ಶಿಲ್ಪಾ ಶೆಟ್ಟಿ ಮನೆಯಲ್ಲಿ ನವರಾತ್ರಿ ವೈಭವ; ಮಕ್ಕಳಿಗೆ ಕಲಿಸುತ್ತಿರುವ ಪಾಠ ಎಂಥದ್ದು?

ಈಗ ಎಲ್ಲೆಲ್ಲೂ ನವರಾತ್ರಿ ಹಬ್ಬದ ಸಂಭ್ರಮ. ಶಿಲ್ಪಾ ಶೆಟ್ಟಿ ಕುಟುಂಬದಲ್ಲೂ ಹಬ್ಬದ ವಾತಾವರಣ ಮನೆ ಮಾಡಿದೆ. ಮಕ್ಕಳ ಜೊತೆ ಸೇರಿ ಅವರು ಸಡಗರದಿಂದ ಹಬ್ಬ ಆಚರಿಸಿದ್ದಾರೆ.

ಶಿಲ್ಪಾ ಶೆಟ್ಟಿ ಮನೆಯಲ್ಲಿ ನವರಾತ್ರಿ ವೈಭವ; ಮಕ್ಕಳಿಗೆ ಕಲಿಸುತ್ತಿರುವ ಪಾಠ ಎಂಥದ್ದು?
ಶಿಲ್ಪಾ ಶೆಟ್ಟಿ ಮನೆಯಲ್ಲಿ ನವರಾತ್ರಿ ಪೂಜೆ

ನಟಿ ಶಿಲ್ಪಾ ಶೆಟ್ಟಿ ಈಗ ಖುಷಿಯ ಮೂಡ್​ನಲ್ಲಿದ್ದಾರೆ. ಮಕ್ಕಳ ಜೊತೆ ಹಾಯಾಗಿ ನವರಾತ್ರಿ ಹಬ್ಬ ಆಚರಣೆ ಮಾಡುತ್ತಿದ್ದಾರೆ. ಆದರೆ ಕೆಲವೇ ದಿನಗಳ ಹಿಂದೆ ಅವರ ಪರಿಸ್ಥಿತಿ ಹೀಗೆ ಇರಲಿಲ್ಲ. ಅವರ ಗಂಡ ರಾಜ್​ ಕುಂದ್ರಾ ಅವರು ನೀಲಿ ಚಿತ್ರಗಳ ನಿರ್ಮಾಣದ ಆರೋಪದ ಮೇಲೆ ಜೈಲು ಸೇರಿದ್ದರು. ಆಗ ಶಿಲ್ಪಾ ಶೆಟ್ಟಿ ಸಾರ್ವಜನಿಕವಾಗಿ ಮುಖ ತೋರಿಸಲು ಹಿಂದೇಟು ಹಾಕುತ್ತಿದ್ದರು. ಎಷ್ಟೋ ದಿನಗಳ ಕಾಲ ಅವರು ಮನೆಯಿಂದ ಹೊರ ಬಂದಿರಲಿಲ್ಲ. ಆದರೆ ಈಗ ಅವರು ಹಳೇ ಹುಮ್ಮಸ್ಸಿನೊಂದಿಗೆ ಮತ್ತೆ ಜೀವನೋತ್ಸಾಹ ಪಡೆದುಕೊಂಡಿದ್ದಾರೆ.

ಈಗ ಎಲ್ಲೆಲ್ಲೂ ನವರಾತ್ರಿ ಹಬ್ಬದ ಸಂಭ್ರಮ. ಶಿಲ್ಪಾ ಶೆಟ್ಟಿ ಕುಟುಂಬದಲ್ಲೂ ಹಬ್ಬದ ವಾತಾವರಣ ಮನೆ ಮಾಡಿದೆ. ಮಕ್ಕಳ ಜೊತೆ ಸೇರಿ ಅವರು ಸಡಗರದಿಂದ ಹಬ್ಬ ಆಚರಿಸಿದ್ದಾರೆ. ದೇವರಿಗೆ ವಿಶೇಷ ಅಲಂಕಾರ, ನೈವೇದ್ಯ ಮಾಡಿ, ಭಕ್ತಿಯಿಂದ ಪೂಜೆ ನೆರವೇರಿಸಿದ್ದಾರೆ. ಈ ಸಂದರ್ಭದ ವಿಡಿಯೋವನ್ನು ಕೂಡ ಶಿಲ್ಪಾ ಶೆಟ್ಟಿ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆದರೆ ಈ ವಿಡಿಯೋದಲ್ಲಿ ರಾಜ್​ ಕುಂದ್ರಾ ಮಿಸ್ಸಿಂಗ್​!

