AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shilpa Shetty: ಮತ್ಸ್ಯಕನ್ಯೆಯ ಅವತಾರದಲ್ಲಿ ಕಾಣಿಸಿಕೊಂಡ ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ; ಅಭಿಮಾನಿಗಳು ಹೇಳಿದ್ದೇನು?

Super Dancer 4: ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ ಸದ್ಯ ರಿಯಾಲಿಟಿ ಶೋ ಒಂದರ ನಿರ್ಣಾಯಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆ ಶೋನ ಫಿನಾಲೆಯಲ್ಲಿ ‘ಮತ್ಸ್ಯಕನ್ಯೆ’ಯ ಅವತಾರದಲ್ಲಿ ಶಿಲ್ಪಾ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಫಿದಾ ಆಗಿದ್ದಾರೆ.

Shilpa Shetty: ಮತ್ಸ್ಯಕನ್ಯೆಯ ಅವತಾರದಲ್ಲಿ ಕಾಣಿಸಿಕೊಂಡ ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ; ಅಭಿಮಾನಿಗಳು ಹೇಳಿದ್ದೇನು?
ನಟಿ ಶಿಲ್ಪಾ ಶೆಟ್ಟಿ
TV9 Web
| Edited By: |

Updated on:Oct 12, 2021 | 4:40 PM

Share

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಪತಿ ರಾಜ್ ಕುಂದ್ರಾ ಬಂಧನದ ಸಂದರ್ಭದಲ್ಲಿ ಅವರು ಕೆಲ ಕಾಲ ಮೌನ ವಹಿಸಿದ್ದನ್ನು ಬಿಟ್ಟರೆ, ಆ ಆಘಾತದಿಂದ ಹೊರಬಂದ ನಂತರ ಅವರು ಮತ್ತೆ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ತಾವು ಆಚರಿಸುವ ಹಬ್ಬಗಳಿಂದ ತೊಡಗಿ, ಭಾಗವಹಿಸುವ ಕಾರ್ಯಕ್ರಮಗಳವರೆಗೂ ಶಿಲ್ಪಾ ಸಾಮಾಜಿಕ ಜಾಲತಾಣದಲ್ಲಿ ಚಿತ್ರಗಳನ್ನು ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ಅವರು ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಆ ಚಿತ್ರಗಳನ್ನು ಹಂಚಿಕೊಂಡು ಅಭಿಮಾನಿಗಳ ಹುಬ್ಬೇರಿಸಿದ್ದಾರೆ.

ಶಿಲ್ಪಾ ಅವರ ಪತಿ ರಾಜ್ ಕುಂದ್ರಾ ಬಂಧನವಾದಾಗ ಕೆಲ ಕಾಲ ಶಿಲ್ಪಾ ಹೊರಗೆಲ್ಲೂ ಕಾಣಿಸಿಕೊಂಡಿರಲಿಲ್ಲ. ಆದರೆ ಕೆಲಕಾಲದ ನಂತರ ‘ಸೂಪರ್ ಡಾನ್ಸರ್ 4’ರ ನಿರ್ಣಾಯಕಿಯಾಗಿ ಮುಂದುವರೆಯಲು ನಿರ್ಧಾರ ಮಾಡಿದರು. ಇದರಿಂದ ಅವರು ಟೀಕಾಕಾರರ ಬಾಯಿ ಮುಚ್ಚಿಸಿದ್ದಲ್ಲದೇ ಪರಿಸ್ಥಿತಿಯನ್ನು ಬಹಳ ಧೈರ್ಯದಿಂದ ಎದುರಿಸಿದರು. ಇದೀಗ ‘ಸೂಪರ್ ಡಾನ್ಸರ್ 4’ ಶೋನ ಫಿನಾಲೆ ನಡೆದಿದೆ. ಆ ಕಾರ್ಯಕ್ರಮಕ್ಕೆ ಶಿಲ್ಪಾ ನೂತನ ಅವತಾರದಲ್ಲಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ.

