Viral Video: ತಲೆಯ ಮೇಲೆ 750 ಮೊಟ್ಟೆಗಳನ್ನು ಬ್ಯಾಲೆನ್ಸ್​ ಮಾಡಿದ ವ್ಯಕ್ತಿ; ಗಿನ್ನೆಸ್ ದಾಖಲೆ

Guinness World Record: ಜಾರ್ಜ್ ಡಾ ಸಿಲ್ವಾ ಆಫ್ರಿಕಾದವರು. ಇವರು ಬರೋಬ್ಬರಿ 735 ಮೊಟ್ಟೆಗಳನ್ನು ತಲೆಯ ಮೇಲಿಟ್ಟು ಬ್ಯಾಲೆನ್ಸ್ ಮಾಡಿ ಗಿನ್ನೆಸ್ ವರ್ಲ್ಡ್ ದಾಖಲೆ ನಿರ್ಮಿಸಿದ್ದಾರೆ.

Viral Video: ತಲೆಯ ಮೇಲೆ 750 ಮೊಟ್ಟೆಗಳನ್ನು ಬ್ಯಾಲೆನ್ಸ್​ ಮಾಡಿದ ವ್ಯಕ್ತಿ; ಗಿನ್ನೆಸ್ ದಾಖಲೆ
ತಲೆಯ ಮೇಲೆ 750 ಮೊಟ್ಟೆಗಳನ್ನು ಬ್ಯಾಲೆನ್ಸ್​ ಮಾಡಿದ ವ್ಯಕ್ತಿ

ಪ್ರತಿಭಾವಂತರು ಅತ್ಯದ್ಭುತ ಕೌಶಲ್ಯಗಳನ್ನು ತೋರಿಸುತ್ತಾ ಜನರನ್ನು ಬೆರಗುಗೊಳಿಸುತ್ತಾರೆ. ತಮ್ಮ ಕ್ರಿಯಾಶೀಲತೆ ಮತ್ತು ಸೃಜನಶೀಲತೆಯಿಂದ ಅತ್ಯುತ್ತಮ ಸಾಧನೆಗಳನ್ನು ಮಾಡುತ್ತಾರೆ. ಕೇವಲ ಒಂದೆರಡು ಮೊಟ್ಟೆಗಳನ್ನು ತಲೆಯ ಮೇಲೆ ಇಟ್ಟುಕೊಳ್ಳಲು ಕಷ್ಟ! ಹಾಗಿರುವಾಗ ಇಲ್ಲೋರ್ವರು ಬರೋಬ್ಬರಿ 753 ಮೊಟ್ಟೆಗಳನ್ನು ತಮ್ಮ ತಲೆಯ ಮೇಲೆ ಇಟ್ಟು ಬ್ಯಾಲೆನ್ಸ್ ಮಾಡುವ ಮೂಲಕ ಗಿನ್ನೆಸ್ ದಾಖಲೆ ನಿರ್ಮಿಸಿದ್ದಾರೆ. ಗಿನ್ನೆಸ್ ವರ್ಲ್ಡ್ ರೆಕಾರ್ಡ್, ಇನ್​ಸ್ಟಾಗ್ರಾಂ ಪುಟದಲ್ಲಿ ವಿಡಿಯೋವನ್ನು ಹರಿಬಿಟ್ಟಿದೆ.

ಜಾರ್ಜ್ ಡಾ ಸಿಲ್ವಾ ಆಫ್ರಿಕಾದವರು. ಇವರು ಬರೋಬ್ಬರಿ 735 ಮೊಟ್ಟೆಗಳನ್ನು ತಲೆಯ ಮೇಲಿಟ್ಟು ಬ್ಯಾಲೆನ್ಸ್ ಮಾಡಿ ಗಿನ್ನೆಸ್ ವರ್ಲ್ಡ್ ದಾಖಲೆ ನಿರ್ಮಿಸಿದ್ದಾರೆ. ತುಂಬಾ ಮೊಟ್ಟೆಗಳನ್ನು ಒಂದೇ ಟೋಪಿಯ ಒಳಗೆ, ಒಟ್ಟು 735 ಮೊಟ್ಟೆಗಳನ್ನು ಬ್ಯಾಲೆನ್ಸ್ ಮಾಡಿದ ಜಾರ್ಜ್ ಡಾ ಸಿಲ್ವಾ ಎಂದು ಶೀರ್ಷಿಕೆ ನೀಡುವ ಮೂಲಕ ವಿಡಿಯೋ ಹರಿಬಿಡಲಾಗಿದೆ.

ಇವರು ಚೀನಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯಿಂದ ಜನಪ್ರಿಯತೆ ಪಡೆದುಕೊಂಡಿದ್ದಾರೆ. ತಮ್ಮ ಊರಿನಲ್ಲಿ ಎಗ್​ಮ್ಯಾನ್​ ಎಂದೇ ಪ್ರಸಿದ್ಧರಾಗಿರುವ ಇವರು ಅತ್ಯದ್ಭುತ ಪ್ರತಿಭೆಯನ್ನು ಪ್ರದರ್ಶಿಸುವ ಮೂಲಕ ಅನೇಕ ದೂರದರ್ಶನ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಈ ವಿಡಿಯೋ ಇದಿಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ಸುದ್ದಿಯಲ್ಲಿದೆ. ಜನರು ಸಾವ್ಲಾ ಅವರ ಕೌಶಲ್ಯವನ್ನು ನೋಡಿ ಬೆರಗಾಗಿದ್ದಾರೆ. ಕೆಲವರು ಎಮೋಜಿಗಳನ್ನು ಕಳುಹಿಸುವ ಮೂಲಕ ಅವರ ಪ್ರತಿಭೆಯನ್ನು ಮೆಚ್ಚಿಕೊಂಡಿದ್ದಾರೆ. ಮೊಟ್ಟೆಯನ್ನು ಒಡೆಯದೇ ಅದೇಗೆ ಅವರು ಕೆಳಗಿಳಿಸುತ್ತಾರೆ? ಎಂದು ಓರ್ವರು ಪ್ರಶ್ನಿಸಿದ್ದಾರೆ. ಒಟ್ಟು ತೂಕವೆಷ್ಟು? ಎಂದು ಮತ್ತೋರ್ವರು ಕೇಳಿದ್ದಾರೆ.

ಇದನ್ನೂ ಓದಿ:

Viral Video: ತಲೆ ಕೂದಲಿನಲ್ಲಿಯೇ ವಾಹನವನ್ನು ಎಳೆದು ತಂದ ಯುವತಿ! ಶಾಕಿಂಗ್ ವಿಡಿಯೋ ವೈರಲ್​

Viral Video: ಹೋಮ್​ವರ್ಕ್​ ಮಾಡಲು ಬಾಲಕನಿಗೆ ಸಹಾಯ ಮಾಡುತ್ತಿರುವ ಶ್ವಾನ; ಸ್ನೇಹಿತರಿಬ್ಬರ ಕ್ಯೂಟ್ ವಿಡಿಯೋ ವೈರಲ್

Read Full Article

Click on your DTH Provider to Add TV9 Kannada