Viral News: ಫ್ಲಿಪ್​ ಕಾರ್ಟ್​ನಲ್ಲಿ ಇಯರ್ ಫೋನ್ ಆರ್ಡರ್ ಮಾಡಿದ್ದ ನಟ; ಸಿಕ್ಕಿದ್ದು ಮಾತ್ರ ಖಾಲಿ ಬಾಕ್ಸ್!

Viral News: ಫ್ಲಿಪ್​ ಕಾರ್ಟ್​ನಲ್ಲಿ ಇಯರ್ ಫೋನ್ ಆರ್ಡರ್ ಮಾಡಿದ್ದ ನಟ; ಸಿಕ್ಕಿದ್ದು ಮಾತ್ರ ಖಾಲಿ ಬಾಕ್ಸ್!
ಟ್ವಿಟರ್​ ಪೋಸ್ಟ್​

Shocking News: ನಟ ಫ್ಲಿಪ್ ಕಾರ್ಟ್​ನಿಂದ ಇಯರ್ ಫೋನ್ ಆರ್ಡರ್ ಮಾಡಿದ್ದರು. ಆದರೆ ಬಾಕ್ಸ್​ನಲ್ಲಿ ಏನೂ ಇರಲಿಲ್ಲ ಎಂದು ಪೋಸ್ಟ್​ ಹಂಚಿಕೊಂಡಿದ್ದಾರೆ.

TV9kannada Web Team

| Edited By: shruti hegde

Oct 17, 2021 | 10:30 AM

ಫ್ಲಿಪ್​ ಕಾರ್ಟ್​ನಿಂದ ಇಯರ್ ಫೋನ್ ಆರ್ಡರ್ ಮಾಡಿದ್ದ ನಟ ಪರಾಸ್ ಕಲ್ನವತ್ ಅವರು ಆರ್ಡರ್ ಸ್ವೀಕರಿಸಿದ ಬಳಿಕ ಖಾಲಿ ಬಾಕ್ಸ್ ನೋಡಿ ಆಶ್ಚರ್ಯಚಕಿತರಾಗಿದ್ದಾರೆ. ಈ ಕುರಿತಂತೆ ಅವರು ಟ್ವಿಟರ್​ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಟಿವಿ ಧಾರವಾಹಿ ಅನುಪಮಾದಲ್ಲಿ ಸಮರ್ ಪಾತ್ರದಲ್ಲಿ ಜನಪ್ರಿಯತೆ ಗಳಿಸಿಕೊಂಡಿರುವ ನಟ ಫ್ಲಿಪ್ ಕಾರ್ಟ್​ನಿಂದ ಇಯರ್ ಫೋನ್ ಆರ್ಡರ್ ಮಾಡಿದ್ದರು. ಆದರೆ ಬಾಕ್ಸ್​ನಲ್ಲಿ ಏನೂ ಇರಲಿಲ್ಲ ಎಂದು ಪೋಸ್ಟ್​ ಹಂಚಿಕೊಂಡಿದ್ದಾರೆ.

ಇಲ್ಲಿ ನಾನು ಫ್ಲಿಪ್​ ಕಾರ್ಟ್​ನಿಂದ ಏನೂ ಸ್ವೀಕರಿಸಿಲ್ಲ. ಸಮಯ ಕಳೆಯುತ್ತಿದ್ದಂತೆಯೇ ಈ ಥರಹದ ಪ್ರಕರಣಗಳು ಕಂಡು ಬರುತ್ತಿವೆ. ಇದೇ ರೀತಿ ಮುಂದುವೆರೆದರೆ ಶೀಘ್ರದಲ್ಲಿಯೇ ಫ್ಲಿಪ್ ಕಾರ್ಟ್​ನಿಂದ ಜನರು ವಸ್ತುಗಳ ಖರೀದಿಯನ್ನು ನಿಲ್ಲಿಸುತ್ತಾರೆ ಎಂದು ಪರಾಸ್ ಟ್ವೀಟ್ ಮಾಡಿದ್ದಾರೆ. ಅವರಿಗೆ ತಲುಪಿದ ಖಾಲಿ ಬಾಕ್ಸ್​ನ ಚಿತ್ರಗಳನ್ನೂ ಸಹ ಅವರು ಟ್ವಿಟರ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಅವರ ಟ್ವೀಟ್​ಗೆ ಫ್ಲಿಪ್ ಕಾರ್ಟ್ ಪ್ರತಿಕ್ರಿಯಿಸಿ, ಕ್ಷಮಿಸಿ, ನಿಮ್ಮ ಕಾಳಜಿಯನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ. ನಿಮಗೆ ಸಹಾಯ ಮಾಡುತ್ತೇವೆ. ದಯವಿಟ್ಟು ನಿಮ್ಮ ಆರ್ಡರ್ ಐಡಿಯನ್ನು ನಮ್ಮೊಂದಿಗೆ ಹಂಚಿಕೊಳ್ಳಿ ಇದರಿಂದ ನಿಮಗೆ ಮತ್ತಷ್ಟು ಸಹಾಯ ಮಾಡುತ್ತೇವೆ ಎಂದು ಹೇಳಿದೆ.

ಅನೇಕರು ಈ ರೀತಿಯ ಅನುಭವಗಳನ್ನು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಕೆಲವರು ತಮಾಷೆ ಮಾಡಿದ್ದಾರೆ. ಈ ವಾರದಲ್ಲಿ ಇಂಥಹುದೇ ಮತ್ತೊಂದು ಪ್ರಕರಣ ಬಯಲಾಗಿತ್ತು. ರಿಯಾಯಿತಿಯಲ್ಲಿ ಆಪಲ್ ಐಫೋನ್ 12 ಅನ್ನು ಆರ್ಡರ್ ಮಾಡಿದ್ದ ಗ್ರಾಹಕರೋರ್ವರಿಗೆ ನಿರ್ಮಾ ಸೋಪ್ ಬಂದಿತ್ತು. ಐಫೋನ್ ಇರುತ್ತದೆ ಎಂದು ಖಷಿಯಿಂದ ಬಾಕ್ಸ್ ಓಪನ್​ ಮಾಡಿದ ಗ್ರಾಹಕರು ಅದರಲ್ಲಿ ನಿರ್ಮಾ ಸೋಪ್ ನೋಡಿ ಶಾಕ್ ಆಗಿದ್ದರು. ಈ ರೀತಿ ನಡೆದಿದೆ ಎಂಬುದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಇದನ್ನೂ ಓದಿ:

Shocking News: ಫ್ಲಿಪ್ ​ಕಾರ್ಟ್​ನಲ್ಲಿ ಆರ್ಡರ್ ಮಾಡಿದ್ದು 53,000 ರೂ. Apple iPhone 12 ಫೋನ್​; ಕೈಗೆ ಸಿಕ್ಕಿದ್ದು ಮಾತ್ರ ನಿರ್ಮಾ ಸೋಪ್!

Viral News: ಬರೋಬ್ಬರಿ 2,700 ವರ್ಷಗಳ ಹಿಂದಿನ ಐಷಾರಾಮಿ ಟಾಯ್ಲೆಟ್ ಪತ್ತೆ; ಏನಿದರ ವಿಶೇಷತೆ?

Follow us on

Related Stories

Most Read Stories

Click on your DTH Provider to Add TV9 Kannada