AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Temple Tour: ಸುಬ್ರಹ್ಮಣ್ಯ ಸ್ವಾಮಿ ಮೂಲ ವಿಗ್ರಹ ಇರುವುದು ಇಲ್ಲೇನಾ?

Temple Tour: ಸುಬ್ರಹ್ಮಣ್ಯ ಸ್ವಾಮಿ ಮೂಲ ವಿಗ್ರಹ ಇರುವುದು ಇಲ್ಲೇನಾ?

TV9 Web
| Updated By: ಆಯೇಷಾ ಬಾನು|

Updated on: Oct 21, 2021 | 8:12 AM

Share

ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಶ್ರೀ ಪ್ರಸನ್ನ ಸುಬ್ರಹ್ಮಣ್ಯ ದೇಗುಲ ದಕ್ಷಿಣ ಕರ್ನಾಟಕದ ಜನರ ಪಾಲಿಗೆ ಕುಕ್ಕೇ ಸುಬ್ರಹ್ಮಣ್ಯ ದೇಗುಲದಷ್ಟೇ ಪ್ರಸಿದ್ಧಿ ಪಡೆದಿದೆ.

ನಾಡಿನಲ್ಲಿ ಸಾಕಷ್ಟು ದೇವ ಮಂದಿರಗಳಿಗೆ ಯುಗ ಯುಗಾಂತರದ ಹಿನ್ನೆಲೆ ಇರುತ್ತದೆ. ಅಂತಾ ದೇಗುಲಗಳಲ್ಲಿ ಹಾಸನದಲ್ಲಿರುವ ಪ್ರಸನ್ನ ಸುಬ್ರಹ್ಮಣ್ಯ ಸ್ವಾಮಿ ದೇವಾಲಯವೂ ಒಂದು. ಹಾಸನದ ಅರಕಲಗೂಡು ತಾಲೂಕಿನಲ್ಲಿರುವ ಈ ದೇವಾಲಯ ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಜತೆಗೂ ನಂಟು ಹೊಂದಿದೆ. ಹಾಸನ ಜಿಲ್ಲೆ ಹಲವು ಐತಿಹಾಸಿಕ ದೇಗುಲಗಳನ್ನು ಹೊಂದಿರುವ, ಇತಿಹಾಸ ಪ್ರಸಿದ್ಧ, ಸುಂದರ ವಾಸ್ತುಶಿಲ್ಪಗಳ ನೆಲೆಬೀಡು. ಇಲ್ಲಿನ ಧಾರ್ಮಿಕ ಶ್ರದ್ದಾಕೇಂದ್ರಗಳು ಭಕ್ತರನ್ನ ಸೆಳೆಯುತ್ತವೆ. ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಶ್ರೀ ಪ್ರಸನ್ನ ಸುಬ್ರಹ್ಮಣ್ಯ ದೇಗುಲ ದಕ್ಷಿಣ ಕರ್ನಾಟಕದ ಜನರ ಪಾಲಿಗೆ ಕುಕ್ಕೇ ಸುಬ್ರಹ್ಮಣ್ಯ ದೇಗುಲದಷ್ಟೇ ಪ್ರಸಿದ್ಧಿ ಪಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದ ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠದ ಅಧೀನದಲ್ಲಿರುವ ಈ ದೇಗಲದಲ್ಲಿರುವ ಸುಬ್ರಹ್ಮಣ್ಯನ ವಿಗ್ರಹವೇ ಮೂಲ ವಿಗ್ರಹ ಎಂದು ಹೇಳಲಾಗುತ್ತಿದೆ.