ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಅದೆಷ್ಟೋ ವಿಡಿಯೋಗಳಲ್ಲಿ ಕೆಲವು ತಮಾಷೆಯಾಗಿದ್ದರೆ, ಇನ್ನು ಕೆಲವು ಎಚ್ಚರಿಕೆ ಸಂದೇಶವನ್ನು ಸಾರುತ್ತವೆ. ಅವುಗಳಲ್ಲಿ ಕೆಲವು ಹೃದಯ ಗೆಲ್ಲುವಂತಹ ದೃಶ್ಯಗಳಾಗಿರುತ್ತವೆ. ಇದೀಗ ನೆಟ್ಟಿಗರ ಮನ ಗೆದ್ದ ವಿಡಿಯೋ ಕೂಡಾ ಅಂಥದ್ದೇ! ಜನರನ್ನು ಪ್ರೇರೇಪಿಸುವಂತಹ ದೃಶ್ಯ ಇದಾಗಿದ್ದು, ರೈಲಿಗೆ ಸಿಕ್ಕಿ ಪ್ರಾಣ ಕಳೆದುಕೊಳ್ಳುತ್ತಿದ್ದ ಮುದ್ದಾದ ಬೆಕ್ಕಿನ ಮರಿಯನ್ನು ರಕ್ಷಿಸಲಾಗಿದೆ. ಎಟಿಎಂ ಸಿಬ್ಬಂದಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಓರ್ವರು ಬೆಕ್ಕಿನ ಮರಿಯನ್ನು ಪ್ರಾಣಾಪಾಯದಿಂದ ರಕ್ಷಿಸಿದ್ದಾರೆ. ಈ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.
ವಿಡಿಯೋವನ್ನು ಇನ್ಸ್ಟಾಗ್ರಾಂನ ಗುಡ್ ನ್ಯೂಸ್ ಮೂವ್ಮೆಂಟ್ ಎಂಬ ಖಾತೆಯಿಂದ ಹಂಚಿಕೊಳ್ಳಲಾಗಿದೆ. ಜನರ ಒಳ್ಳೆಯ ಕಾರ್ಯಗಳನ್ನು ತೋರಿಸುವ ವಿಡಿಯೋಗಳು ಬಹುಬೇಗ ಹೃದಯಗೆಲ್ಲುವುದಂತೂ ಸತ್ಯ. ಅದೇ ರೀತಿ ಈ ದೃಶ್ಯ ಕೂಡಾ ಸಾಮಾಜಿಕ ಬಳಕೆದಾರರ ಹೃದಯ ಗೆದ್ದಿದೆ. ಒಂದು ದಿನದ ಹಿಂದೆ ವಿಡಿಯೋ ಪೋಸ್ಟ್ ಮಾಡಲಾಗಿದ್ದು, ಜನರು ಅದ್ಭುತ ಕಾಮೆಂಟ್ಗಳನ್ನು ಮಾಡುವ ಮೂಲಕ ತಮ್ಮ ಅಭಿಪ್ರಾಯಗಳನ್ನು ತಿಳಿಸುತ್ತಿದ್ದಾರೆ.
View this post on Instagram
ಘಟನೆ ನ್ಯೂಯಾರ್ಕ್ನಲ್ಲಿ ನಡೆದಿದೆ. ವ್ಯಕ್ತಿ ಬೆಕ್ಕನ್ನು ರಕ್ಷಿಸುತ್ತಿರುವುದನ್ನು ವಿಡಿಯೋದಲ್ಲಿ ನೊಡಬಹುದು. ವಿಡಿಯೋ ಹಂಚಿಕೊಂಡಾಗಿನಿಂದ 3,30,000 ಬಾರಿ ವಿಡಿಯೋ ವೀಕ್ಷಣೆಯಾಗಿದೆ. ವಿಡಿಯೋ ಅದ್ಭುತವಾಗಿದೆ ಎಂದು ಕೆಲವರು ಹೇಳಿದ್ದಾರೆ. ಹೃದಯವಂತ ವ್ಯಕ್ತಿ ಎಂದು ಮತ್ತೋರ್ವರು ಹೇಳಿದ್ದಾರೆ. ಸಹಾಯ ಮಾಡಿದ್ದಕ್ಕಾಗಿ ಧನ್ಯವಾದಗಳು ಎಂದು ಕೆಲವರು ಕೃತಜ್ಞತೆ ತಿಳಿಸಿದ್ದಾರೆ.
ಇದನ್ನೂ ಓದಿ:
Viral Video: ಮೊದಲ ಬಾರಿ ವಿಮಾನ ಹತ್ತಿದ ಮಗಳಿಗೆ ಸರ್ಪ್ರೈಸ್ ಕೊಟ್ಟ ಅಪ್ಪ; ಈ ವಿಡಿಯೋವನ್ನು ಮಿಸ್ ಮಾಡಲೇಬೇಡಿ!
Viral Video: ಚುರುಕಾದ ಶ್ವಾನದ ವಿಡಿಯೋ ಹಂಚಿಕೊಂಡು ಬದುಕಿನ ಪಾಠ ಹೇಳಿದ ಆನಂದ್ ಮಹೀಂದ್ರಾ; ವಿಡಿಯೋ ನೋಡಿ