Dharmendra: ನಟ ಧರ್ಮೇಂದ್ರ 1960ರಲ್ಲಿ ತಮ್ಮ ಮೊದಲ ಕಾರನ್ನು ಕೇವಲ ಇಷ್ಟು ಹಣ ನೀಡಿ ಖರೀದಿಸಿದ್ದರು; ಅಚ್ಚರಿಯ ಮಾಹಿತಿ ಇಲ್ಲಿದೆ
Bollywood: ಬಾಲಿವುಡ್ನ ಹಿರಿಯ ನಟ ಧರ್ಮೇಂದ್ರ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮೊದಲ ಕಾರಿನ ಕುರಿತ ಪ್ರೀತಿಯನ್ನು ಹಂಚಿಕೊಂಡಿದ್ದಾರೆ. ಇದೇ ವೇಳೆ ಅವರು ಆ ಕಾರನ್ನು ಕೊಳ್ಳುವಾಗ ಎಷ್ಟು ಹಣ ನೀಡಲಾಗಿತ್ತು ಎಂಬ ಅಚ್ಚರಿಯ ಮಾಹಿತಿಯನ್ನೂ ಬಹಿರಂಗಪಡಿಸಿದ್ದಾರೆ.
ಬಾಲಿವುಡ್ನ ಖ್ಯಾತ ಹಿರಿಯ ನಟ ಧರ್ಮೇಂದ್ರ ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಆಕ್ಟಿವ್ ಇರುತ್ತಾರೆ. ಆ ಮೂಲಕ ಅಭಿಮಾನಿಗಳೊಂದಿಗೆ ಅವರು ಸತತವಾಗಿ ಸಂಪರ್ಕದಲ್ಲಿರುತ್ತಾರೆ. ಹಳೆಯ ಕಾಲದ ಮಧುರ ನೆನಪುಗಳು, ಚಿತ್ರಗಳನ್ನು ಹಂಚಿಕೊಳ್ಳುತ್ತಾ ಅಭಿಮಾನಿಗಳಿಗೆ ಅಂದಿನ ದಿನಗಳ ನೆನಪನ್ನು ಮಾಡುತ್ತಾ ಇರುತ್ತಾರೆ. ತಮ್ಮ ಸೌಜನ್ಯಯುತ ವ್ಯಕ್ತಿತ್ವದಿಂದ, ನಗುವಿನಿಂದ ಅವರು ಮಾತನಾಡುವುದನ್ನು ನೋಡುವುದೇ ಕಣ್ಣಿಗೆ ಹಬ್ಬ ಎಂದು ಅಭಿಮಾನಿಗಳೂ ತಮ್ಮ ನೆಚ್ಚಿನ ನಟನಿಗೆ ಭೇಷ್ ಅನ್ನುತ್ತಿರುತ್ತಾರೆ. ಇತ್ತೀಚೆಗೆ ಧರ್ಮೇಂದ್ರ ಹಂಚಿಕೊಂಡ ಅವರ ಮೊದಲ ಕಾರಿನ ಕುರಿತಾದ ಪೋಸ್ಟ್ ಸಖತ್ ಸುದ್ದಿಯಾಗಿದ್ದು, ಎಲ್ಲರ ಗಮನ ಸೆಳೆದಿದೆ.
ತಮ್ಮ ಮೊದಲ ಕಾರನ್ನು ಧರ್ಮೇಂದ್ರ. ‘ಪ್ರೀತಿಯ ಮಗು’ ಎಂದು ಕರೆದಿದ್ದಾರೆ. ಆ ಕಾರನ್ನು ಕೊಂಡ ಹಿಂದಿನ ಕತೆಯನ್ನೂ ಅವರು ವಿಡಿಯೋ ಮುಖಾಂತರ ತಿಳಿಸಿದ್ದಾರೆ. ಅದರಲ್ಲಿ ಅವರು ತಮ್ಮ ಮೊದಲ ಕಾರು ಫಿಯಟ್ ಕೊಂಡಾಗ ಅದರ ಬೆಲೆ ₹ 18,000 ಇತ್ತು. ಆದರೆ ಈಗ ಅದು ಬಹಳ ಚಿಕ್ಕ ಮೊತ್ತವಾಗಿ ಕಾಣಬಹುದು. ಆಗ ಬಹಳ ದೊಡ್ಡ ಮೊತ್ತವದು ಎಂದು ಬರೆದುಕೊಂಡಿದ್ದಾರೆ. ಇಷ್ಟೇ ಅಲ್ಲದೇ ಅವರು ‘ಇದನ್ನು ಈವರೆಗೂ ಜೋಪಾನ ಮಾಡಿದ್ದೇನೆ. ಚೆನ್ನಾಗಿದೆ ಅಲ್ಲವೇ? ಇದು ನನ್ನೊಂದಿಗೆ ಎಂದೆಂದಿಗೂ ಇರುವಂತೆ ಪ್ರಾರ್ಥಿಸಿ’ ಎಂದು ಬರೆದುಕೊಂಡಿದ್ದಾರೆ.
