ರೊಮ್ಯಾಂಟಿಕ್​ ಡ್ಯಾನ್ಸ್​ ಮಾಡಿದ ದಿವ್ಯಾ ಉರುಡುಗ ಮತ್ತು ಅರವಿಂದ್ ಕೆ.ಪಿ.​; ಇಲ್ಲಿದೆ ವಿಡಿಯೋ

ಬಿಗ್​ ಬಾಸ್​ ಮುಗಿದ ನಂತರ ಅರವಿಂದ್​ ಹಾಗೂ ದಿವ್ಯಾ ಎಲ್ಲಿಯೂ ಒಟ್ಟಾಗಿ ಕಾಣಿಸಿಕೊಂಡಿಲ್ಲ. ಯಾವುದೇ ವಾಹಿನಿಗೆ ಅವರು ಒಟ್ಟಾಗಿ ಸಂದರ್ಶನ ನೀಡಿಲ್ಲ. ಈಗ ಇವರು ಕಲರ್ಸ್​ ಕನ್ನಡ ವೇದಿಕೆಯನ್ನು ಒಟ್ಟಾಗಿ ಏರಿದ್ದಾರೆ.

ರೊಮ್ಯಾಂಟಿಕ್​ ಡ್ಯಾನ್ಸ್​ ಮಾಡಿದ ದಿವ್ಯಾ ಉರುಡುಗ ಮತ್ತು ಅರವಿಂದ್ ಕೆ.ಪಿ.​; ಇಲ್ಲಿದೆ ವಿಡಿಯೋ
ದಿವ್ಯಾ-ಅರವಿಂದ್​ ಕೆಪಿ

ಅರವಿಂದ್​ ಕೆ.ಪಿ. ಮತ್ತು ದಿವ್ಯಾ ಉರುಡುಗ ಈಗ ಸೆಲೆಬ್ರಿಟಿ ಕಪಲ್​ ಆಗಿದ್ದಾರೆ. ಇವರ ಬಗ್ಗೆ ಬರುವ ಅಪ್​ಡೇಟ್​ ತಿಳಿದುಕೊಳ್ಳೋಕೆ ಅಭಿಮಾನಿಗಳು ಕಾತುರರಾಗಿರುತ್ತಾರೆ. ಈ ಕಾರಣಕ್ಕೆ ಅವರ ಸೋಶಿಯಲ್​ ಮೀಡಿಯಾ ಹಿಂಬಾಲಕರ ಸಂಖ್ಯೆ ಹೆಚ್ಚಿದೆ. ಇವರನ್ನು ಅಭಿಮಾನಿಗಳು ಪ್ರೀತಿಯಿಂದ ಅರವಿಯಾ ಎಂದು ಕರೆಯುತ್ತಿದ್ದಾರೆ. ಈಗ ಇಬ್ಬರೂ ರೊಮ್ಯಾಂಟಿಕ್​ ಡ್ಯಾನ್ಸ್​ ಮಾಡಿದ್ದಾರೆ. ಇದು ಅಭಿಮಾನಿಗಳಿಗೆ ಖುಷಿ ನೀಡಿದೆ.

ಬಿಗ್​ ಬಾಸ್​ ಮುಗಿದ ನಂತರ ಅರವಿಂದ್​ ಹಾಗೂ ದಿವ್ಯಾ ಎಲ್ಲಿಯೂ ಒಟ್ಟಾಗಿ ಕಾಣಿಸಿಕೊಂಡಿಲ್ಲ. ಯಾವುದೇ ವಾಹಿನಿಗೆ ಅವರು ಒಟ್ಟಾಗಿ ಸಂದರ್ಶನ ನೀಡಿಲ್ಲ. ಈಗ ಇವರು ಕಲರ್ಸ್​ ಕನ್ನಡ ವೇದಿಕೆಯನ್ನು ಒಟ್ಟಾಗಿ ಏರಿದ್ದಾರೆ. ಅಲ್ಲಿ ಅದ್ಭುತವಾಗಿ ಅವರು ಡ್ಯಾನ್ಸ್​ ಮಾಡಿದ್ದಾರೆ. ಈ ಪ್ರೋಮೋವನ್ನು ಕಲರ್ಸ್​ ಕನ್ನಡ ವಾಹಿನಿ ಹಂಚಿಕೊಂಡಿದೆ.

