‘ಇಲ್ಲಿ ಕೂರಲು ಭಯವಾಗುತ್ತಿದೆ’; ಡಿವೋರ್ಸ್ ಬಳಿಕ ಮೊದಲ ಬಾರಿಗೆ ಸ್ಕ್ರೀನ್ ಮೇಲೆ ಕಾಣಿಸಿಕೊಂಡ ಸಮಂತಾ ಮಾತು

Naga Chaithanya | Samantha: ಡಿವೋರ್ಸ್ ಘೋಷಣೆಯ ಬಳಿಕ ನಟಿ ಸಮಂತಾ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಅಲ್ಲಿ ಅವರು ತನಗೆ ಭಯವಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ. ಸಮಂತಾಗೆ ಭಯವೇಕೆ? ಏನಿದು ಸಮಾಚಾರ? ಮುಂದೆ ಓದಿ.

‘ಇಲ್ಲಿ ಕೂರಲು ಭಯವಾಗುತ್ತಿದೆ’; ಡಿವೋರ್ಸ್ ಬಳಿಕ ಮೊದಲ ಬಾರಿಗೆ ಸ್ಕ್ರೀನ್ ಮೇಲೆ ಕಾಣಿಸಿಕೊಂಡ ಸಮಂತಾ ಮಾತು
ಸಮಂತಾ, ಜ್ಯೂ.ಎನ್​ಟಿಆರ್

ಟಾಲಿವುಡ್​ನ ಖ್ಯಾತ ತಾರಾ ಜೋಡಿಯಾಗಿದ್ದ ಸಮಂಥಾ ಹಾಗೂ ನಾಗ ಚೈತನ್ಯ ಜೋಡಿ ಇತ್ತೀಚೆಗಷ್ಟೇ ಬೇರೆಯಾಗುವುದಾಗಿ ತಿಳಿಸಿದ್ದರು. ಈ ತಾರಾ ಜೋಡಿ ಬೇರೆಯಾಗಲು ಇದೇ ಕಾರಣವೆಂದು ಹಲವು ವಿಚಾರಗಳು ಓಡಾಡಿದ್ದವು. ಆದರೆ ಸಮಂತಾ ಆಗಲಿ ಅಥವಾ ನಾಗ ಚೈತನ್ಯ ಆಗಲಿ ಅದರ ಕುರಿತು ಪ್ರತಿಕ್ರಿಯೆ ನೀಡದೇ ಅಂತರ ಕಾಯ್ದುಕೊಂಡಿದ್ದರು. ಜೊತೆಗೆ ತಾವೀರ್ವರೂ ಪರಸ್ಪರ ಗೌರವದಿಂದ ಬೇರೆಯಾಗುತ್ತಿರುವುದಾಗಿ ಹಾಗೂ ಮುಂದೆ ಸ್ನೇಹಿತರಾಗಿ ಇರುತ್ತೇವೆಂದೂ ತಿಳಿಸಿದ್ದರು. ಆ ನಂತರ ಸಮಂತಾ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಇತ್ತೀಚೆಗೆ ಅವರು ಶೋ ಒಂದರಲ್ಲಿ ಕಾಣಿಸಿಕೊಂಡಿದ್ದು, ಸಂತಸದಿಂದ ಭಾಗವಹಿಸಿದ್ದಾರೆ.

