ಸೌರ ಶಕ್ತಿ ಬಳಸಿ ಇಸ್ತ್ರಿ ಮಾಡುವ ತಂತ್ರಜ್ಞಾನ ಅಭಿವೃದ್ಧಿಪಡಿಸಿದ ತಮಿಳುನಾಡಿನ ಬಾಲಕಿ; ಪ್ರತಿಷ್ಠಿತ ‘ಇಕೋ ಆಸ್ಕರ್’ಗೆ ನಾಮ ನಿರ್ದೇಶನ
ಮನಿಷಾ, ಸೌರಶಕ್ತಿಯಿಂದ ಇಸ್ಟ್ರಿ ಮಾಡುವ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿದ್ದಾಳೆ. ತಯಾರಿಸಿದ ಸಾಧನದ ಮೇಲ್ಭಾಗದಲ್ಲಿ ಚಾರ್ಜಿಂಗ್ ವ್ಯವಸ್ಥೆ ಕೂಡಾ ಇದೆ. ವರ್ಷಪೂರ್ತಿ ಸೂರ್ಯನ ಬೆಳಕು ಇರುವ ಪ್ರದೇಶಗಳಲ್ಲಿ ಸಾಗಿಸುವ ಗುರಿಯನ್ನು ಮನಿಷಾ ಹೊಂದಿದ್ದಾಳೆ.
ತಮಿಳುನಾಡಿನ 14 ವರ್ಷದ ವಿನಿಷಾ ಉಮಾಶಂಕರ್ ಈ ವರ್ಷ ಅರ್ಥ್ ಶಾಟ್ ಪ್ರಶಸ್ತಿಗೆ ಸ್ಪರ್ಧಿಸಿದ್ದಾಳೆ. 2019ರಲ್ಲಿ ಆರಂಭಗೊಂಡ ‘ಇಕೋ ಆಸ್ಕರ್’ಅನ್ನು, ಕೆಳಮಟ್ಟದ ಪರಿಸರ ವ್ಯವಸ್ಥೆಯು ಹೆಚ್ಚು ಪರಿಣಾಮಕಾರಿಯಾಗಿ ಸುಧಾರಿಸುವ ಹಾದಿಯಲ್ಲಿ ಸಾಗಲು ಸಹಾಯ ಮಾಡುವ ಉದ್ದೇಶ ಹೊಂದಿರುವ ಯೋಜನೆಯಲ್ಲಿ ಆಯ್ಕೆಯಾದವರಿಗೆ ನೀಡಲಾಗುತ್ತದೆ. ‘ಕ್ಲೀನ್ ಅವರ್ ಏರ್’ (ಗಾಳಿಯನ್ನು ಸ್ವಚ್ಛಗೊಳಿಸಿ) ಎಂಬ ವಿಭಾಗದಲ್ಲಿ ತಮಿಳುನಾಡಿನ ತಿರುವಣ್ಣಾಮಲೈ ಮೂಲದ ಮನಿಶಾ ಉಮಾಶಂಕರ್ ಫೈನಲಿಸ್ಟ್ ಆಗಿ ಆಯ್ಕೆಯಾಗಿದ್ದಾಳೆ.
ಶಾಲೆಗೆ ಹೋಗುವ ಸಮಯದಲ್ಲಿ ಮನಿಷಾ ಇದ್ದಿಲು ಇಸ್ತ್ರಿ ಮಾಡುವುದನ್ನು ನೋಡುತ್ತಿದ್ದಳು. ಇದ್ದಿಲಿನಿಂದ ಪರಿಸರಕ್ಕೆ ಏನೆಲ್ಲಾ ಪರಿಣಾಮಗಳು ಉಂಟಾಗಬಹುದು ಎಂದು ತಿಳಿಯಲು ಬಯಸಿದಳು. ಇದರ ಹೊಗೆಯಿಂದ ಶ್ವಾಸಕೋಶ ಹೇಗೆ ಬಾಧಿತವಾಗುತ್ತದೆ ಎಂಬುದನ್ನು ತಿಳಿದಳು. ಪ್ರತೀ ವರ್ಷ ಇದ್ದಿಲು ತಯಾರಿಸಲು ಹೆಚ್ಚಿನ ಸಂಖ್ಯೆಯ ಮರಗಳನ್ನು ಕತ್ತರಿಸಲಾಗುತ್ತದೆ ಇದನ್ನು ತಿಳಿದ ಮನಿಷಾ ಆಶ್ಚರ್ಯಚಕಿತಳಾದಳು ಎಂದು ಅರ್ಥ್ ಶಾಟ್ ಪ್ರಶಸ್ತಿಯ ವೆಬ್ಸೈಟ್ನಲ್ಲಿ ತಿಳಿಸಲಾಗಿದೆ.
