Shocking Video: ಡಾಬಾದಲ್ಲಿ ಎಣ್ಣೆ, ನೀರಿನ ಬದಲಿಗೆ ಉಗುಳುತ್ತ ತಂದೂರಿ ರೋಟಿ ತಯಾರಿಸುತ್ತಿದ್ದ ಕೆಲಸಗಾರ ಅರೆಸ್ಟ್!
Viral Video: ರಸ್ತೆ ಬದಿಯ ಡಾಬಾದಲ್ಲಿ ಓರ್ವ ತಂದೂರಿ ರೋಟಿಯನ್ನು ತಯಾರಿಸುತ್ತಿದ್ದಾನೆ. ಇತರರು ಸಹ ಆತನೊಂದಿಗೆ ಕೆಲಸ ಮಾಡುತ್ತಿದ್ದಾರೆ. ವ್ಯಕ್ತಿ ಬಂಡಿಯ ಮೇಲೆ ಎಣ್ಣೆ ಅಥವಾ ನೀರಿನ ಬದಲಿಗೆ ಉಗುಳುತ್ತಿರುವುದನ್ನು ಕಾಣಬಹುದು.
ಡಾಬಾದಲ್ಲಿ ತಂದೂರಿ ರೋಟಿ ಮೇಲೆ ಉಗುಳುತ್ತಿರುವ ಕೆಲಸಗಾರನ ವಿಡಿಯೋ ಇದೀಗ ವೈರಲ್ ಆಗಿದೆ. ದೃಶ್ಯವನ್ನು ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ರಸ್ತೆ ಬದಿಯ ಡಾಬಾವೊಂದರಲ್ಲಿ ಸೆರೆ ಹಿಡಿಯಲಾಗಿದೆ. ಈ ಆಘಾತಕಾರಿ ವಿಡಿಯೋ ಎಲ್ಲರನ್ನೂ ಬೆರಗುಗೊಳಿಸಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂಬ ಮಾಹಿತಿ ವರದಿಗಳಿಂದ ತಿಳಿದು ಬಂದಿದೆ. ಮೊಬೈಲ್ನಲ್ಲಿ ಸೆರೆ ಹಿಡಿಯಲಾದ ವಿಡಿಯೋ ಇದೀಗ ವೈರಲ್ ಆಗಿದ್ದು, ರೋಟಿ ತಯಾರಿಸುತ್ತಲೇ ವ್ಯಕ್ತಿ ಉಗುಳುತ್ತಿರುವುದು ಸ್ಪಷ್ಟವಾಗಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ರಸ್ತೆ ಬದಿಯ ಡಾಬಾದಲ್ಲಿ ಓರ್ವ ತಂದೂರಿ ರೋಟಿಯನ್ನು ತಯಾರಿಸುತ್ತಿದ್ದಾನೆ. ಇತರರು ಸಹ ಆತನೊಂದಿಗೆ ಕೆಲಸ ಮಾಡುತ್ತಿದ್ದಾರೆ. ವ್ಯಕ್ತಿ ಬಂಡಿಯ ಮೇಲೆ ಎಣ್ಣೆ ಅಥವಾ ನೀರಿನ ಬದಲಿಗೆ ಉಗುಳುತ್ತಿರುವುದನ್ನು ಕಾಣಬಹುದು.
गाजियाबाद के एक चिकन पॉइंट का वीडियो सामने आया है, जिसमें एक शख्स थूक लगाकर रोटी बनाता दिख रहा है. pic.twitter.com/utDi9Jh9F8
— Anubhav Veer Shakya (@AnubhavVeer) October 17, 2021
ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು ಶೀಘ್ರದಲ್ಲಿಯೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಸ್ಥಳೀಯ ಪೊಲೀಸರು ಕ್ರಮಕ್ಕೆ ಮುಂದಾಗಿದ್ದು, ತಮೀಜುದ್ದೀನ್ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಡಾಬಾದ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ ಎಂಬ ಮಾಹಿತಿ ವರದಿಗಳಿಂದ ತಿಳಿದು ಬಂದಿದೆ.
ಇಂತಹ ವಿಡಿಯೋ ವೈರಲ್ ಆಗುತ್ತಿರುವುದು ಇದೇ ಮೊದಲಲ್ಲ. ಇತ್ತೀಚಿನ ದಿನಗಳಲ್ಲಿ ಹಲವಾರು ಇಂತಹ ವಿಡಿಯೋಗಳು ವೈರಲ್ ಆಗುತ್ತಿವೆ. ಹಲವು ರೆಸ್ಟೋರೆಂಟ್ಗಳಲ್ಲಿ ರೊಟ್ಟಿಗಳನ್ನು ತಯಾರಿಸುವಾಗ ಕೆಲಸಗಾರರು ಉಗುಳುತ್ತಿರುವ ದೃಶ್ಯಗಳೂ ಸಹ ವೈರಲ್ ಆಗಿದ್ದವು.
ಇದನ್ನೂ ಓದಿ:
Viral Video: ತಲೆಯ ಮೇಲೆ 750 ಮೊಟ್ಟೆಗಳನ್ನು ಬ್ಯಾಲೆನ್ಸ್ ಮಾಡಿದ ವ್ಯಕ್ತಿ; ಗಿನ್ನೆಸ್ ದಾಖಲೆ