AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಟಿಗೊಬ್ಬ 3 ಚಿತ್ರತಂಡಕ್ಕೆ ಅಭಯ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ

ಚಲನಚಿತ್ರರಂಗಕ್ಕೆ ಹೊಡೆತ ಕೊಡುವ ಪೈರಸಿಯನ್ನು ತಡೆಗಟ್ಟಲು ಎಲ್ಲ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಲಾಗಿದೆ.

ಕೋಟಿಗೊಬ್ಬ 3 ಚಿತ್ರತಂಡಕ್ಕೆ ಅಭಯ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ
ಸಾಂಕೇತಿಕ ಚಿತ್ರ
TV9 Web
| Edited By: |

Updated on: Sep 29, 2021 | 6:32 PM

Share

ಬೆಂಗಳೂರು: ಕಷ್ಟಪಟ್ಟು ಕೋಟ್ಯಾಂತರ ಹಣ ಹಾಕಿ ನಿರ್ಮಿಸುವ ಸಿನಿಮಾವನ್ನು ಪೈರಸಿ ಮಾಡುವುದರಿಂದ ಚಿತ್ರರಂಗಕ್ಕೆ ದೊಡ್ಡ ಹೊಡೆತ ಬೀಳುತ್ತದೆ. ಪೈರಸಿ ತಡೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಬೆಂಗಳೂರಿನಲ್ಲಿ ಗೃಹಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ಕೋಟಿಗೊಬ್ಬ 3 ಸಿನಿಮಾ ನಿರ್ಮಾಪಕರು ಮಧ್ಯಾಹ್ನ ಪೈರಸಿ ಕೃತ್ಯದ ಬಗ್ಗೆ ತಿಳಿಸಿ ಪೈರಸಿಯನ್ನು ನಿಲ್ಲಿಸುವಂತೆ ಮನವಿ ಕೊಟ್ಟಿದ್ದಾರೆ. ಇದೊಂದು ರೀತಿಯಲ್ಲಿ ಉದ್ದೇಶಿತ ಅಪರಾಧದಂತೆ ಭಾಸವಾಗುತ್ತದೆ. ಚಲನಚಿತ್ರರಂಗಕ್ಕೆ ಹೊಡೆತ ಕೊಡುವ ಪೈರಸಿಯನ್ನು ತಡೆಗಟ್ಟಲು ಎಲ್ಲ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಿದ್ದೇನೆ ಎಂದು ಅವರು ತಿಳಿಸಿದರು.

ಕೋಟಿಗೊಬ್ಬ 3 ಪೈರಸಿಯಾಗದಂತೆ ಕ್ರಮ ಪೈರಸಿ ಬೆದರಿಕೆ ಸಂಬಂಧ ಪೊಲೀಸ್ ಕಮೀಷನರ್​ಗೆ ದೂರು ನೀಡಿದ್ದೇವೆ. ನಮಗೆ ಬಂದ ಬೆದರಿಕೆ ಕುರಿತಂತೆ ಎಲ್ಲಾ ದಾಖಲೆ ನೀಡಲಾಗಿದೆ. 10 ದಿನಗಳ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಪೈರಸಿ ಮಾಡುವುದಾಗಿ ಬೆದರಿಕೆ ಹಾಕಿರುವ ಮೇಸೆಜ್ಗಳು ಬಂದಿದ್ದವು. ಈ ಸಂಬಂಧ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ಗೆ ಕ್ರಮ‌ ಕೈಗೊಳ್ಳುವಂತೆ ಆಯುಕ್ತರಿಂದ ಶಿಫಾರಸ್ಸು ಮಾಡಲಾಗಿದೆ. ತ್ವರಿತವಾಗಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಬುಧವಾರ ಕೋಟಿಗೊಬ್ಬ-3 ನಿರ್ಮಾಪಕ ಸೂರಪ್ಪಬಾಬು ತಿಳಿಸಿದ್ದರು.ಕೋಟಿಗೊಬ್ಬ 3 ಸಿನಿಮಾವನ್ನು ಪೈರಸಿಯಾಗದಂತೆ ಉಳಿಸಿಕೊಳ್ಳೋಕೆ ಏನು ಬೇಕೋ ಅದನ್ನು ಮಾಡುವಂತೆ ಸುದೀಪ್ ಸಲಹೆ ನೀಡಿದ್ದಾರೆ ಎನ್ನಲಾಗಿದೆ.

‘ಕೋಟಿಗೊಬ್ಬ 3’ ರಿಲೀಸ್​ಗೂ ಮೊದಲೇ ಪೈರಸಿ ಕಾಪಿಯ ಸಂದೇಶವೊಂದು ಟೆಲಿಗ್ರಾಮ್​ನಲ್ಲಿ ಹರಿದಾಡುತ್ತಿದೆ. ‘ನೀವು ‘ಕೋಟಿಗೊಬ್ಬ 3’ ಸಿನಿಮಾ ಡೌನ್​ಲೋಡ್​ ಮಾಡಲು ನಮ್ಮ ಚಾನೆಲ್​ಗೆ ಜಾಯಿನ್​ ಆಗಿ’ ಎಂಬಿತ್ಯಾದಿ ಸಂದೇಶ ಹರಿದಾಡುತ್ತಿದೆ. ಇದರಿಂದ ಎಚ್ಚೆತ್ತುಕೊಂಡಿರುವ ‘ಕೋಟಿಗೊಬ್ಬ 3’ ನಿರ್ಮಾಪಕ ಸೂರಪ್ಪಬಾಬು ಅವರು ಸೈಬರ್​ ಠಾಣೆಗೆ ದೂರು ನೀಡಿದ್ದಾರೆ. ಅಲ್ಲದೆ, ಪೈರಸಿ ಮಾಡುವವರಿಗೆ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: 

ಪೈರಸಿ ಮಾಡುವವರಿಗೆ ‘ಕೋಟಿಗೊಬ್ಬ 3’ ತಂಡದಿಂದ ಖಡಕ್​ ಎಚ್ಚರಿಕೆ

‘ಕೋಟಿಗೊಬ್ಬ 3’ ರಿಲೀಸ್​ಗೂ ಮೊದಲೇ ಪೈರಸಿ ಮಾಡಲು ಕಿಡಿಗೇಡಿಗಳ ಪ್ಲ್ಯಾನ್​; ಇಲ್ಲಿದೆ ಸಾಕ್ಷಿ

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