‘ಅನುಬಂಧ’ ಅವಾರ್ಡ್ಸ್​ ಕಾರ್ಯಕ್ರಮ ಅಕ್ಟೋಬರ್ 15,16 ಮತ್ತು 17ರಂದು ಪ್ರಸಾರವಾಗಲಿದೆ. ಕಲರ್ಸ್​ ಕುಟುಂಬದ ಎಲ್ಲರೂ ಇದರಲ್ಲಿ ಭಾಗಿಯಾಗುತ್ತಿದ್ದಾರೆ. ಅರವಿಂದ್ ಹಾಗೂ ದಿವ್ಯಾ ಬಿಗ್​ ಬಾಸ್​ ಸೀಸನ್​ 8ರಲ್ಲಿ ಸ್ಪರ್ಧಿಯಾಗಿ ತೆರಳುವ ಮೂಲಕ ಕಲರ್ಸ್ ಕನ್ನಡದ ಭಾಗವಾಗಿದ್ದಾರೆ. ಹೀಗಾಗಿ, ಇವರು ಕೂಡ ಕಲರ್ಸ್​ ವಾಹಿನಿಯ ಅನುಬಂಧ ಅವಾರ್ಡ್ಸ್​ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

r

ಈ ಬಾರಿಯ ಅನುಬಂಧವನ್ನು ಅದ್ದೂರಿಯಾಗಿ ನಡೆಸಲಾಗಿದೆ. ಈಗಾಗಲೇ ಇದರ ಶೂಟಿಂಗ್​ ಪೂರ್ಣಗೊಂಡಿದೆ. ಅರವಿಂದ್ ಮತ್ತು ದಿವ್ಯಾ ಇಬ್ಬರೂ ‘ಯಾರೋ ನೀನು..’ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಅರವಿಂದ್ ಅವರು ವೇದಿಕೆಗೆ ತಮ್ಮ ಬೈಕ್​ ಮೇಲೆಯೇ ಬಂದಿದ್ದು ವಿಶೇಷವಾಗಿತ್ತು. ಇವರ ಡ್ಯಾನ್ಸ್​ ಪೂರ್ತಿಯಾಗಿ ನೋಡೋಕೆ ಅನುಬಂಧ ಕಾರ್ಯಕ್ರಮ ಪ್ರಸಾರವಾಗುವವರೆಗೆ ಕಾಯಬೇಕಿದೆ. ಇತ್ತೀಚೆಗೆ ಕಲರ್ಸ್​ ಕನ್ನಡ ವಾಹಿನಿ ‘ಅನುಬಂಧ’  ಮೇಕಿಂಗ್​ ವಿಡಿಯೋ ಪ್ರಸಾರ ಮಾಡಿತ್ತು. ಈ ವಿಡಿಯೋದಲ್ಲಿ ಅರವಿಂದ್ ಕೆ.ಪಿ. ವೇದಿಕೆ ಮೇಲೆ ಬೈಕ್​ನಲ್ಲಿಯೇ ಆಗಮಿಸುವುದಾಗಿ ತಿಳಿಸಿದ್ದರು.

ಕನ್ನಡ ಬಿಗ್​ ಬಾಸ್​ ಸೀಸನ್​ 8ರ ಫಿನಾಲೆ ಆಗಸ್ಟ್ 8ರಂದು ನಡೆದಿತ್ತು. ಮಂಜು ಪಾವಗಡ ಈ ಸೀಸನ್​ ವಿನ್ನರ್​ ಆಗಿ ಹೊರಹೊಮ್ಮಿದರು. ಅರವಿಂದ್ ಅವರು ಮೊದಲ ರನ್ನರ್​ ಅಪ್​ ಹಾಗೂ ದಿವ್ಯಾ ಉರುಡುಗ ಸೆಕೆಂಡ್​ ರನ್ನರ್​ ಅಪ್​ ಆಗಿದ್ದರು.

ಇದನ್ನೂ ಓದಿ: ‘ಮದುವೆ ಯಾವಾಗ’ ಎನ್ನುವ ಪ್ರಶ್ನೆಗೆ ದಿವ್ಯಾ ಉರುಡುಗ ಪಕ್ಕದಲ್ಲೇ ನಿಂತು ಉತ್ತರಿಸಿದ ಅರವಿಂದ್​ ಕೆಪಿ

ನನ್ನ ಮದುವೆ ಆಗಿಹೋಗಿದೆ ಅಂತ ಎಲ್ಲರೂ ಹೇಳ್ತಾ ಇದಾರೆ ಎಂದ ಅರವಿಂದ್​ ಕೆಪಿ; ದಿವ್ಯಾ ರಿಯಾಕ್ಷನ್​ ಹೇಗಿತ್ತು?

Read Full Article

Click on your DTH Provider to Add TV9 Kannada