‘ಕೆಲವು ವಿಚಾರಗಳನ್ನು ನಾವು ಆಚರಿಸದ ಹೊರತು ನಮ್ಮ ಮುಂದಿನ ತಲೆಮಾರಿನವರಿಗೆ ಅವುಗಳನ್ನು ದಾಟಿಸಲು ಸಾಧ್ಯವಿಲ್ಲ. ನಮ್ಮ ತಂದೆ-ತಾಯಿ ನಮ್ಮನ್ನು ಬೆಳೆಸಿದ ರೀತಿಯಲ್ಲೇ ಮೌಲ್ಯ ಮತ್ತು ಸಂಪ್ರದಾಯದೊಂದಿಗೆ ನಮ್ಮ ಮಕ್ಕಳು ಕೂಡ ಬೆಳೆಯಬೇಕು ಎಂಬುದು ನನಗೆ ತುಂಬ ಮುಖ್ಯ. ನನ್ನ ಇಬ್ಬರು ಮಕ್ಕಳಲ್ಲೂ ನಂಬಿಕೆಯ ಬೀಜ ಬಿತ್ತುತ್ತಿದ್ದೇನೆ. ನಾನು ಬೆಳೆದಂತೆಲ್ಲ ನಮ್ಮಲ್ಲಿರುವ ನಂಬಿಕೆ ಇನ್ನೂ ಗಟ್ಟಿಯಾಗಿ ಮತ್ತು ಆಳವಾಗಿ ನಮ್ಮೊಳಗೆ ಬೇರೂರುತ್ತದೆ’ ಎಂದು ಶಿಲ್ಪಾ ಶೆಟ್ಟಿ ಬರೆದುಕೊಂಡಿದ್ದಾರೆ.

ಶಿಲ್ಪಾ ಶೆಟ್ಟಿ ಪತಿ ರಾಜ್​ ಕುಂದ್ರಾ ಸದ್ಯ ಜಾಮೀನು ಪಡೆದು ಹೊರಗೆ ಬಂದಿದ್ದಾರೆ. ಒಂದಷ್ಟು ದಿನಗಳ ಕಾಲ ಜೈಲುವಾಸ ಅನುಭವಿಸಿ ಬಂದ ಅವರು ಈಗ ಯಾರ ಕಣ್ಣಿಗೂ ಕಾಣಿಸಿಕೊಳ್ಳುತ್ತಿಲ್ಲ. ಅಂತಿಮವಾಗಿ ಕೋರ್ಟ್​ ಯಾವ ರೀತಿ ತೀರ್ಪು ನೀಡಬಹುದು ಎಂಬ ಕೌತುಕ ಮನೆ ಮಾಡಿದೆ. ಶೆರ್ಲಿನ್​ ಚೋಪ್ರಾ, ಗೆಹನಾ ವಸಿಷ್ಠ್​ ಮುಂತಾದ ನಟಿಯರು ಕೂಡ ಅಶ್ಲೀಲ ಸಿನಿಮಾ ದಂಧೆಯಲ್ಲಿ ಭಾಗಿಯಾಗಿದ್ದರು ಎಂಬ ಆರೋಪ ಇದೆ.

ಇದನ್ನೂ ಓದಿ:

‘ಅಶ್ಲೀಲ ಸಿನಿಮಾ ಜಗತ್ತಿನಿಂದ ಹೊರಬನ್ನಿ, ನಿಮಗೆ ಜನ ನಮಸ್ಕಾರ ಮಾಡ್ತಾರೆ’; ಶಿಲ್ಪಾ ಶೆಟ್ಟಿಗೆ ಕುಟುಕಿದ ಶೆರ್ಲಿನ್​ ಚೋಪ್ರಾ

ರಾಜ್​ ಕುಂದ್ರಾ ಜಾಮೀನು ಸುದ್ದಿ ಕೇಳಿ ಶಿಲ್ಪಾ ಶೆಟ್ಟಿಗೆ ಖುಷಿಯೋ ದುಃಖವೋ? ಹೀಗಿತ್ತು ನೋಡಿ ಮೊದಲ ಪ್ರತಿಕ್ರಿಯೆ

Read Full Article

Click on your DTH Provider to Add TV9 Kannada