಚಿತ್ರದಲ್ಲಿ ಅಮೃತಾ ಎಂಬ ದಂತ ವೈದ್ಯೆಯ ಪಾತ್ರ ಮಾಡಿದ್ದಾರೆ. ‘ನೇರ ನಡೆ-ನುಡಿ ಇರುವಂಥ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ನನ್ನ ರಿಯಲ್​ ಲೈಫ್​ ವ್ಯಕ್ತಿತ್ವಕ್ಕೂ ಈ ಗುಣ ಮ್ಯಾಚ್​ ಆಗುತ್ತದೆ. ಹಾಗಾಗಿ ಈ ಪಾತ್ರ ನಿಭಾಯಿಸುವುದು ಸುಲಭ ಆಯಿತು’ ಎಂದಿದ್ದಾರೆ ಧನ್ಯಾ.

ಈ ಚಿತ್ರಕ್ಕೆ ರಘು ದೀಕ್ಷಿತ್​ ಸಂಗೀತ ನಿರ್ದೇಶನ ಮಾಡಿದ್ದಾರೆ. ಹಾಡುಗಳು ಹಿಟ್​ ಆಗಿರುವುದು ಚಿತ್ರತಂಡಕ್ಕೆ ಖುಷಿ ನೀಡಿದೆ. ‘ಒಂದು ವರ್ಷದಿಂದಲೂ ಒಂದೊಂದೇ ಹಾಡುಗಳನ್ನು ರಿಲೀಸ್​ ಮಾಡುತ್ತ ಬಂದಿದ್ದೇವೆ. ಶುದ್ಧ ಕನ್ನಡದಲ್ಲಿ ಹಾಡುಗಳನ್ನು ರಚಿಸಲಾಗಿದೆ. ಸಾಂಗ್ಸ್​​ ಹಿಟ್​ ಆಗಲು ವಾಸುಕಿ ವೈಭವ್​ ಅವರ ಸಾಹಿತ್ಯ ಕಾರಣ. ಎಲ್ಲ 8 ಗೀತೆಗಳಿಗೆ ಅವರು ಸಾಹಿತ್ಯ ಬರೆದಿದ್ದಾರೆ. ಗಾಯಕರು ಮತ್ತು ನನ್ನ ಇಡೀ ತಂಡಕ್ಕೆ ಕ್ರೆಡಿಟ್​ ಸಲ್ಲುತ್ತದೆ. ಸ್ಫೂರ್ತಿ ನೀಡುವಂತ ಕಥೆ ಮತ್ತು ನಿರ್ದೇಶಕರು ಇರುವಾಗ ಹಿನ್ನೆಲೆ ಸಂಗೀತಕ್ಕೆ ಕೆಲಸ ಮಾಡುವುದು ಕೂಡ ಆನಂದ ನೀಡುತ್ತದೆ’ ಎಂಬುದು ರಘು ದೀಕ್ಷಿತ್​ ಮಾತುಗಳು.

ಇದನ್ನೂ ಓದಿ:

‘ನಿನ್ನ ಸನಿಹಕೆ’ ಚಿತ್ರ ನೋಡಲಿರುವ ರಜನಿಕಾಂತ್​; ಧನ್ಯಾ ರಾಮ್​ಕುಮಾರ್​-ಸೂರಜ್​ಗೆ ತಲೈವಾ ಬೆಂಬಲ

‘ಎಲ್ಲರಿಗೂ ಇಂಥ ಆಸೆ ಇರುತ್ತೆ, ನಂಗೆ ಇರಲ್ವಾ?’ ವಜ್ರೇಶ್ವರಿ ಕಂಬೈನ್ಸ್​ ಬಗ್ಗೆ ಡಾ. ರಾಜ್​ ಮೊಮ್ಮಗಳ ಮನದ ಮಾತು

Follow Us
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