ಮನಿಷಾ, ಸೌರಶಕ್ತಿಯಿಂದ ಇಸ್ಟ್ರಿ ಮಾಡುವ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿದ್ದಾಳೆ. ಇದು ಸೂರ್ಯನ ಬೆಳಕಿನಲ್ಲಿ ಆರು ಗಂಟೆಗಳ ಕಾಲ ಓಡುತ್ತದೆ. ತಯಾರಿಸಿದ ಸಾಧನದ ಮೇಲ್ಭಾಗದಲ್ಲಿ ಚಾರ್ಜಿಂಗ್ ವ್ಯವಸ್ಥೆ ಕೂಡಾ ಇದೆ. ಜತೆಗೆ ಸುಸ್ಥಿರ ಅಭಿವೃದ್ದಿಯ ಗುರಿಗಳನ್ನು ಹೊಂದಿರುವ ಒಂದು ಯೋಜನೆಯಾಗಿದೆ. ಇದನ್ನು ಸರಿಯಾದ ಬೆಲೆಗೆ ಮಾರಾಟ ಮಾಡಲು ಮತ್ತು ಏಷ್ಯಾ, ಅಫ್ರಿಕಾ ಮತ್ತು ವರ್ಷಪೂರ್ತಿ ಸೂರ್ಯನ ಬೆಳಕು ಇರುವ ಪ್ರದೇಶಗಳಲ್ಲಿ ಸಾಗಿಸುವ ಗುರಿಯನ್ನು ಮನಿಷಾ ಹೊಂದಿದ್ದಾಳೆ.
ದೆಹಲಿ ಮೂಲದ ಉದ್ಯಮಿ ಮೋಹನ್ ಕೂಡಾ ಇದೇ ವಿಭಾಗದಲ್ಲಿ ಆಯ್ಕೆಯಾಗಿದ್ದಾರೆ. ಅವರ ಕಲ್ಪನೆ, ಉತ್ತರ ಪ್ರದೇಶಗಳಲ್ಲಿ ಕೃಷಿಯಿಂದ ಉಂಟಾಗುವ ಮಾಲಿನ್ಯವನ್ನು ಕಡಿಮೆ ಮಾಡುವ ಪ್ರಯತ್ನದ ಯೋಜನೆಯಾಗಿದೆ. ಸಾಧನವನ್ನು ಟಕಾಚಾರ್ ಎಂದು ಕರೆಯಲಾಗುತ್ತದೆ.
ಟಕಾಚಾರ್ ಒಂದು ಸಣ್ಣ ಸಾಧನ. ಅದನ್ನು ಟ್ರ್ಯಾಕ್ಟರ್ಗಳಿಗೆ ಜೋಡಿಸಲಾಗುತ್ತದೆ. ಇದರಿಂದ ಬೆಳೆ ತ್ಯಾಜ್ಯಗಳನ್ನು ರಸಗೊಬ್ಬರ ಮತ್ತು ಇಂಧನದಂತಹ ಜೈವಿಕ ಉತ್ಪನ್ನಗಳಾಗಿ ಪರಿವರ್ತಿಸಲಾಗುತ್ತದೆ. ದೆಹಲಿ ಮತ್ತು ಹತ್ತಿರ ಪ್ರದೇಶದಲ್ಲಿ ಮಾಲಿನ್ಯವನ್ನು ಕಡಿಮೆ ಮಾಡಲು ಸಹಾಯಕ ಯಂತ್ರವಾಗಿದೆ. ಅಕ್ಟೋಬರ್ 17ರಂದು ಲಂಡನ್ನಲ್ಲಿ ಪ್ರಿನ್ಸ್ ವಿಲಿಯಂ ಅವರ ಭಾಷಣದ ಬಳಿಕ ಪ್ರಶಸ್ತಿ ಪ್ರದಾನ ಸಮಾರಂಭವು ನಡೆಯಲಿದೆ.
ಇದನ್ನೂ ಓದಿ:
ಈ 2 ವರ್ಷದ ಬಾಲಕಿಯ ಸಾಧನೆ ನೀವೇ ಕೇಳಿರಿ…!
ವೇಟ್ಲಿಫ್ಟಿಂಗ್ ಮಾಡಿದ ಪುಟ್ಟ ಬಾಲಕಿ! ಮೀರಾಬಾಯಿ ಚಾನು ಅವರ ಪ್ರತಿಕ್ರಿಯೆ ಏನಿತ್ತು ನೋಡಿ
Published On - 2:37 pm, Thu, 14 October 21