ಶಿಲ್ಪಾ ಅವರು ಎಲ್ಲರ ಹುಬ್ಬೇರಿಸುವಂತೆ ‘ಮತ್ಸ್ಯಕನ್ಯೆ’ಯ ಉಡುಗೆಯಲ್ಲಿ ಮಿಂಚಿದ್ದಾರೆ. ಈ ಕುರಿತು ಇನ್ಸ್ಟಾಗ್ರಾಂನಲ್ಲಿ ಚಿತ್ರಗಳನ್ನು ಅವರು ಹಂಚಿಕೊಂಡಿದ್ದು, ಅದಕ್ಕೆ ‘ಸೆಲ್ಫ್ ಮೇಡ್ ಮತ್ಸ್ಯಕನ್ಯೆ’ ಎಂದು ಕ್ಯಾಪ್ಶನ್ ಕೂಡ ನೀಡಿದ್ದಾರೆ. ತಮ್ಮ ಉಡುಗೆಗೆ ಸರಿಹೊಂದುವಂತೆ ಕೇಶ ವಿನ್ಯಾಸ ಹಾಗೂ ಮೇಕಪ್ ಧರಿಸಿರುವ ಅವರು ಸಂಪೂರ್ಣ ಭಿನ್ನವಾಗಿ ಕಾಣುತ್ತಿದ್ದಾರೆ. ಸದ್ಯ ಶಿಲ್ಪಾ ಅವರ ಹೊಸ ಲುಕ್ ವೈರಲ್ ಆಗಿದ್ದು, ಅಭಿಮಾನಿಗಳು ಮೆಚ್ಚುಗೆ ಸೂಚಿಸಿ ಕಾಮೆಂಟ್ ಮಾಡುತ್ತಿದ್ದಾರೆ.

ಶಿಲ್ಪಾ ಹಂಚಿಕೊಂಡ ಪೋಸ್ಟ್​​ಗಳು:

View this post on Instagram

A post shared by Harshal Naik (@harshalds)

ಚಿತ್ರಗಳ ವಿಷಯಕ್ಕೆ ಬಂದರೆ ಶಿಲ್ಪಾ ಕೊನೆಯದಾಗಿ ಕಾಣಿಸಿಕೊಂಡಿದ್ದು, ‘ಹಂಗಾಮ 2’ ಚಿತ್ರದಲ್ಲಿ. ಖ್ಯಾತ ನಿರ್ದೇಶಕ ಪ್ರಿಯದರ್ಶನ್ ನಿರ್ದೇಶನದ ಈ ಚಿತ್ರ ನೇರವಾಗಿ ಒಟಿಟಿಯಲ್ಲಿ ಬಿಡುಗಡೆಯಾಗಿತ್ತು. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ಇದನ್ನೂ ಓದಿ:

ಶಿಲ್ಪಾ ಶೆಟ್ಟಿ ಮನೆಯಲ್ಲಿ ನವರಾತ್ರಿ ವೈಭವ; ಮಕ್ಕಳಿಗೆ ಕಲಿಸುತ್ತಿರುವ ಪಾಠ ಎಂಥದ್ದು?

‘ಹೃದಯದಿಂದ ನಾವು ಯಾವಾಗಲೂ ಉತ್ತಮ ಗೆಳೆಯರಾಗಿರುತ್ತೇವೆ’; ಇದು ಶಿಲ್ಪಾ ಶೆಟ್ಟಿಯ ಮಾತು

‘ಚಿತ್ರರಂಗದಲ್ಲಿ ನೆಪೋಟಿಸಂಗಿಂತಲೂ ಈ ಸಮಸ್ಯೆ ಬಹಳ ಅಪಾಯಕಾರಿ’; ಮುಕ್ತವಾಗಿ ಹೇಳಿಕೊಂಡ ನವಾಜುದ್ದೀನ್ ಸಿದ್ದಿಕಿ

Published On - 4:34 pm, Tue, 12 October 21

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್