ಟಾಲಿವುಡ್​ನ ಖ್ಯಾತ ನಟ ಜ್ಯೂನಿಯರ್ ಎನ್​ಟಿಆರ್​ ನಡೆಸಿಕೊಡುವ ಕೌನ್ ಬನೇಗಾ ಕರೋಡ್​ಪತಿಯ ತೆಲುಗು ಅವತರಣಿಕೆಯಾದ ‘ಎವರು ಮೀಲೊ ಕೋಟೀಶ್ವರಾಲು’ದಲ್ಲಿ ಸಮಂತಾ ಭಾಗವಹಿಸಿದ್ದಾರೆ. ವಾಹಿನಿಯು ಅದರ ಪ್ರೋಮೋಗಳನ್ನು ಹಂಚಿಕೊಂಡಿದ್ದು, ಅದರಲ್ಲಿ ಹಾಟ್​ಸೀಟ್​ನಲ್ಲಿ ಕುಳಿತ ಸಮಂತಾ, ಅಲ್ಲಿ ಕೂರಲು ತನಗೆ ಭಯವಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ. ಆಗ ಜ್ಯೂ.ಎನ್​ಟಿಆರ್ ಭಯವಾಗಲೇ ಬೇಕು. ಕಾರಣ ಅದು ಹಾಟ್​ಸೀಟ್ ಎಂದು ತಮಾಷೆ ಮಾಡಿದ್ದಾರೆ. ಈ ಮೊದಲು ಇದೇ ಶೋವನ್ನು ಸಮಂತಾ ಮಾಜಿ ಮಾವ ನಾಗಾರ್ಜುನ ನಡೆಸಿಕೊಡುತ್ತಿದ್ದರು. ಪ್ರಸ್ತುತ ಜ್ಯೂ.ಎನ್​ಟಿಆರ್ ನಡೆಸಿಕೊಡುತ್ತಿದ್ದಾರೆ. ಸಮಂತಾ ಭಾಗವಹಿಸಿದ್ದ ಸಂಚಿಕೆ ಅಕ್ಟೋಬರ್ 14ರಂದು ಪ್ರಸಾರವಾಗಲಿದೆ.

ವಾಹಿನಿ ಹಂಚಿಕೊಂಡ ಪ್ರೋಮೋ ಇಲ್ಲಿದೆ:

 

View this post on Instagram

 

A post shared by Gemini TV (@geminitv)

ನಟ ನಾಗ ಚೈತನ್ಯ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಅವರು ಪೂಜಾ ಹೆಗ್ಡೆ ಹಾಗೂ ಅಖಿಲ್ ಅಕ್ಕಿನೇನಿ ನಟನೆಯಲ್ಲಿ ಮೂಡಿಬರುತ್ತಿರುವ ‘ಮೋಸ್ಟ್ ಎಲಿಜಿಬಲ್ ಬ್ಯಾಚುಲರ್’ ಚಿತ್ರದ ಈವೆಂಟ್ ಒಂದರಲ್ಲಿ ಭಾಗವಹಿಸಿದ್ದರು. ಆ ಮೂಲಕ ಅವರು ಸಮಂತಾರೊಂದಿಗೆ ಬೇರೆಯಾಗುವುದಾಗಿ ಘೋಷಿಸಿದ ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಅಕ್ಟೋಬರ್ 2ರಂದು ಸಮಂತಾ ಹಾಗೂ ನಾಗ ಚೈತನ್ಯ ಬೇರೆಯಾಗುವುದಾಗಿ ಘೋಷಿಸಿದ್ದರು. ಪ್ರೀತಿಸಿ 2017ರಲ್ಲಿ ಮದುವೆಯಾಗಿದ್ದ ಈ ಜೋಡಿ, ಪರಸ್ಪರ ಒಪ್ಪಿಗೆಯಿಂದ ಬೇರೆಯಾಗುತ್ತಿರುವುದಾಗಿ ತಿಳಿಸಿದ್ದರು.

ಇದನ್ನೂ ಓದಿ:

ಪ್ಯಾನ್ ಇಂಡಿಯಾ ಚಿತ್ರಗಳಿಂದ ಏರುತ್ತಲೇ ಇದೆ ಟಾಲಿವುಡ್ ನಟರ ಸಂಭಾವನೆ; ಪ್ರಭಾಸ್, ರಾಮ್ ಚರಣ್ ಪಡೆಯೋದು ಇಷ್ಟೊಂದಾ?

ಅಪ್ಪ ಅಶ್ಲೀಲ ಸಿನಿಮಾ ತೋರಿಸುತ್ತಿದ್ದರು: ಅಪ್ಪ ಸೇರಿದಂತೆ 28 ಮಂದಿ ವಿರುದ್ಧ ಅತ್ಯಾಚಾರ ಆರೋಪ ಹೊರಿಸಿದ ಹದಿಹರೆಯದ ಸಂತ್ರಸ್ತೆ

ಬೀದರ್: 1 ಎಕರೆಯಲ್ಲಿ ಭರಪೂರ ಬೆಳೆ; ತರಕಾರಿ ಬೆಳೆದು ನಷ್ಟ ಅನುಭವಿಸಿದ ರೈತನ ಕೈ ಹಿಡಿಯಿತು ಡ್ರ್ಯಾಗನ್ ಫ್ರೂಟ್

Read Full Article

Click on your DTH Provider to Add TV9 Kannada