‘ಕೋಟಿಗೊಬ್ಬ 3’ ರಿಲೀಸ್​ಗೂ ಮೊದಲೇ ಪೈರಸಿ ಮಾಡಲು ಕಿಡಿಗೇಡಿಗಳ ಪ್ಲ್ಯಾನ್​; ಇಲ್ಲಿದೆ ಸಾಕ್ಷಿ

ಸುದೀಪ್​ ನಟನೆಯ ‘ಕೋಟಿಗೊಬ್ಬ 3’ ಸಿನಿಮಾ ನಾಡ ಹಬ್ಬಕ್ಕೆ ರಿಲೀಸ್​ ಆಗುತ್ತಿದೆ. ಅಕ್ಟೋಬರ್​ 14ರಂದು ಸಿನಿಮಾ ತೆರೆಗೆ ಬರುತ್ತಿರುವ ವಿಚಾರ ಅವರ ಅಭಿಮಾನಿಗಳಿಗೆ ಸಖತ್​ ಖುಷಿ ನೀಡಿದೆ. ಇದಕ್ಕಾಗಿ ಸುದೀಪ್​ ಕಟೌಟ್​ ರೆಡಿ ಮಾಡಲಾಗುತ್ತಿದೆ. ಈ​ ಸಿನಿಮಾ ರಿಲೀಸ್​ಗೂ ಮೊದಲೇ ಪೈರಸಿ ಕಾಟದ ಭಯ ಎದುರಿಸುತ್ತಿದೆ.

ಟೆಲಿಗ್ರಾಮ್​ನಲ್ಲಿ ಪೈರಸಿ ಕಾಪಿಗಳು ಓಡಾಡೋದು ಹೆಚ್ಚು. ಅದೇ ರೀತಿ, ‘ಕೋಟಿಗೊಬ್ಬ 3’ ರಿಲೀಸ್​ಗೂ ಮೊದಲೇ ಈ ಬಗ್ಗೆ ಸಂದೇಶವೊಂದು ಟೆಲಿಗ್ರಾಮ್​ನಲ್ಲಿ ಹರಿದಾಡುತ್ತಿದೆ. ‘ನೀವು ‘ಕೋಟಿಗೊಬ್ಬ 3’ ಸಿನಿಮಾ ಡೌನ್​ಲೋಡ್​ ಮಾಡಲು ನಮ್ಮ ಚಾನೆಲ್​ಗೆ ಜಾಯಿನ್​ ಆಗಿ’ ಎಂಬಿತ್ಯಾದಿ ಸಂದೇಶ ಹರಿದಾಡುತ್ತಿದೆ. ಕಳೆದ ಬಾರಿಯೂ ಸುದೀಪ್​ ಸಿನಿಮಾ ಲೀಕ್​ ಮಾಡಲಾಗಿತ್ತು. ತಪ್ಪಿತಸ್ಥರ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದರು.

ಇದನ್ನೂ ಓದಿ: ಸುದೀಪ್​ಗಾಗಿ ಸಿದ್ಧವಾಗ್ತಿದೆ 120 ಅಡಿ ಕಟೌಟ್​

Click on your DTH Provider to Add TV9 Kannada