Temple Tour: ನಂದಿ ಗಿರಿಧಾಮದ ಬಳಿ ಇದೆ ಐತಿಹಾಸಿಕ ಬಸವಣ್ಣ
ನಂದಿ ವಿಗ್ರಹ ಎದ್ದು ನಿಂತು ಗುಟುರು ಹಾಕಿದ್ರೆ ಆ ಕ್ಷಣವೇ ಕಲಿಯುಗದ ಅಂತ್ಯವಾಗುತ್ತದೆ ಅಂತ ವೀರಬ್ರಹ್ಮೇಂದ್ರ ಸ್ವಾಮೀಜಿಗಳು ಬರೆದಿರುವುದು ಈ ಬಸವಣ್ಣನ ಬಗ್ಗೆಯೇ ಎನ್ನುವ ಐತಿಹ್ಯ ಈ ದೇವಾಲಯಕ್ಕಿದೆ.
ಚಿಕ್ಕಬಳ್ಳಾಪುರ ಹಾಗೂ ದೊಡ್ಡಬಳ್ಳಾಪುರ ಅವಳಿ ನಗರಗಳಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಹಾಗೂ ನಂದಿಗಿರಿಧಾಮದ ರಸ್ತೆಯಲ್ಲಿ ಬಸವಣ್ಣನ ಆಲಯವಿದೆ. ಬೆಂಗಳೂರಿನ ದೊಡ್ಡ ಬಸವಣ್ಣ ದೇವಾಲಯದ ಬೃಹತ್ ನಂದಿಯನ್ನೂ ಮೀರಿಸುವಷ್ಟು ಎತ್ತರವಾಗಿದ್ದಾನೆ ಈ ಕಣಿವೆ ನಂದೀಶ್ವರ. ಇಲ್ಲಿರುವ ನಂದಿ ವಿಗ್ರಹ ಎದ್ದು ನಿಂತು ಗುಟುರು ಹಾಕಿದ್ರೆ ಆ ಕ್ಷಣವೇ ಕಲಿಯುಗದ ಅಂತ್ಯವಾಗುತ್ತದೆ ಅಂತ ವೀರಬ್ರಹ್ಮೇಂದ್ರ ಸ್ವಾಮೀಜಿಗಳು ಬರೆದಿರುವುದು ಈ ಬಸವಣ್ಣನ ಬಗ್ಗೆಯೇ ಎನ್ನುವ ಐತಿಹ್ಯ ಈ ದೇವಾಲಯಕ್ಕಿದೆ. ಈ ಮಾತಿಗೆ ಪೂರಕ ಎನ್ನುವ ಹಾಗೆ ವರ್ಷದಿಂದ ವರ್ಷಕ್ಕೆ ನಂದಿ ವಿಗ್ರಹ ಬೆಳೆಯುತ್ತಿದೆ. ಅದಕ್ಕಾಗಿಯೇ ನಂದಿ ವಿಗ್ರಹದ ನೆತ್ತಿಯ ಮೇಲೆ ಗಡಾರಿಯೊಂದನ್ನ ಹೊಡೆಯಲಾಗಿದೆ.
Latest Videos