ಸ್ಯಾಮ್ಸಂಗ್ ಎಮ್52 5ಜಿ ಫೋನಿನ  ಅಧಿಕೃತ ಲಾಂಚ್​ಗೆ ಮೊದಲೇ ಮೈಕ್ರೋಸೈಟ್​ಗಳಲ್ಲಿ ಮಾರಾಟ ಆರಂಭಗೊಂಡಿದೆ!

ಸ್ಯಾಮ್ಸಂಗ್ ಎಮ್52 5ಜಿ ಫೋನಿನ  ಅಧಿಕೃತ ಲಾಂಚ್​ಗೆ ಮೊದಲೇ ಮೈಕ್ರೋಸೈಟ್​ಗಳಲ್ಲಿ ಮಾರಾಟ ಆರಂಭಗೊಂಡಿದೆ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 29, 2021 | 5:35 PM

ಅಮೆಜಾನ್ ಮೈಕ್ರೊಸೈಟ್​​​​ನಲ್ಲಿ ಎಮ್52 5ಜಿ ಫೀಚರ್​ಗಳ ಬಗ್ಗೆ ಹೆಚ್ಚಿನ ವಿವರಗಳಿಲ್ಲ. ಕೇವಲ ಮಾನ್ಸ್ಟರ್ ಈಸ್ ಬ್ಯಾಕ್ ಎಂಬ ಪಂಚ್ ಲೈನ್​​ನೊಂದಿಗೆ ಪೋನ್ ಮಾರಾಟ ಆರಂಭವಾಗಿದೆ.

ಸ್ಯಾಮ್ಸಂಗ್ ಹೊಸ ತನ್ನ ಹೊಸ 5ಜಿ ಸ್ಮಾರ್ಟ್ ಪೋನ್ ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಂತೆಯೇ, ಅಮೇಜಾನ್ ಮತ್ತು ಸ್ಯಾಮ್ಸಂಗ್ ವೆಬ್ಸೈಟ್ ನಲ್ಲಿ ಅದರ ಮಾರಾಟ ಮಂಗಳವಾರ ಅಂದರೆ ಸೆಪ್ಟೆಂಬರ್ 28 ರಂದು ಆರಂಭವಾಗಿದೆ. ಇದು ಭಾರತದಲ್ಲಿ ಎಮ್-ಸರಣಿಯ ಸ್ಮಾರ್ಟ್ ಪೋನ್ ಅಗಿದ್ದು 5ಜಿ ನೆಟ್ ವರ್ಕ್ ಅನ್ನು ಸಪೋರ್ಟ್ ಮಾಡುತ್ತದೆ. ಕಂಪನಿಯು ಕಳೆದ ವರ್ಷ ಲಾಂಚ್ ಮಾಡಿದ್ದ ಎಮ್ 32 5ಜಿ ಫೋನನ್ನು ಎಮ್52 5ಜಿ ಜೊತೆಗೂಡಲಿದೆ. ಪೋನಿನ ಅಧಿಕೃತ ಲಾಂಚ್ಗಾಗಿ ಕಂಪನಿಯು ದಿನಾಂಕವನ್ನು ಇನ್ನೂ ನಿಗದಿಪಡಿಸಿಲ್ಲ.

ಅಮೆಜಾನ್ ಮೈಕ್ರೊಸೈಟ್​​​​ನಲ್ಲಿ ಎಮ್52 5ಜಿ ಫೀಚರ್​ಗಳ ಬಗ್ಗೆ ಹೆಚ್ಚಿನ ವಿವರಗಳಿಲ್ಲ. ಕೇವಲ ಮಾನ್ಸ್ಟರ್ ಈಸ್ ಬ್ಯಾಕ್ ಎಂಬ ಪಂಚ್ ಲೈನ್​​ನೊಂದಿಗೆ ಪೋನ್ ಮಾರಾಟ ಆರಂಭವಾಗಿದೆ. ಉತ್ತಮ ಬ್ಯಾಟರಿ ಬ್ಯಾಕಪ್ ಮತ್ತು ಕೆಲ ಇತರ ಫೀಚರ್​ಗಳಿಂದಾಗಿ ಸ್ಯಾಮ್ಸಂಗ್ ಎಮ್-ಸರಣಿಯ ಫೋನ್​ಗಳನ್ನು ಮಾನ್ಸ್ಟರ್ ಎಂದೇ ಉಲ್ಲೇಖಿಸಲಾಗುತ್ತದೆ.

ಸ್ಯಾಮ್ಸಂಗ್ ಎಮ್52 5ಜಿ ಫೋನ್ 64 ಎಮ್ ಪಿ ಮೇನ್ ಕೆಮೆರಾ, 12 ಎಮ್ ಪಿ ಸೆಕಂಡರಿ ಕೆಮೆರಾ ಮತ್ತು 5 ಎಮ್ ಪಿ ಮ್ಯಾಕ್ರೊ ಕೆಮೆರಾ ಹೊಂದಿದೆ. ಸೆಲ್ಫಿಗಾಗೇ ಪ್ರತ್ಯೇಕ 32 ಎಮ್ ಪಿ  ಕೆಮೆರಾ ಹೊಂದಿದೆ. ಫೋನಿನ ಮತ್ತೊಂದು ಉಲ್ಲೇಖಾರ್ಹ ಫೀಚರ್ ಎಂದರೆ, ಅದು 5,000 ಎಮ್ ಎ ಎಚ್ ಬ್ಯಾಟರಿ ಮತ್ತು 25 ವ್ಯಾಟ್ಸ್ ಚಾರ್ಜಿಂಗ್ ನೊಂದಿಗೆ ಬರುತ್ತದೆ.

ಬಲಬದಿಯಲ್ಲಿ ಫಿಂಗರ್ ಪ್ರಿಂಟ್ ಸೆನ್ಸರ್ ಹೊಂದಿರುವ ಎಮ್52 5ಜಿ ಫೋನಿನ ಬೆಲೆ ರೂ. 32,900.

ಇದನ್ನೂ ಓದಿ:  ಮೇಕೆಯ ಬೆನ್ನೇರಿ ಕುಳಿತು ಹಣ್ಣುಗಳನ್ನು ಸವಿಯುತ್ತಿರುವ ಮರಿ ಮಂಗನ ವಿಡಿಯೋ ವೈರಲ್; 12 ಮಿಲಿಯನ್ ವೀಕ್ಷಣೆ ಪಡೆದ ದೃಶ್ಯವಿದು