ಈ ಪೋಸ್ಟ್ನೊಂದಿಗೆ ಅವರು ಸಣ್ಣ ವಿಡಿಯೋ ತುಣುಕೊಂದನ್ನೂ ಹಂಚಿಕೊಂಡಿದ್ದು, ಅದರಲ್ಲಿ ಅವರು ತಮ್ಮ ನೆಚ್ಚಿನ ಕಾರಿನೊಂದಿಗೆ ನಿಂತುಕೊಂಡಿದ್ದಾರೆ. 1960ರ ಕಾಲಘಟ್ಟದಲ್ಲಿ ಕಷ್ಟಪಡುತ್ತಿದ್ದ ತನಗೆ ದೇವರು ನೀಡಿದ ಅತಿದೊಡ್ಡ ಉಡುಗೊರೆ ಎಂದೂ ಅವರ ಈ ಕಾರಿನ ಕುರಿತಾಗಿ ಹೇಳಿಕೊಂಡಿದ್ದಾರೆ.
ಧರ್ಮೇಂದ್ರ ಹಂಚಿಕೊಂಡ ಪೋಸ್ಟ್ ಇಲ್ಲಿದೆ:
View this post on Instagram
ಧರ್ಮೇಂದ್ರ ಅವರು ತಮ್ಮ ಕಾರಿನ ಕುರಿತು ಹಂಚಿಕೊಂಡ ಪೋಸ್ಟ್ಗೆ ಅವರ ಪುತ್ರಬಾಬ್ಬಿ ಡಿಯೋಲ್ ಸೇರಿದಂತೆ ಅಪಾರ ಅಭಿಮಾನಿ ಬಳಗ ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದೆ. ಈ ಪಟ್ಟಿಯಲ್ಲಿ ನಟರಾದ ನೀಲ್ ನಿತಿನ್ ಮುಖೇಶ್, ಮನಿಶೇಷ್ ಪೌಲ್ ಕೂಡ ಸೇರಿದ್ದಾರೆ. ಧರ್ಮೇಂದ್ರ ಅವರು ಪ್ರಸ್ತುತ ‘ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಕರಣ್ ಜೋಹರ್ ನಿರ್ದೇಶಿಸುತ್ತಿದ್ದು, ರಣವೀರ್ ಸಿಂಗ್ ಹಾಗೂ ಆಲಿಯಾ ಭಟ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತಾನು ಶೂಟಿಂಗನ್ನು ಎಂಜಾಯ್ ಮಾಡುತ್ತಿರುವುದಾಗಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸಂತಸ ಹಂಚಿಕೊಂಡಿದ್ದರು.
ಇದನ್ನೂ ಓದಿ:
‘ನಾನು ಕರ್ನಾಟಕ ಬಿಟ್ಟು ಹೋಗಲ್ಲ; ಇಲ್ಲಿನ ಜನರಿಗೆ ನನ್ನ ಕೃತಜ್ಞತೆ’: ನಟಿ ವಿಜಯಲಕ್ಷ್ಮೀ
ಹೃದಯಾಘಾತದಿಂದ ಜ್ಯೂ. ಎನ್ಟಿಆರ್ ಆಪ್ತ ನಿರ್ಮಾಪಕ ಮಹೇಶ್ ಎಸ್. ಕೊನೆರು ನಿಧನ
ಸ್ಟಾರ್ ಚಿತ್ರಗಳ ಜೊತೆ ಡಾರ್ಲಿಂಗ್ ಕೃಷ್ಣ ಪೈಪೋಟಿ: ಅ.15ಕ್ಕೆ ಶ್ರೀಕೃಷ್ಣ ಜಿಮೇಲ್ ಡಾಟ್ ಕಾಮ್ ಬಿಡುಗಡೆ
Published On - 1:26 pm, Tue, 12 October 21